ಮಕ್ಕಳ ದಿನಾಚರಣೆ: ಶಾಲೆಯಲ್ಲಿ ಮಕ್ಕಳ ಪ್ರತಿಜ್ಞೆ
Children's Day: Children's pledge at school
ಮಕ್ಕಳ ದಿನಾಚರಣೆ: ಶಾಲೆಯಲ್ಲಿ ಮಕ್ಕಳ ಪ್ರತಿಜ್ಞೆ
ಸವಣೂರು 15: ತಾಲೂಕಿನ ಯಲವಿಗಿ ತಾಂಡಾ(ಪರಮವಾಡಿ)ದ ಸ.ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಶಾಲಾ ಸಂಸತ್‌ನ ಪ್ರಧಾನಮಂತ್ರಿ ದಿವ್ಯಾ.ಶೇ.ಲಮಾಣಿ ಈ ವರ್ಷ ನಮ್ಮ ದಿನಾಚರಣೆಯನ್ನು ಶಾಲಾ ಅಧ್ಯಕ್ಷರು ,ಸದಸ್ಯರು, ಎಲ್ಲ ಗುರುಗಳು -ಗುರುಮಾತೆಯರು, ನಮ್ಮ ಪಾಲಕರು ಸೇರಿ ಆಚರಿಸಿದ್ದು ಬಹಳ ವಿಶೇಷವಾಗಿತ್ತು. ಇದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಿತ್ತು. ಶಾಲಾ ಸಂಸತ್ತಿನ ಎಲ್ಲ ಮಂತ್ರಿಗಳು ಮುಂದಿನ ವೇದಿಕೆಯಲ್ಲಿ ಹಿಂದಿನ ಸಾಲಿನಲ್ಲಿ ಉಳಿದ ಎಲ್ಲ ಗಣ್ಯರು, ಪಾಲಕರು ಕುಳಿತುಕೊಂಡಿದ್ದು ನಮಗೆ ಏನೋ ಒಂದು ತರ ಹೊಸತನ, ನನಗೆ ಆ ಸಂಭ್ರವನ್ನು ಹೇಗೆ ಹಂಚಿಕೊಳ್ಳಬೇಕೆಂಬುದು ತಿಳಿಯದಾಗಿದೆ. ನೆಹರು ರವರು ತಂದೆಯ ಕಳ್ಳತನ ಮಾಡಿ,ನಂತರ ಪಶ್ಚಾತ್ತಾಪ ಪಟ್ಟು, ಹೇಗೆ ಅವರು ಅರಿತು ಬದಲಾಗಿ ಉನ್ನತ ಸ್ಥಾನ ಏರಿದರೋ, ಹಾಗೆಯೇ ನಾವು ಇನ್ನು ಮೊಬೈಲ್ ಮುಟ್ಟೋದಿಲ್ಲ, ಟಿವಿ ನೋಡೋದು ಪೂರ್ತಿ ಕಡಿಮೆ ಮಾಡುತ್ತೇವೆಂದು ಎಲ್ಲರ ಮುಂದೆ ಪ್ರತಿಜ್ಞೆ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷ ಕುಮಾರ ನಾಯಕ,ಉಪಾಧ್ಯಕ್ಷೆ ಸೀತವ್ವ ಲಮಾಣಿ,ಪ್ರ.ಗು.ಎಸ್.ಎನ್.ಶಿಡೇನೂರ, ಶಾಲಾ ಸದಸ್ಯರಾದ ಸುನಿತಾ.ಬಡ್ನಿ,ಗಣೇಶ,ಸರೋಜಾ,ಪ್ರೇಮಾ,ನಾಗೇಶ,ಸದಾನಂದ,ಪುಟ್ಟಪ್ಪ ,ಸುರೇಶ,ವಸಂತ,ಫಾಜಿಲ್ ಅಹ್ಮದ, ಮಾಂತೇಶ,ಅಡುಗೆ ಸಿಬ್ಬಂದಿ ಮತ್ತು ಮಕ್ಕಳು ಹಾಜರಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 