ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ
Child Marriage Free India Campaign
ಕೊಪ್ಪಳ 27: ಕೊಪ್ಪಳ ಜಿಲ್ಲೆ ಒಂದು ವರ್ಷದೊಳಗೆ ಪೂರ್ತಿಯಾಗಿ ಬಾಲ್ಯ ವಿವಾಹ ಮುಕ್ತ ಜಿಲ್ಲೆ ಮಾಡುವ ಹಿ ಸ್ಪಂದನ ಸಂಸ್ಥೆ ಪ್ರತಿಜ್ಞೆ ಭಾರತ ಸರ್ಕಾರ ದೇಶವ್ಯಾಪಿ ಬಾಲ್ಯ ವಿವಾಹ ನಿರ್ಮೂಲನೆಗಾಗಿಯೇ ಕೈಗೊಂಡ 100 ದಿನಗಳ ತೀವ್ರ ಕಾರ್ಯಯೋಜನೆ ಹೊಸ ಸಂಭ್ರಮಕ್ಕೆ ದಾರಿಯಾಗಿದೆ. ( ಜೆ ಆರ್ ಸಿ) ಇದರ ಪ್ರೇರಣೆಯಿಂದ, ಸ್ಪಂದನ ಸಂಸ್ಥೆ ಎಲ್ಲಾ ಇಲಾಖೆಗಳು ಮತ್ತು ಸಹಯೋಗಿಗಳೊಂದಿಗೆ ಕೈ ಜೋಡಿಸಿ, ಕೊಪ್ಪಳ ಜಿಲ್ಲೆಯನ್ನು ಒಂದು ವರ್ಷದೊಳಗೆ ಬಾಲ್ಯ ವಿವಾಹ ಮುಕ್ತ ಜಿಲ್ಲೆ ಎಂದು ಘೋಷಿಸುವ ಗುರಿಯೊಂದಿಗೆ ಬದ್ಧವಾಗಿದೆ. ‘100 ದಿನಗಳ ತೀವ್ರ ಜಾಗೃತಿ ಅಭಿಯಾನ’, ‘ಬಾಲ್ಯ ವಿವಾಹ ಮುಕ್ತ ಭಾರತ’ ಅಭಿಯಾನದ ಒಂದು ವರ್ಷದ ಸಂಭ್ರಮಾಚರಣೆಯ ಅಂಗವಾಗಿ ದೇಶವ್ಯಾಪಿ ಆರಂಭವಾಗಿದ್ದು, ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು, ಮದುವೆಗಳು ನಡೆಯುವ ಧಾರ್ಮಿಕ ಕೇಂದ್ರಗಳು, ಮದುವೆ ಸಂಬಂಧಿತ ಸೇವಾ ಒದಗಿಸುವವರು, ಮತ್ತು ಕೊನೆಗೆ ಪಂಚಾಯತ್ ಹಾಗೂ ವಾರ್ಡು ಮಟ್ಟದಲ್ಲಿ ಜಾಗೃತಿಯನ್ನು ಕೇಂದ್ರವಾಗಿರಿಸಿದೆ. ಈ ನಿಟ್ಟಿನಲ್ಲಿ ಇಂದು ಕೊಪ್ಪಳದ ಮಹಿಳಾ ಪದವಿ ಕಾಲೇಜಿನಲ್ಲಿ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನದ ಕಾರ್ಯಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು .
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಶಂಕರ ಸುರಳ್ ಅವರು ಮಾತನಾಡುತ್ತ ಸ್ಪಂದನ ಸಂಸ್ಥೆಯು 30 ವರ್ಷದಿಂದ ದಲಿತರು ದಮನಿತರು ಆದಿವಾಸಿಗಳು ಬುಡಕಟ್ಟು ಮತ್ತು ಅಧಿಕಾರ ಹಿನರ ಧ್ವನಿಯಾಗಿ ಕೆಲಸ ಮಾಡುತ್ತಾ ಬಂದಿದೆ ಮುಖ್ಯವಾಗಿ ಮಕ್ಕಳ ಕ್ಷೇತ್ರದಲ್ಲಿ ಕಾನೂನು ಜಾಗೃತಿ ,ನೇರವಾಗಿ ಸಹಾಯ ಮತ್ತು ನ್ಯಾಯ ಸಿಗಬೇಕು.ಈ ನಿಟ್ಟಿನಲ್ಲಿ ಸಂಸ್ಥೆಯು ಕಾನೂನು ಹಸ್ತಕ್ಷೇಪ ಮಾಡುವಲ್ಲಿ ಪರಿಣಾಮಕಾರಿಯಾಗಿ ಇಲಾಖೆಯ ಜೊತೆಗೆ ಕಾರ್ಯನಿರ್ವಹಿಸುತ್ತಿದೆ ಮುಖ್ಯವಾಗಿ ತಕ್ಷಣಕ್ಕೆ ತುರ್ತಾಗಿ ಮಕ್ಕಳನ್ನು ರಕ್ಷಣೆ ಮಾಡಬೇಕು. ಈ ಉದ್ದೆಶದ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ಒಂದುವರೆ ವರ್ಷದಿಂದ ಕೆಲಸಮಾಡುತ್ತಾ ಬಂದಿದೆ ಎಂದು ಹೇಳಿದರು ,ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಾಮಾಜಿಕ ಕಾರ್ಯಕರ್ತರಾದ ಪ್ರತಿಭಾ ಕಾಶಿಮಠ ಅವರು ಮಾತನಾಡುತ್ತ ಎಲ್ಲ ಮಹಿಳೆಯರು ಸುರಕ್ಷಾತೀತವಾಗಿ ಜೀವನ ಮಾಡಬೇಕು. ಎಲ್ಲರಿಗೂ ಸಾಮಾಜಿಕ ಜವಾಬ್ದಾರಿ ಇರಬೇಕು. ಮಕ್ಕಳ ಮತ್ತು ಮಹಿಳೆಯರ ಘನತೆಯನ್ನು ಕಾಪಾಡಬೇಕು. ಇಂದು ಕುಟುಂಬಗಳು ಅಭದ್ರವಾಗಗಿವೆ. ನಮ್ಮ ಸಮಾಜ ಉತ್ತಮವಾಗಿರಬೇಕು.
