ತಂಬಾಕು ಉತ್ಪಾದನೆಗೆ ಚಿಕ್ಕೋಡಿ-ನಿಪ್ಪಾಣಿ ಹೆಸರುವಾಸಿ
Chikkodi-Nippani is famous for tobacco production.
ತಂಬಾಕು ಉತ್ಪಾದನೆಗೆ ಚಿಕ್ಕೋಡಿ-ನಿಪ್ಪಾಣಿ ಹೆಸರುವಾಸಿ
ಮಾಂಜರಿ, 29 ; ಉತ್ಕ್ರಷ್ಟ ದರ್ಜೆಯ ತಂಬಾಕು ಉತ್ಪಾದನೆಗೆ ಚಿಕ್ಕೋಡಿ-ನಿಪ್ಪಾಣಿ ತಾಲೂಕುಗಳು ಹೆಸರುವಾಸಿ. ಪ್ರತಿ ವರ್ಷದಂತೆ ಈ ವರ್ಷವು ತಂಬಾಕು ಉತ್ಪದನೆಗೆ ಸಜ್ಜಾಗಿದ್ದರು, ಆದರೆ ಪ್ರಸಕ್ತ ಸಾಲಿನಲ್ಲಿ ಮಳೆ ಅಡ್ಡಿಯಾಗಿದ್ದರಿಂದ ನಾಟಿ ಕಾರ್ಯ 15 ದಿನಗಳ ಕಾಲ ವಿಳಂಬವಾಗಿದ್ದು, 4-5 ದಿನಗಳಿಂದ ಮಳೆ ವಿಶ್ರಾಂತಿ ಪಡೆದಿದ್ದರಿಂದ ಗಡಿ ಭಾಗದ ಚಿಕ್ಕೋಡಿ-ನಿಪ್ಪಾಣಿ ತಾಲೂಕಿನ ಆಯ್ದ ಗ್ರಾಮಗಳಲ್ಲಿ ನಾಟಿಕಾರ್ಯ ಚುರುಕುಗೊಂಡಿದೆ.
ಸಾಮಾನ್ಯವಾಗಿ ಅಗಷ್ಟ ಮೊದಲನೇ ವಾರದಿಂದ ಕೊನೆಯವಾರದ ರವರೆಗೆ ತಂಬಾಕು ನಾಟಿ ಮಾಡುವ ರೂಡಿಯಿದೆ ಆದರೆ ಪ್ರಸಕ್ತ ಸಾಲಿನಲ್ಲಿ ಮೆಲೀಂದ ಮೇಲೆ ಜಿಟಿ-ಜಿಟಿ ಮಳೆಯಿಂದಾಗಿ ಹೊಲಗಳು ಹಸಿಯಾಗಿ ಕಸ ಕಡ್ಡಿ ಬೆಳೆದಿದ್ದರಿಂದ ನಾಟಿ ಪ್ರಾರಂಭಿಸಲು ಎರಡುವಾರಗಳ ಕಾಲ ಬೇಕಾಯಿತು.
ಪ್ರಸಕ್ತ ವರ್ಷ ತಂಬಾಕು ಉತ್ಪಾದನೆ ಸುಮಾರು ಚಿಕ್ಕೋಡಿ ತಾಲೂಕಿನಲ್ಲಿ 3000 ಹೇಕ್ಟರ ಮತ್ತು ನಿಪ್ಪಾಣಿ ತಾಲೂಕಿನಲ್ಲಿ 2400 ಹೀಗೆ ಒಟ್ಟು 5,400 ಹೆಕ್ಟರ ಉತ್ಪಾದನೆಯ ಗುರಿ ಕೃಷಿ ಇಲಾಖೆ ಹೋಂದಿದೆ, ಸಸಿಗಳು ಲಭ್ಯ ವಿರುವುದರಿಂದ ನಾಟಿ ಕಾರ್ಯದಲ್ಲಿ ಉತ್ಪಾದಕರು ನಿರತರಾಗಿದ್ದಾರೆ.
ಕಳೆದ ಸಾಲಿನಲ್ಲಿ ತಂಬಾಕು ಬೆಳೆಗೆ ವೈಜ್ಞಾನಿಕ ಬೇಲೆ ಸಿಕ್ಕಿದ್ದರಿಂದ ಈ ವರ್ಷವು ಸಿಗಬಹುದು ಎಂಬ ಆಶೆ ಉತ್ಪಾದಕರದ್ದಾಗಿದೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಅಕ್ಕೋಳ, ಗಳತಗಾ, ಭೋಜ, ಖಡಕಲಾಟ, ಮಮದಾಪೂರ, ಹುನ್ನರಗಿ, ಸಿದ್ನಾಳ, ಕೊನ್ನುರ, ಬೇಡಕಿಹಾಳ, ಶಮನೇವಾಡಿ, ಸದಲಗಾ, ನಣದಿವಾಡಿ, ನಾಯಿಂಗ್ಲಜ, ನವಲಿಹಾಳ, ಕೋಥಳಿ-ಕುಪ್ಪಾನವಾಡಿ, ಕುಠಾಳಿ, ಸಂಕನವಾಡಿ, ಚಿಕ್ಕಲವಾಳ, ಶಿವಾಪೂರವಾಡಿ, ರಾಂಪೂರ, ಕೋಡ್ನಿ, ಶೇಂಡೂರ ಗ್ರಾಮದಲ್ಲಿ ಹೇಚ್ಚಿನ ಪ್ರಮಾಣದಲ್ಲಿ ರೈತರು ತಂಬಾಕು ಬೆಳೆಯುತ್ತಾರೆ.
ನಮ್ಮ ಹೊಲಗಳಲ್ಲಿ ಅನಾದಿಕಾಲದಿಂದಲೂ ತಂಬಾಕನ್ನೆ ಬೆಳೆಸುತ್ತಾ ಬಂದಿದ್ದು, ತಂಬಾಕು ಬಿಟ್ಟರೆ ಬೆರೆ ಬೆಳೆ ಬೆಳೆಯುವುದಿಲ್ಲಾ ನಮಗೆ ತಂಬಾಕು ಬೆಳೆಯೆ ಅನಿವಾರ್ಯ ವಾಗಿದ್ದು, ಕಳೆದ ಸಾಲಿನಂತೆ ತಂಬಾಕಿಗೆ ವೈಜ್ಞಾನಿಕ ಬೆಲೆ ಸಿಕ್ಕರೆ ಸಾಕು ಎನ್ನುತ್ತಾರೆ ತಂಬಾಕು ಉತ್ಪಾದಕರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 