ಚಿಕ್ಕಬೇವನೂರ 2026-27 ನೇ ಸಾಲಿನಲ್ಲಿ ಶಾಲಾ ಸಂಸತ್ ರಚನೆ

ಚಿಕ್ಕಬೇವನೂರ 2026-27 ನೇ ಸಾಲಿನಲ್ಲಿ ಶಾಲಾ ಸಂಸತ್ ರಚನೆ Chikkabevanur School Parliament formed for the year 2026-27

ಲೋಕದರ್ಶನ ವರದಿ  

ಇಂಡಿ   25: ಎಚ್ ಪಿ ಎಸ್ ಚಿಕ್ಕಬೇವನೂರ ಶಾಲೆಯಲ್ಲಿ  2026-27 ನೇ ಸಾಲಿನ ಶಾಲಾ ಸಂಸತ್ತಿನ ಚುನಾವಣೆ ನಡೆಸಲಾಯಿತು.ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸಲು ಮತ್ತು ನಿರ್ಧಾರ ತೆಗೆದುಕೊಳ್ಳಲು ವಿದ್ಯಾರ್ಥಿಗಳ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು. ಇದು ಅತ್ಯಗತ್ಯ. ಪ್ರಜಾಪ್ರಭುತ್ವ ಮಾದರಿಯನ್ನು ತಿಳಿಸಲು ಮತ್ತು ಈ ಪ್ರತಿನಿಧಿಗಳು ಸಾಮಾನ್ಯವಾಗಿ ವಿದ್ಯಾರ್ಥಿಗಳು ಮತ್ತು ಆಡಳಿತದ ನಡುವೆ ಸೇತುವೆಗೆ ಕಾರ್ಯನಿರ್ವಹಿಸುತ್ತಾರೆ. ಇದು ವಿದ್ಯಾರ್ಥಿಗಳ ಅಗತ್ಯವನ್ನು ಪೂರೈಕೆ ಮಾಡಲು ಸಹಾಯ ಮಾಡುತ್ತದೆ. ಈ ಸಂಸತ್ ರಚನಾ ಕಾರ್ಯದಲ್ಲಿ ನಮ್ಮ ಶಾಲೆಯ  ಆರ್ ಎಂ ಮುಜಾವರ್ ಶಿಕ್ಷಕರು ಚುನಾವಣೆ ಅಧಿಕಾರಿಗಳಾಗಿ,   ಎಸ್ ಕೆ ಮಾವಿನಮರ ಮೊದಲನೇ ಮತಗಟ್ಟೆ ಅಧಿಕಾರಿಯಾಗಿ   ಕೆ ಆರ್ ಅವಟಿ ಎರಡನೇ ಮತಗಟ್ಟೆ ಅಧಿಕಾರಿಯಾಗಿ ಚುನಾವಣೆಯನ್ನು ಯಶಸ್ವಿಯಾಗಿ ನೆರವೇರಿಸಿದರು. ಮುಖ್ಯ ಗುರುಗಳಾದ ಲಾಯಪ್ಪ ಮನಗೂಳಿ ಮಾರ್ಗದರ್ಶನದ ಮೇರೆಗೆ ರವಿ ವಾಲಿಕಾರ  ಸಹಕಾರ ನೀಡಿದರು.ಎಸ್ ಎಸ್ ನಿಪ್ಪಾಣಿ  ಭಾಗವಹಿಸಿದ್ದರು. 

ಚುನಾವಣೆಯಲ್ಲಿ ಅವುತ್ವಪೂರ್ವ ಮತಗಳಿಂದ ಆಯ್ಕೆಯಾದ ಅಭ್ಯರ್ಥಿಗಳು ಶಾಲೆಯ ಪ್ರಧಾನ ಮಂತ್ರಿಯಾಗಿ ವೀರೇಶ್ ಬಡಿಗೇರ,ಉಪ ಪ್ರಧಾನಮಂತ್ರಿ ಅಂಜಲಿ ಶಂಕರ ಮೇಲಿನಮನಿ.ಹಣಕಾಸು ಮಂತ್ರಿ ಸಿದ್ದಾರ್ಥ ಚಾಬುಕಸವರ.ಆರೋಗ್ಯ ಮಂತ್ರಿಕೀರ್ತಿ ಮೇಲಿನಮನಿ. ಅಶ್ವಿನಿ ವಾಲಿಕಾರ ವಾಚನಾಲಯ ಮಂತ್ರಿ ಶ್ರೀಧರ್ ಹೊನ್ನಕೋರೆ ನೀರಾವರಿ ಮಂತ್ರಿ ದೀಪ್ತಿ ಬನಸೋಡೆ.ಶಿಕ್ಷಣ ಮಂತ್ರಿ ಸಂಕೇತ ಕಟ್ಟಿಮನಿ ಸಹಾಯಕ ಆರೋಗ್ಯ ಮಂತ್ರಿ ಉಮರ್ ಫಾರೂಕ್ ಅಂಜುಟಗಿ.ಕ್ರೀಡಾ ಮಂತ್ರಿ ಸುಶ್ಮಿತಾ ಹೊನ್ನಕೋರೆ. ಸಹಾಯಕ ಕ್ರೀಡಾ ಮಂತ್ರಿ ಐಶ್ವರ್ಯ ಪಾಟೀಲ್  ಪ್ರವಾಸ ಮಂತ್ರಿ ಜಗದೀಶ್ ಕಂಬಾರ.ಆಹಾರ ಪೂರೈಕೆ ಮಂತ್ರಿ ಸೌಂದರ್ಯ ಹೊನಕಟ್ಟಿ ಹಾಗೂ ಸಂಸ್ಕೃತಿಕ ಮಂತ್ರಿ ಒಟ್ಟು 14 ಅಭ್ಯರ್ಥಿಗಳು ತಮ್ಮ ಪ್ರಚಂಡ ಮತಗಳಿಂದ ಆಯ್ಕೆಯಾಗಿದ್ದಾರೆ.ಶಾಲೆಯ ವಿವಿಧ ಕರ್ತವ್ಯಗಳನ್ನು ನಿಭಾಯಿಸಲು ಒಂದು ವರ್ಷದ ಕಾಲಾವಧಿಗೆ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದರು.