ವೈಯುಕ್ತ ಜೀವನದ ಮಧ್ಯ ಸಮಾಜದ ಜವಾಬ್ದಾರಿ ಅರಿತ ಚಿದಾನಂದ ಯತ್ನಳ್ಳಿ

ವೈಯುಕ್ತ ಜೀವನದ ಮಧ್ಯ ಸಮಾಜದ ಜವಾಬ್ದಾರಿ ಅರಿತ ಚಿದಾನಂದ ಯತ್ನಳ್ಳಿ Chidananda Yathnalli, who understood the responsibility of society amidst his personal life

ಶಿಗ್ಗಾವಿ 15: ಸರ್ಕಾರಿ ನೌಕರ ಎಂದರೆ ತನ್ನ ಇಲಾಖೆಯ ಸೇವೆಗಾಗಿ ಮಾತ್ರ ಸೀಮಿತ ಎಂಬ ಪ್ರಜ್ಞೆಯ ಹಿನ್ನೆಯಲ್ಲಿ ಕೆಲಸ ಮಾಡುವ ನೌಕರರ ಮಧ್ಯೆ ಸಮಾಜದ ಸೇವೆಯೂ ನನ್ನ ಜವಾಬ್ದಾರಿ ಎಂದು ತಿಳಿದುಕೊಂಡು ಪರಿಪೂರ್ಣ ಜಿವನವನ್ನು ನಡೆಸಿದ ವ್ಯಕ್ತಿ ಚಿದಾನಂದ ದೇ. ಯತ್ನಳ್ಳಿ ಎಂದು ಪಟ್ಟಣದ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಪಾಟೀಲ ಕಂಪರ್ಟ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸಿ.ಡಿ. ಯತ್ನಳ್ಳಿ ಅವರ ಸನ್ಮಾನ ಕಾರ್ಯಕ್ರಮಲ್ಲಿ ಮಾತನಾಡಿದ ಅವರು, ಸಿ.ಡಿ. ಯತ್ನಳ್ಳಿ ಅವರು ಪಶು ಸಂಗೋಪನಾ ಇಲಾಖೆಯಲ್ಲಿ ಜಾನುವಾರ ಅಧಿಕಾರಿಯಾಗಿ ವಯೋನಿವೃತ್ತಿ ಹೊಂದಿದರು ವಿವಿಧ ಸಂಘಟನೆಗಳ ಮೂಲಕ ಮಾಡುತ್ತಾ ಬಂದಿರುವ ಸೇವಾ ಪ್ರವೃತ್ತಿ ಮುಂದುವರೆಯಬೇಕು. ಶರಣ ಸಾಹಿತ್ಯ ಪರಿಷತ್ತು, ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಸಂಸ್ಥೆ, ಕನ್ನಡಸಾಹಿತ್ಯ ಪರಿಷತ್ತ್‌ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಸಕ್ರೀಯ ಪಾಲುದಾರರಾಗಿ ಕನ್ನಡ ನಾಡು ನುಡಿಗೆ ತಮ್ಮ ಅಭೂತ ಪೂರ್ವ ಸೇವೆಯನ್ನು ಮಾಡಿದ್ದಾರೆ, ತಮ್ಮ ಇಲಾಖೆಯ ನೌಕರರ ಸಂಘಗಗಳಲ್ಲಿಯೂ ಹಲವಾರು ಪದನಾಮಗಳನ್ನು ಅಲಂಕರಿಸಿ ತಮ್ಮ ಇಲಾಖೆಯ ಸಿಬ್ಬಂದಿಗಳಿಗೆ ಅನೇಕ ಸೌಲತ್ತುಗಳು ಸಿಗುವಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಾರೆ. ಇವರ ಜನಪರ ಸೇವೆಯು ಪ್ರತಿಯೊಬ್ಬರಿಗೂ ಮಾದರಿಯಾಗುವಂತದ್ದು ಎಂದು ಹೇಳಿದರು.ಕರ್ನಾಟಕ ವಿವಿಯ ಡೀನ ಡಾಽ ಎ.ಸಿ. ವಾಲಿ ಮಾತನಾಡಿ, ಸಾಮಾಜಿಕ ಕಳಕಳಿ ಮತ್ತು ವೃತ್ತಿ ನಿಷ್ಠೆ ಎಂಬ ಭಾರವಾದ ಜವಾದ್ಭಾರಿಗಳನ್ನು ತಮ್ಮ ಹೆಗಲಮೇಲೆ ಹೊತ್ತು ಜನರ ಸೇವೆಗಾಗಿ ಸದಾ ತುಡಿತವನ್ನು ಇಟ್ಟುಕೊಂಡು ಅತ್ಯಂತ ಯಶಸ್ವೀಯಾಗಿ ಈ ಎರಡನ್ನು ಸಿ.ಡಿ. ಯತ್ನಳ್ಳಿಅವರು ನಿಭಾಯಿಸಿದ್ದಾರೆ. ರೈತಕುಟುಂಬದಲ್ಲಿ ಜನಿಸಿದ ಅವರು ಮೂಕ ಪ್ರಾಣಿಗಳ ಮತ್ತು ಕನ್ನಡಾಂಬೆಯ ಅಳಿಲು ಸೇವೆಯನ್ನು ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಲಿಂಗಯ್ಯಾ ಹಿರೇಮಠ, ಮಾರುತಿ ಸಿಡ್ಲಾಪುರ,  ಡಾಽ ಕೆ.ಆರ್‌. ಹೊಸಮನಿ, ಮಲ್ಲಪ್ಪ ಸಂಶಿ, ಅನಸಮ್ಮಾ ಯತ್ನಳ್ಳಿ, ಡಾಽ ಬಿ.ವಿ.ಮುಲ್ಕಿಪಾಟೀಲ, ಎನ್‌.ಬಿ.ಬೆಂತೂರ, ಜೆ.ಎನ್‌. ಯಲಿಗಾರ, ಶಶಿಕಾಂತ ರಾಠೋಡ, ಬಸವರಾಜ ಹಡಪದ, ಶಂಬು ಕೇರಿ, ರಮೇಶ ಹರಿಜನ, ಮಾಲತೇಶ ನಾಯ್ಕೋಡಿ ಇತರರಿದ್ದರು.