ಕೋವಿಡ್ ನಿಯಂತ್ರಣ ಕೃಷಿ ಚಟುವಟಿಕೆ ಮಾಹಿತಿ ಪಡೆದ ಮುಖ್ಯಮಂತ್ರಿಗಳು

ಕೋವಿಡ್ ನಿಯಂತ್ರಣ ಕೃಷಿ ಚಟುವಟಿಕೆ ಮಾಹಿತಿ ಪಡೆದ ಮುಖ್ಯಮಂತ್ರಿಗಳು

ಹಾವೇರಿ: ಜು.13: ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಹಾವೇರಿ ಜಿಲ್ಲಾಡಳಿತದೊಂದಿಗೆ ವಿಡಿಯೋ ಸಂವಾದ ನಡೆಸಿ ಜಿಲ್ಲೆಯ ಕೋವಿಡ್ ವೈರಾಣು ನಿಯಂತ್ರಣ, ಮಳೆಯ ಪರಿಸ್ಥಿತಿ ಹಾಗೂ ಬಿತ್ತನೆ ವಿವರಗಳ ಮಾಹಿತಿಯನ್ನು ಪಡೆದರು.

ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಜಿಲ್ಲೆಯ ಕೋವಿಡ್ ನಿಯಂತ್ರಣ ಕ್ರಮಗಳು, ತಾಲೂಕಾವಾರು ಕೋವಿಡ್ ಚಿಕಿತ್ಸೆಗಾಗಿ ಸಿದ್ಧತೆಮಾಡಿಕೊಂಡಿರುವ ಹಾಸಿಗೆಗಳ ವಿವರ, ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯ (ವಿ.ಆರ್.ಡಿ.ಎಲ್.)ದಲ್ಲಿ ಪ್ರತಿದಿನ ಕೋವಿಡ್ ಶಂಕಿತರ ಗಂಟಲು ಮಾದರಿ ಪರೀಕ್ಷಾ ವಿವರ ಹಾಗೂ ಜಿಲ್ಲೆಯ ಮಳೆ-ಬೆಳೆಯ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳಿಗೆ ವಿವರಿಸಿದರು.ಜಿಲ್ಲೆಯಲ್ಲಿ ಈವರೆಗೆ 308 ಖಚಿತ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 170 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.131 ಪ್ರಕರಣಗಳು ಸಕ್ರಿಯವಾಗಿವೆ. 126 ಕಂಟೈನಮೆಂಟ್ ಜೋನ್ಗಳಾಗಿ ಈವರೆಗೆ ಘೋಷಿಸಲಾಗಿದೆ. ಈ ಪೈಕಿ 17 ಜೋನ್ಗಳನ್ನು ಡಿನೋಟಿಫೈ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚುವರಿ ಬೆಡ್ ವ್ಯವಸ್ಥೆ, ಐಸೋಲೇಷನ್ ವ್ಯವಸ್ಥೆ, ಸಂಟ್ರೆಲೈಸ್  ಪ್ರೈಸರೈಸ್ ವೆಂಟಿಲೇಟರ್ ವ್ಯವಸ್ಥೆ ಹಾಗೂ ಇದೇ ಮಾದರಿಯಲ್ಲಿ ಜಿಲ್ಲೆಯ ಎಲ್ಲ ತಾಲೂಕಾ ಕೇಂದ್ರಗಳಲ್ಲಿ  ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯಲಾಗಿದೆ. ಜಿಲ್ಲಾ ವಿ.ಆರ್.ಡಿ.ಎಲ್. ಲ್ಯಾಬ್ನಲ್ಲಿ ಪ್ರತಿದಿನ 130 ರಿಂದ 140 ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತದೆ. ದಿನಕ್ಕೆ 300 ಮಾದರಿಗಳನ್ನು ಪರೀಕ್ಷೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಮಳೆಯ ವಿವರ, ಬಿತ್ತನೆ ವಿವರ, ರಸಗೊಬ್ಬರ ಮಾಹಿತಿ, ಬೆಳೆಯ ಸ್ಥಿತಿಗತಿಗಳ ಕುರಿತಂತೆ ಮಾಹಿತಿ ನೀಡಿ, ಪ್ರಸ್ತುತ 170 ಮಿ.ಮೀ. ರಷ್ಟು ಮಳೆಯಾಗಿದೆ. ಶೇ.96 ರಷ್ಟು ಮುಂಗಾರು ಬಿತ್ತನೆಯಾಗಿದೆ  ಎಂದು ವಿವರಿಸಿದರು. 

ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ಹಾವೇರಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು, ಜಿಲ್ಲಾ ಆಸ್ಪತ್ರೆಯ ವಿ.ಆರ್.ಡಿ.ಎಲ್ ಲ್ಯಾಬ್ನಲ್ಲಿ ಕಾರ್ಯನಿರ್ವಹಣೆ ಉಸ್ತುವಾರಿಗೆ ಧಾರವಾಡ ವಿಶ್ವವಿದ್ಯಾಲಯದ ಮೈಕ್ರೋಬಯಾಲಜಿಸ್ಟ್ ಸೇವೆಯನ್ನು ಪಡೆಯಲು ಕ್ರಮವಹಿಸಬೇಕು. ಈಗಾಗಲೇ ವಿಶ್ವವಿದ್ಯಾಲಯದ ಕುಲಸಚಿವರೊಂದಿಗೆ ಚಚರ್ಿಸಲಾಗಿದೆ. ಈ ಕುರಿತಂತೆ ಕ್ರಮವಹಿಸಲು ಸಲಹೆ ನೀಡಿದರು. ರ್ಯಾಪಿಡ್ ಆಂಟಿಜನ್ ಟೆಸ್ಟ್ ನಡೆಸಲು ಆದ್ಯತೆ ನೀಡಬೇಕು. ತುತರ್ು ಪ್ರಕರಣಗಳಲ್ಲಿ ವಿವೇಚನೆಯಿಂದ ಪರೀಕ್ಷೆ ನಡೆಸಲು ಸಲಹೆ ನೀಡಿದರು. ಜಿಲ್ಲೆಯಲ್ಲಿ  ಯೂರಿಯಾ ಗೊಬ್ಬರದ ಕೊರತೆಯಂತೆ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ವಿತರಣೆ ಕ್ರಮವಹಿಸಬೇಕು  ಈ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

ವಿಡಿಯೋ ಸಂವಾದದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ,  ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಜರ್ುನ ಬಾಲದಂಡಿ, ಉಪವಿಭಾಗಾಧಿಕಾರಿಗಳಾದ ಡಾ.ದಿಲೀಷ್ ಶಶಿ, ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ಕೃಷಿ ಜಂಟಿ ನಿದರ್ೆಶಕ ಮಂಜುನಾಥ್, ಜಿಲ್ಲಾ ಶಸ್ತ್ರ ಚಿಕಿತ್ಸಕ ನಾಗರಾಜ ನಾಯಕ, ಸಮಾಜ ಕಲ್ಯಾಣ ಇಲಾಖೆ ಉಪನಿದರ್ೆಶಕಿ ಶ್ರೀಮತಿ ಚೈತ್ರಾ ಇತರರು ಉಪಸ್ಥಿತರಿದ್ದರು.