ಓರ್ವ ಬಾಲ ಕಾರ್ಮಿಕ ಪತ್ತೆ : ಮಾಲೀಕನಿಗೆ ನೋಟೀಸ್ ಜಾರಿ

ಓರ್ವ ಬಾಲ ಕಾರ್ಮಿಕ ಪತ್ತೆ : ಮಾಲೀಕನಿಗೆ ನೋಟೀಸ್ ಜಾರಿ Child laborer found: Notice issued to owner

ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳ ತಪಾಸಣೆ 

ಹಾವೇರಿ 15 :  ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಂಗವಾಗಿ ಹಾನಗಲ್ ತಾಲೂಕಿನಲ್ಲಿ ವಿವಿಧ ಗ್ಯಾರೇಜ್, ವಾಣಿಜ್ಯ ಅಂಗಡಿಗಳಲ್ಲಿ ಕಾರ್ಮಿಕ ನೀರೀಕ್ಷಕರ ನೇತೃತ್ವದಲ್ಲಿ ಮಂಗಳವಾರ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳ ತಪಾಸಣೆ ಕಾರ್ಯ ನಡೆಸಿ, ಓರ್ವ ಬಾಲ ಕಾರ್ಮಿಕನನ್ನು ರಕ್ಷಣೆ  ಮಾಡಿ, ನೇರವಾಗಿ ಶಾಲೆಗೆ ಸೇರಿಸಲಾಯಿತು. 

ಮಗುವನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲೀಕನಿಗೆ ಸ್ಥಳದಲ್ಲೇ ನೋಟೀಸ್ ಜಾರಿ ಮಾಡಲಾಯಿತು ಹಾಗೂ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಹಾಗೂ ಬಾಲ ಕಾರ್ಮಿಕ ನಿಷೇಧ ಕಾಯ್ದೆ ಕುರಿತು ಜಾಗೃತಿ ಮೂಡಿಸಲಾಯಿತು.  

ಈ ಸಂದರ್ಭದಲ್ಲಿ  ಹಾನಗಲ್ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ, ಕಾರ್ಮಿಕ ನೀರೀಕ್ಷಕ ದೇವೇಂದ್ರ ನಾಟೀಕಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀಮತಿ ಗಂಗಮ್ಮ ಹಿರೇಮಠ, ಶಾಲಾ ಶಿಕ್ಷಣ ಇಲಾಖೆಯ ಬಿ.ಎನ್‌.ಸಂಗೂರ, ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ., ಪೊಲೀಸ್ ಇಲಾಖೆಯ ಕರಬಸಪ್ಪ ಗೊಂದಿ,  ಜಿಲ್ಲಾ ಬಾಲ ಕಾರ್ಮಿಕಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ರಾಘವೇಂದ್ರ ಬ. ಶಿರೂರ, ಚೈಲ್ಡ್‌ ಲೈನ್‌ನ ಕಾಳಪ್ಪ ಕಮ್ಮಾರ ಇತರರು ಹಾಜರಿದ್ದರು.