ಬೆಂಕಿ ಅವಘಡದಿಂದ ಆಘಾತಕ್ಕೋಳಗಾದ ಕುಟುಂಬಕ್ಕೆ ಆರ್ಥಿಕ ಸಹಾಯ ಮತ್ತು ಸಾಂತ್ವನ ಹೇಳಿದ ಚಿದಾನಂದ ಸವದಿ.

ಬೆಂಕಿ ಅವಘಡದಿಂದ ಆಘಾತಕ್ಕೋಳಗಾದ ಕುಟುಂಬಕ್ಕೆ ಆರ್ಥಿಕ ಸಹಾಯ ಮತ್ತು ಸಾಂತ್ವನ ಹೇಳಿದ ಚಿದಾನಂದ ಸವದಿ. Chidananda Savadi offered financial assistance and comfort to the family traumatized by the fire.

ಬೆಂಕಿ ಅವಘಡದಿಂದ ಆಘಾತಕ್ಕೋಳಗಾದ ಕುಟುಂಬಕ್ಕೆ ಆರ್ಥಿಕ ಸಹಾಯ ಮತ್ತು ಸಾಂತ್ವನ ಹೇಳಿದ ಚಿದಾನಂದ ಸವದಿ.  

ಅಥಣಿ 12 : ತಾಲೂಕಿನ ಖಿಳೇಗಾಂವ ಗ್ರಾಮದ ಹೊರ ವಲಯದಲ್ಲಿ ವಾಸ ಮಾಡುತ್ತಿದ್ದ ಬಾಳಾಸಾಹೇಬ ತಮ್ಮಣ್ಣಾ ಹಲಗಿ ಇವರಿಗೆ ಸೇರಿದ ಗುಡಿಸಲು ಮತ್ತು ಜಾನುವಾರುಗಳ ಶೆಡ್ಡಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆಯಿಂದ ಆಘಾತಕ್ಕೋಳಪಟ್ಟ ಕುಟುಂಬದ ಸದಸ್ಯರನ್ನು ಗ್ರಾಮದ ಯುವ ಧುರೀಣ ವಿಶಾಲ ನಿಂಬಾಳ ಜೊತೆ ಭೇಟಿ ಮಾಡಿದ ಕಾಂಗ್ರೆಸ್ ಯುವ ನಾಯಕ ಚಿದಾನಂದ ಸವದಿ ಧನ ಸಹಾಯ ಮಾಡಿದರು ಮತ್ತು ಎರಡು ದಿನಗಳಲ್ಲಿಯೇ ಪತ್ರಾಸ್ ಶೆಡ್ ನಿರ್ಮಾಣ ಮಾಡಿಕೊಡುವುದಾಗಿ ಮತ್ತು ದವಸ ಧಾನ್ಯಗಳನ್ನು ಕೊಡುವುದಾಗಿ ಹೇಳಿದರು.        ಚಿದಾನಂದ ಸವದಿಯವರಿಗೆ ಸಾಥ ನೀಡಿದ ಖಿಳೇಗಾಂವ ಗ್ರಾಮದ ಯುವ ಧುರೀಣ ವಿಶಾಲ ನಿಂಬಾಳ ಮಾತನಾಡಿ, ಸುಪ್ರಸಿದ್ಧ ಖಿಳೇಗಾಂವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಹಲಗಿ ಸೇವೆ ಮಾಡುತ್ತಿರುವ ಬಾಳಾಸಾಹೇಬ ಹಲಗಿ ಕುಟುಂಬ ಅತ್ಯಂತ ಬಡತನದಲ್ಲಿ ಜೀವನ ನಡೆಸುತ್ತಿದ್ದು, ಎರಡು ದಿನಗಳ ಹಿಂದೆ  ಅಡುಗೆ ಮಾಡುವ ಸಂದರ್ಭದಲ್ಲಿ ಅಚಾನಕ್ಕಾಗಿ ಕಿಡಿ ಸಿಡಿದು ಹಲಗಿ ಕುಟುಂಬ ವಾಸ ಮಾಡುವ ಗುಡಿಸಲು ಮತ್ತು ಜಾನುವಾರುಗಳ ಶೆಡ್ಡ ಸಂಪೂರ್ಣ ಸುಟ್ಟು ಹೋದ ಪರಿಣಾಮ ಕುಟುಂಬ ಬೀದಿ ಪಾಲಾಗಿದೆ ಎಂದ ಅವರು ತಕ್ಷಣ ಈ ವಿಷಯವನ್ನು ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಯುವ ನಾಯಕ ಚಿದಾನಂದ ಸವದಿಯವರ ಗಮನಕ್ಕೆ ತಂದ ಪರಿಣಾಮ ಶಾಸಕರು ಮತ್ತು ಚಿದಾನಂದ ಸವದಿಯವರು ಸ್ಪಂದಿಸಿದರು.       