ಆಗ ಮಾತ್ರ ಮಹಿಳೆಯರು ಮತ್ತು ಮಕ್ಕಳು ಸುರಕ್ಷಿವಾಗಿರುತ್ತಾರೆ. ನಮ್ಮ ದೇಹವನ್ನು ಸುರಕ್ಷಾವಾಗಿ ಇಟ್ಟುಕೊಳ್ಳಬೇಕು. ಕುಟುಂಬವನ್ನು ಮುನ್ನೆಡಸಬಲ್ಲ ಸಾಮರ್ಥ್ಯವಿದೆ. ಕುಟುಂಬದಲ್ಲಿ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಇರಿ. ಕಷ್ಟ ಸುಖ, ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಬಾಲ್ಯ ವಿವಾಹ ಮುಕ್ತ ಮಾಡುವಲ್ಲಿ ನಿಮ್ಮ ಪಾತ್ರ ಕೂಡ ಮುಖ್ಯ ಆದ್ದರಿಂದು ನಿವು ಕೂಡ ಇದನ್ನು ಗಮನದಲ್ಲಿ ಇಟ್ಟುಕೊಂಡು ಬಾಲ್ಯ ವಿವಾಹ ನಡೆಸುವ ಸಾದ್ಯತೆ ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098ಕ್ಕೆ ಕರೆಮಾಡುವ ಮೂಲಕ ಸಹಕರಿಸಿ ಎಂದು ಹೆಳಿದರು.ಪ್ರಶಾಂತ ರೆಡ್ಡಿ ಮಾತನಾಡುತ್ತ ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಜವಾಬ್ದಾರಿ ಎಲ್ಲರ ಮೇಲಿದೆ. ಕೊಪ್ಪಳದಲ್ಲಿ ಶೇ 27 ರಷ್ಟು ಬಾಲ್ಯ ವಿವಾಹಗಳು ಆಗಿವೆ. ಕೊಪ್ಪಳದಲ್ಲಿ 53 ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಲಾಗಿದೆ.ನಿಂಗಜ್ಜ ಸೋಂಪುರ್ ಅವರು ಮಾತನಾಡುತ್ತ ಮಹಿಳೆಯಾರು ನಾಲ್ಕು ಗೋಡೆಗಳ ನಡುವೆ ಇರಬಾರದು.
ಮೊಬೈಲ್ ನ್ನು ಹೆಚ್ಚು ಬಳಸಬಾರದು. ಪಠ್ಯಗಳನ್ನು ಮಾತ್ರ ಓದಬೇಕು ಈ ರೀತಿಯ ಕಾನೂನು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ ಹಿಂದಿನಿಂದಲು ಸ್ವಾತಂತ್ರ್ಯ ಪೂರ್ವದಿಂದ ಬಾಲ್ಯ ವಿವಾದ ವಿರುದ್ದು ಹೊರಾಟಗಳು ಆಗಿವೆ ಇಲ್ಲಿಯವರೆಗೆ ನಡೆಯುತ್ತಲೆ ಇವೆ ಎಲ್ಲರೂ ಕೈ ಜೊಡಿಸಿದಾಗ ಮಾತ್ರ ತಡೆಯಲು ಸಾದ್ಯ ಎಂದು ಹೇಳಿದರು.ಈ ಒಂದು ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹದ ಕುರಿತು ಅಶ್ವಿನಿ ವಿದ್ಯಾರ್ಥಿನಿ ಪ್ರತಿಜ್ಞಾ ವಿಧಿ ಬೊದಿಸಿದರು.ಪ್ರಭಾರಿ ಪ್ರಾಚಾರ್ಯರಾದ ಶ್ರೀ ಮತಿ ನಾಗರತ್ನ ತಮ್ಮಿನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದರು. ಕಾಲೇಜಿನ ಉಪನ್ಯಾಸಕರಾದ ಡಾ. ಅಶೋಕ ಕುಮಾರ, ಡಾ. ನರಸಿಂಹ, ಉಮೇಶ್ ಕಾತಾರಾಕಿ, ನಿಂಗಜ್ಜ ಸೋಂಪುರ್ ಹಾಗೂ ಇತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಡಾ. ನರಸಿಂಹ ನಿರೂಪಿಸಿ ಸ್ವಾಗತಿಸಿದರು, ಸುಮಿತ್ರಾ ಪ್ರಾರ್ಥನೆ ಗೀತೆ ಹಾಡಿದರು. ಶಂಕರ್ ಸುರಳ್ ವಂದಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 