ಛತ್ರಪತಿ ಶಿವಾಜಿ ಧೈರ್ಯ ಮತ್ತು ಸ್ವಾಭಿಮಾನದ ಪ್ರತೀಕ: ತಹಶೀಲ್ದಾರ ಬಿರಾದಾರ
Chhatrapati Shivaji is a symbol of courage and self-respect: Tahsildar Biradar
ದೇವರಹಿಪ್ಪರಗಿ 19: ಭಾರತದ ಇತಿಹಾಸದಲ್ಲಿ ಶೌರ್ಯ, ಧೈರ್ಯ ಮತ್ತು ಸ್ವಾಭಿಮಾನಕ್ಕೆ ಪ್ರತೀಕವಾಗಿ ಬೆಳಗಿದ ಮಹಾನ್ ಯೋಧ ಛತ್ರಪತಿ ಶಿವಾಜಿ ತಾಯಿಯಿಂದ ಪ್ರೇರೆಪಿತನಾಗಿ, ಕೇವಲ ಮರಾಠಾ ಸಮುದಾಯಕ್ಕೆ ಸೀಮಿತನಾಗದೇ ಸಮಸ್ತ ಭಾರತೀಯರ ಹೃದಯ ಸಿಂಹಾಸನಾಧೀಶ್ವರನಾಗಿರುವ ಶಿವಾಜಿ ಮಹಾರಾಜರ ದಿಟ್ಟತನದ ಜೀವನಶೈಲಿ ಸದಾಕಾಲವೂ ಸರ್ವರಿಗೂ ಮಾದರಿಯಾಗಿದೆ ಎಂದು ತಹಶೀಲದಾರ ನಿಂಗಣ್ಣ ಬಿರಾದಾರ ಹೇಳಿದರು.
ಪಟ್ಟಣದ ತಹಶೀಲದಾರ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಶಿವಾಜಿ ಮಹಾರಾಜರ ಆದರ್ಶಗಳು ಆಡಳಿತದ ನೀತಿಗಳು ಹಾಗೂ ದೇಶಭಕ್ತಿಯ ಚಿಂತನೆಗಳು ಇಂದಿಗೂ ಯುವ ಪೀಳಿಗೆಯನ್ನು ಪ್ರೇರೇಪಿಸುತ್ತಿವೆ ಎಂದು ಹೇಳಿದರು.
ಶಿಕ್ಷಕ ಅರುಣ ಕೋರವಾರ ಉಪನ್ಯಾಸವನ್ನು ನೀಡಿದರು. ಉಪ ತಹಶೀಲದಾರ ಗಿರಿಜಾದೇವಿ ಸಜ್ಜನ, ಶಿರಸ್ತೇದಾರರಾದ ಸುರೇಶ ಮ್ಯಾಗೇರಿ, ದಶರಥ ಭೋವಿ, ಕಂದಾಯ ನೀರೀಕ್ಷಕ ಶಿವಶಂಕರ ಜಾಧವ,ನಾಗೇಂದ್ರ ಗಾಂಗಜಿ,ದೇವೆಂದ್ರ ಬಾಸುತ್ಕರ, ಪಿಂಟು ಬಾಸುತ್ಕರ, ಮಲಕಪ್ಪ ಕುಳಗೇರಿ, ರಾವುತ ಅಗಸರ, ಈಶ್ವರ ಬಾಸುತ್ಕರ, ನರಸಪ್ಪ ಕುಳಗೇರಿ, ಶಿಲ್ಪಾ ಸಿಂಪಿ, ರೇವಣಸಿದ್ದ ಅವರಾದಿ, ಚನಬಸು ಹೊಸಮನಿ,ಆಕಾಶ ಮೇತ್ರಿ, ರಮಾನಂದ ಚಕ್ಕಡಿ, ರಾಜು ಕಂಠಿ, ಅಬುಲಕಲಾಮ್ ಮೋಮಿನ್, ಕಿಶೋರ ಪೂಜಾರಿ, ವಿಟ್ಠಲ ವಾಲೀಕಾರ, ಪ್ರವೀಣ ಹೂಗಾರ, ಸುರೇಶ ಭಜಂತ್ರಿ, ಸಂತೋಷ ತಳವಾರ, ನಾಗರಾಜ ಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪಟ್ಟಣ ಪಂಚಾಯತಿಯಲ್ಲಿ ಶಿವಾಜಿ ಮಹಾರಾಜರ ಜಯಂತೋತ್ಸವ
ಪಟ್ಟಣದ ಪ.ಪಂ ಸಭಾಂಗಣದಲ್ಲಿ ಗುರುವಾರದಂದು ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಅಂಗವಾಗಿ ಪ.ಪಂ ಮುಖ್ಯಾಧಿಕಾರಿ ಅಪ್ರೋಜ ಅಹ್ಮದ ಪಟೇಲ ಅವರು, ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಪ.ಪಂ ಸಿಬ್ಬಂದಿಗಳಾದ ಮುತ್ತುರಾಜ ಹಿರೇಮಠ, ಸೋಮು ಭೋವಿ, ಮಾರ್ತುಂಡ ಗುಡಿಮನಿ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 