ಅಂತರರಾಷ್ಟ್ರೀಯ ವಿಶ್ವ ರಂಗಭೂಮಿ ದಿನಾಚರಣೆ ಬಾಲಕಲಾವಿದ ಗೋಕುಲ ಸಹೃದಯನ ಅಭಿನಯ ಅತ್ಯದ್ಭುತ
Child artist Gokula Sahridayan's performance on International World Theatre Day was amazing
ಲೋಕದರ್ಶನ ವರದಿ
ಬೆಳಗಾವಿ 28: ಆಧುನಿಕ ತಂತ್ರಜ್ಞಾನ ಅಂದರೆ ಎ.ಐ. ರಂಗಭೂಮಿಗೆ ಮಾರಕವಾಗಿದೆ. ಆದಷ್ಟು ಕಲಾಕ್ಷೇತ್ರದಿಂದ ಅದನ್ನು ದೂರವಿಟ್ಟು ಈ ಕಲೆಯನ್ನು ಉಳಿಸಿಕೊಳ್ಳುವ ಪ್ರತಿಜ್ಞೆಯನ್ನು ಅಂತರರಾಷ್ಟ್ರೀಯ ವಿಶ್ವ ರಂಗಭೂಮಿಯ ದಿನದಂದು ಎಲ್ಲ ಕಲಾವಿದರು ಸೇರಿಕೊಂಡು ಮಾಡೋಣ. ಇಲ್ಲದಿದ್ದರೆ ನಾಟಕವನ್ನೂ ಎ.ಐ. ತಾನೇ ಮಾಡಬಹುದಾಂತಹ ಭಯದ ವಾತಾವರಣವಿಂದು ನಿರ್ಮಾಣವಾಗಿದೆ ಎಂದು ರಂಗಸಂಪದದ ಸಂಸ್ಥಾಪಕ ಶ್ರೀಪತಿ ಮಂಜನಬೈಲು ಇಂದಿಲ್ಲಿ ಹೇಳಿದರು.
ಬೆಳಗಾವಿಯ ರಂಗಸಂಪದ ತಂಡವು ವಿಶ್ವ ರಂಗಭೂಮಿ ದಿನಾಚರಣೆ, ರಂಗಸಖ 2026 ಪ್ರಶಸ್ತಿ ಪ್ರದಾನ, ವಿಶೇಷ ಗೌರವ ಸನ್ಮಾನ ಮತ್ತು ಮೂರು ದಿನದ ಚೈತ್ರ ನಾಟಕೋತ್ಸವದ ಉದ್ಘಾಟನೆ ಮತ್ತು ಕಾಜಾಣ ತಂಡದಿಂದ ‘ಪಂಚಗವ್ಯ’ ಏಕಪಾತ್ರಾಭಿನಯ ಯಶಸ್ವಿಯಾಗಿ ಅಚ್ಚುಕಟ್ಟಾಗಿ ನಿನ್ನೆ ಶುಕ್ರವಾರ ದಿ. 27ರಂದು ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಜರುಗಿತು.
ರಂಗಕರ್ಮಿ ಮಂಜನಬೈಲು ಅಭಿಪ್ರಾಯ ಪಟ್ಟರು. ಮುಂದೆ ಮಾತನಾಡುತ್ತ ಅವರು ಅಭಿಮಾನದ ಸಂಗತಿಯೆಂದರೆ ವೃತ್ತಿರಂಗಭೂಮಿ ಜನ್ಮ ತಳೆದದ್ದು ನಮ್ಮ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಲಸಗಿಯಲ್ಲಿ ‘ಹಲಸಗಿ ನಾಟಕ ಮಂಡಳಿ’ ಎಂಬ ಹೆಸರಿನಲ್ಲಿ ಪ್ರಾರಂಭಗೊಂಡಿತು. ವೆಂಕಣ್ಣಾಚಾರ್ಯ ಮತ್ತು ಪಾಂಗ್ರೀಶಾಚಾರ್ಯ ಇದರ ಸ್ಥಾಪಕರಾಗಿದ್ದರು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಪತ್ರಕರ್ತ ಡಾ. ಸರಜು ಕಾಟ್ಕರ್ ಅವರು ಮಾತನಾಡುತ್ತ ‘ಪಂಚಗವ್ಯ’ ಏಕಪಾತ್ರಾಭಿನಯದ ಬಾಲಕಲಾವಿದ ಗೋಕುಲ ಸಹೃದಯನ ಅಭಿನಯ ‘ಅದ್ಭುತ.. ಅದ್ಭುತ.. ಅತ್ಯದ್ಭುತ ಈ ಮೂರು ಶಬ್ಧಗಳನ್ನು ಬಿಟ್ಟು ಬೇರೇನು ನಾ ಹೇಳಲಾರೆ ಎಂದು ಪ್ರಶಂಸಿದರು.