ಶಾಸಕ ರಾಜು ಕಾಗೆಯವರು ಬಿಡಿಸಿಸಿ ಬ್ಯಾಂಕ ಚುನಾವಣೆಯಲ್ಲಿ ತೊಡಗಿದ ಪರಿಣಾಮ ಎರಡು ದಿನಗಳಲ್ಲಿಯೇ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಸಹಾಯ ಮಾಡುವುದಾಗಿ  ಹಾಗೂ ತಾಲೂಕಾ ಆಡಳಿತದಿಂದ ಪರಿಹಾರ ಒದಗಿಸಿಕೊಡುವುದಾಗಿ  ಭರವಸೆ ನೀಡಿದ್ದಾರೆ ಮತ್ತು ಚಿದಾನಂದ ಸವದಿ ಭೇಟಿ ನೀಡಿ ಅಗತ್ಯ ಆರ್ಥಿಕ ಸಹಾಯ ಮಾಡಿದರು ಎಂದು ಹೇಳಿದರು.       ಬೆಂಕಿ ಅನಾಹುತದಿಂದ ಆಘಾತಕ್ಕೋಳಗಾದ ಬಾಳಾಸಾಹೇಬ ಹಲಗಿ  ಮಾತನಾಡಿ, ಅಕಸ್ಮಾತ ಬೆಂಕಿ ತಗುಲಿದ ಪರಿಣಾಮ  ಎಲ್ಲವನ್ನು ಕಳೆದುಕೊಂಡಾಗ ನಮ್ಮ ಸಹಾಯಕ್ಕೆ ಬಂದ ವಿಶಾಲ ನಿಂಬಾಳ ತಕ್ಷಣ ಶಾಸಕರಾದ ರಾಜು ಕಾಗೆ ಮತ್ತು ಯುವ ನಾಯಕ ಚಿದಾನಂದ ಸವದಿಯವರ ಗಮನಕ್ಕೆ ತಂದರು ಎಂದ ಅವರು ಘಟನೆ ನಡೆದ ಸ್ಥಳಕ್ಕೆ  ಚಿದಾನಂದ ಸವದಿ ಭೇಟಿ ನೀಡಿ ಆರ್ಥಿಕ ಸಹಾಯ ಮಾಡಿದರು ಮತ್ತು ತಾತ್ಕಾಲಿಕ ಶೆಡ್ಡ ನಿರ್ಮಾಣಕ್ಕೆ ಪತ್ರಾಸ್ ಗಳನ್ನು ಮತ್ತು ದವಸ ಧಾನ್ಯಗಳನ್ನು ಕೊಡುವುದಾಗಿ ಹೇಳಿದ್ದಾರೆ ಜೊತೆಗೆ ವಿಶಾಲ ನಿಂಬಾಳ  ಕೃಷಿ ಪತ್ತಿನ ಸಹಕಾರಿ ಸಂಘದಿಂದ ಹತ್ತು ಸಾವಿರ ಧನ ಸಹಾಯ ಮಾಡಿದ್ದು, ನನ್ನ ಸಹಾಯಕ್ಕೆ ಬಂದ ಚಿದಾನಂದ ಸವದಿ, ವಿಶಾಲ ನಿಂಬಾಳ ಇವರನ್ನು ಅಭಿನಂದಿಸಿದರು.       ಈ ಸಂದರ್ಭದಲ್ಲಿ  ಹೊನ್ನಪ್ಪ ಬಗಲಿ,ಬಸಪ್ಪ ಅಳ್ಲಿಟ್ಟಿ,ಸದಾಶಿವ ದೇವನಗೋಳ,ಅಣ್ಣಪ್ಪ ನಾಗಗೋಳ,ಅದ್ಯಕ್ಷ ಸಂಜಯ ಉಮರೆ,ಸುಭಾಷ್ ಅಠವಲೆ,ಗುರುಪಾದ ಅಳ್ಳಿಕಟ್ಟಿ,ರಾವಸಾಬ ಬಗಲಿ,ತಮ್ಮಣ್ಣಾ ಚಂಡಿ,ಸುಭಾಷ್ ಬಗಲ,ಸೋಮನಾಥ ಹಲಗಿ,ಉದಯ ಕಾಂಬಳೆ,  ಸುರೇಶ ಮಾನೆ, ಆಜೂರ ಪಿಕೆಪಿಎಸ್ ಅದ್ಯಕ್ಷ ಚೈತನ ಪಾಟೀಲ ,ರವಿ ಹೋನಕಾಂಡೆ,ಮಹಾದೇವ ಹಿಡಕಲ,ರವಿ ಮಿರ್ಜೆ,ಮಹಾದೇವ ಗುರವ  ಸೇರಿದಂತೆ ಅನೇಕರು ಉಪಸ್ಥಿತರಿದ್ದರು.