ಚಿಕ್ಕಸಂಗಮ ಸಂಗಮನಾಥ ಮಹಾರಥೋತ್ಸವ
Chikkasangama Sangamanath Maharatthasabha
ಲೋಕದರ್ಶನ ವರದಿ
ಬೀಳಗಿ 31 : ತಾಲೂಕಿನ ಚಿಕ್ಕ ಸಂಗಮ ಸಂಗಮೇಶ್ವರ ಜಾತ್ರಾ ಮಹೋತ್ಸವವು ನಿಮಿತ್ಯವಾಗಿ ಏ.2ರಂದು ಸಂಗಮನಾಥನಿಗೆ ಪ್ರಾಂಥಕಾಲ ಬ್ರಾಹ್ಮೀ ಮುಹೂತದಲ್ಲಿ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಹೋಮ ಹವನ, ಮಹಾಮಂಗಳಾರತಿ ನಡೆಯುವುದು. ಸಂಜೆ 5ಗಂಟೆಗೆ ಕಳಸದ ಮೆರುವಣಿಗೆ ಪ್ರಾರಂಭವಾಗುವುದು. 5.30ಕ್ಕೆ ಮಹಾರಥೋತ್ಸವ ಜರುಗಲಿದೆ. ಈಗಾಗಲೇ ವಿವಿಧ ದಾರ್ಮಿಕ ಆಚರಣೆಗಳು ನಡೆಯುತ್ತಿದ್ದು ಸಕಲ ಭಕ್ತ ಮಹಾಜನತೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳಬೇಕೆಂದು ದೇವಸ್ಥಾನ ಪ್ರಧಾನ ಅರ್ಚಕರಾದ ಸಿ.ಜಿ.ಪಾಟೀಲ್ ವಿನಂತಿಸಿದ್ದಾರೆ.
ಜಾತ್ರಾ ಮಹೋತ್ಸವ ನೇತ್ರತ್ವವನ್ನು ಗಿರಿಸಾಗರ ರುದ್ರಮುನಿ ಶಿವಾಚಾರ್ಯ ಸ್ವಾಮಿಜೀ, ಮುತ್ತತ್ತಿ ಗುರುಲಿಂಗ ಶಿವಾಚಾರ್ಯ ಸ್ವಾಮಿಜೀ, ಬಿಲ್ ಕೆರೂರ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಜೀ ವಹಿಸುವರು. ನಾಡಿನ ವಿವಿಧ ಭಾಗಗಳಿಂದ ಸಂಗಮನಾಥ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತರು ಪಾದಯಾತ್ರೆ ಎತ್ತಿನ ಬಂಡೆ, ಟ್ಯಾಕ್ಟರ್‌ಗಳು ಸೇರಿದಂತೆ ವಿವಿಧ ವಾಹನಗಳ ಮೂಲಕ ಅಪಾರ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಭಕ್ತಿಯ ಹರಕೆಯನ್ನು ಸಲ್ಲಿಸಿ ಕೃತಾರ್ಥರಾಗುತ್ತಾರೆ.
ಏ.2ರಂದು ಮುಂ.10ಗಂಟೆಯಿಂದ ಸಾಂ.4ರವರೆಗೆ ವಿಜಯಪೂರದ ಬಸವೇಶ್ವರ ಆಸ್ಪತೆದಿವರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದ್ದು ಇದರ ಸದುಪಯೋಗ ಪಡೆಸಿಕೊಳ್ಳಲು ಕರೆ ನೀಡಿದ್ದಾರೆ. ದಿ.3ರಂದು ಸಾಯಂಕಾಲ ಜಾನಮಟ್ಟಿ ಸದ್ಭಕ್ತರಿಂದ ದೀಪೋತ್ಸವ ಸೇವೆ ನಡೆಯುತ್ತದೆ. ದಿ.4ರಂದು ಕುಸ್ತಿ, ಕಡುಬಿನ ಕಾಳಗ ಪಂದ್ಯಗಳು ಜರುಗುವುದು. ದಿ.6ರಂದು ತೇರಿನ ಕಳಸ ಇಳಿಸುವುದರೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನವಾಗುವುದು ಎಂದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 