ಪ್ರಹ್ಲಾದ, ದ್ರುವ, ನಚಿಕೇತ, ಅಷ್ಟಾವಕ್ರ, ಮತ್ತು ಬಾಲಶಂಕರಾಚಾರ್ಯ ಪೌರಾಣಿಕ ಪಾತ್ರಗಳಲ್ಲಿ ಕಾಣಿಸಿಕೊಂಡ ಬಾಲಕಲಾವಿದ ಗೋಕುಲ ಸಹೃದಯ ತುಂಬ ನೈಜವಾಗಿ ಅಭಿನಯಸಿದರು. ವಿಶೇಷವಾಗಿ ಬಾಲಶಂಕರಾಚಾರ್ಯ ಮತ್ತು ಅಷ್ಟಾವಕ್ರನ ಪಾತ್ರಗಳು ಪ್ರೇಕ್ಷಕರ ಮನ ಗೆದ್ದವು. ರಚನೆ, ನಿರ್ದೇಶನ, ಸಂಗೀತ ಡಾ. ಎಸ್.ಎಲ್.ಎನ್. ಸ್ವಾಮಿಯವರದಾಗಿತ್ತು.
ಭಾರತೀಯ ಜೀವ ವಿಮಾ ನಿಗಮದ ಮಾರುಕಟ್ಟೆ ವ್ಯವಸ್ಥಾಪಕ ಹರಿನಾಥ ಅವರು ಪ್ರಶಸ್ತಿ ಪ್ರದಾನ ಮಾಡಿ ರಂಗಸಂಪದ ಮತ್ತು ರಂಗಭೂಮಿಯ ಬಗ್ಗೆ ತಮ್ಮ ನಂಟು ಮತ್ತು ಆಸಕ್ತಿಯ ಬಗ್ಗೆ ಮಾತನಾಡಿದರು.
ನಟ, ನಿರ್ದೇಶಕ ವಿನಯ ಕುಲಕರ್ಣಿ ಅವರು ರಂಗಸಖ ಪ್ರಶಸ್ತಿ ಸ್ವೀಕರಿಸಿ ರಂಗಸಂಪದದ ಜೊತೆ ಅವರ ಒಡನಾಟ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದರು. ದೇವಪ್ಪ ನಾಯಕ ಮತ್ತು ರಾಜೇಂದ್ರ ಸೈಬಣ್ಣವರ ಅವರಿಗೆ ವಿಶೇಷ ಗೌರವ ಸನ್ಮಾನ ಮಾಡಲಾಯಿತು.
ಡಾ. ಅರವಿಂದ ಕುಲಕರ್ಣಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಸಾದ ಕಾರಜೋಳ ಸ್ವಾಗತಿಸಿದರು. ಪೂಜಾ ಕಾರಜೋಳಸ ಅವರು ಸಂದೇಶ ವಾಚನ ಮಾಡಿದರು. ಪದ್ಮಾ ಕುಲಕರ್ಣಿ ಅವರು ಪ್ರಶಸ್ತಿ ಪತ್ರ ವಾಚಿಸಿದರು. ಶರಣಯ್ಯ ಮತ್ತು ವೀನೀತಾ ಗೌರವ ಸನ್ಮಾನಿಸಿದವರ ಪರಿಚಯ ಮಾಡಿಕೊಟ್ಟರು. ಅಶೋಕ ಕುಲಕರ್ಣಿಯವರು ವಂದನಾರೆ್ಣ ಮಾಡಿದರು. ವೀಣಾ ಹೆಗಡೆ ನಿರೂಪಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 