ಚಿದಂಬರ ಬೈಕಂಪಾವಾಡಿಗೆ ವಡ್ಡರ್ಸೆ ಪತ್ರಿಕೋದ್ಯಮ ಪ್ರಶಸ್ತಿ

ಚಿದಂಬರ ಬೈಕಂಪಾವಾಡಿಗೆ ವಡ್ಡರ್ಸೆ ಪತ್ರಿಕೋದ್ಯಮ ಪ್ರಶಸ್ತಿ Chidambaram Baikampavadi wins Vadderse Journalism Award

 ಗೋಕಾಕ 29: ಬೆಳಗಾವಿ ಜಿಲ್ಲೆಯ ಕರ್ನಾಟಕ ಟೈಮ್ಸ್‌ ಕನ್ನಡ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಹಿರಿಯ ಪತ್ರಕರ್ತರು  ಕರ್ನಾಟಕ ರಾಜ್ಯ ಮಾದ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಚಿದಂಬರ ಬೈಕಂಪಾಡಿ ಅವರಿಗೆ  2026 ಜನವರಿ 4 ರಂದು ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.  ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕ ಪತ್ರಕರ್ತರ ಸಂಘ ಇವರ ಆಶ್ರಯದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಪ್ರಶಸ್ತಿ ಲಭಿಸಿದ್ದಕ್ಕಾಗಿ ಚಿದಂಬರ ಬೈಕಂಪಾಡಿ ಅವರ ಸಹೋದ್ಯೋಗಿ ಪತ್ರಕರ್ತ ಬೆಳಗಾವಿ ಜಿಲ್ಲೆಯ ಘೋಡಗೇರಿ ಬಸು ಅವರು ಗೌರವಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. 

ಮಂಗಳೂರು ಮೂಲದ ಪತ್ರಕರ್ತ ಚಿದಂಬರ ಬೈಕಂಪಾಡಿ  ಅವರು,ಪತ್ರಿಕೋದ್ಯಮ ಕ್ಷೇತ್ರದಲ್ಲಿ   ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಧಾನ ವರದಿಗಾರರಾಗಿ 15 ವರ್ಷ ಸೇವೆ ಸಲ್ಲಿಸಿರುವ ಇವರು, ವಿವಿಧ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿದಿದ್ದಾರೆ. ಕವಿಯಾಗಿ ಬೇಗುದಿ, ವಾಸ್ತವದ ಲೆಕ್ಕಾಚಾರ, ಕಪ್ಪು ಹುಡುಗ ಮೂರು ಕನವ ಸಂಕಲನಗಳನ್ನು ಪ್ರಕಟಿಸಿದ್ದಾರೆ. ತುಳು ಪ್ರೇಮಗೀತೆಗಳು ಇವರ ಧ್ವನಿ ಸುರುಳಿ. ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ‘ಇದು ಮುಂಗಾರು' ಕೃತಿ ಪತ್ರಿಕೋದ್ಯಮದ ಬಗ್ಗೆಗಿನ ಪುಸ್ತಕ ಬೆಂಗಳೂರಿನ ಅಂಕಿತ ಪ್ರಕಾಶನ ಹೊರತಂದಿದೆ. ಚಿದಂಬರ ಬೈಕಂಪಾಡಿ ಅವರು ಅಕ್ಷರ ತಪಸ್ವಿ ವಡ್ದರ್ಸೆ ಅವರ ಒಡನಾಡಿಯಾಗಿ ಹತ್ತು ವರ್ಷಗಳ ಕಾಲ "ಮುಂಗಾರು" ಪತ್ರಿಕೆಯಲ್ಲಿ ಸೇವೆ ಸಲ್ಲಿಸಿ ವಡ್ದರ್ಸೆ  ಅವರ ಆಸೆಗೆ ಜೀವ ತುಂಬಿದ್ದರು. 

‘ಅಮೃತ’ ವಾರಪತ್ರಿಕೆಯಲ್ಲಿ, “ದಿವ್ಯ ವಾಣಿ” ವಾರಪತ್ರಿಕೆಯಲ್ಲಿ, “ಬಿಂಬ ದ್ವನಿ”  ಪತ್ರಿಕೆಯಲ್ಲಿ ಪ್ರಧಾನ ಸಂಪಾದಕರಾಗಿ, “ಕರ್ನಾಟಕ ಟೈಮ್‌”್ಸ ಕನ್ನಡ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾಗಿ ಹೀಗೆ ಹತ್ತು ಹಲವಾರು ಮಜಲುಗಳಲ್ಲಿ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ 2015 ನೇ ಸಾಲಿನ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಅವರು ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದ್ದು ವಿಶೇಷವಾಗಿದೆ. 

 ಪತ್ರಿಕೋದ್ಯಮದ ಜೊತೆ ಜೊತೆಗೇ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ಚಿದಂಬರ ಬೈಕಂಪಾಡಿ ಅವರು ಮುಂಗಾರು ಪತ್ರಿಕೋದ್ಯಮದ ಕುರಿತು ಪುಸ್ತಕ, "ಪ-ಗೋ ಪ್ರಪಂಚ" ಪತ್ರಿಕೋದ್ಯಮ ಕುರಿತು ಪುಸ್ತಕ, " ರಾಜಕೀಯ ಒಳ ಸುಳಿಗಳು"  ಲೇಖನಗಳು," ಕರ್ನಾಟಕ ಟೈಮ್ಸ್‌ ಪತ್ರಿಕೆಯಲ್ಲಿ "ಸರಳರೇಖೆ " ಹೆಸರಿನಲ್ಲಿ ವೈಶಿಷ್ಟ-್ಯ ಲೇಖನಗಳು ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿಯೂ ಸಹ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಪಳಗಿರುವ ಚಿದಂಬರ ಬೈಕಂಪಾಡಿಯವರ ಅಮೋಘ ಸೇವೆಯನ್ನು ಗುರುತಿಸಿ ಈಗ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ  ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  ಬ್ರಹ್ಮಾವರ ತಾಲೂಕ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಗಾಣಿಗ ಅಚ್ಲಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಭವ್ಯ ಸಮಾರಂಭವನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಅವರು ಉದ್ಘಾಟಿಸಲಿದ್ದು, ವಿಧಾನಸಭೆಯ ಸಭಾಧ್ಯಕ್ಷ ಯು. ಟಿ. ಖಾದರ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ.