ಗೃಹರಕ್ಷಕದಳದ ದಿವಂಗತ ಉತ್ತಣ್ಣ ಕುಟುಂಬಕ್ಕೆ ಚೆಕ್ ವಿತರಣೆ
Cheque distributed to the family of the late Home Guard Uttanna
ಕಂಪ್ಲಿ:28. ಕುಟುಂಬದ ಜೀವನ ನಿರ್ವಹಣೆಗಾಗಿ ಆರ್ಥಿಕ ಧನಸಹಾಯ ಮಾಡಲಾಗಿದ್ದು, ಇದರ ಸದುಪಯೋಗದಿಂದ ಜೀವನ ಉತ್ತಮವಾಗಿರಲಿ ಎಂದು ಕರ್ನಾಟಕ ಗೃಹ ರಕ್ಷಕದಳದ ಬಳ್ಳಾರಿ ಜಿಲ್ಲಾ ಸಮಾದೀಷ್ಟರಾದ ವೈ.ಶೇಖ್ ಸಾಬ್ ಹೇಳಿದರು.
ಸ್ಥಳೀಯ ಸರ್ಕಾರಿ ಷಾಮಿಯಾಚಂದ್ ಕಾಲೇಜು ಆವರಣದ ಹಿಂಬದಿಯಲ್ಲಿರುವ ಗೃಹ ರಕ್ಷಕದಳದ ಕಛೇರಿಯಲ್ಲಿ ಇತ್ತೀಚೆಗೆ ಗೃಹ ರಕ್ಷಕದಳದ ಸಿಬ್ಬಂದಿ ಕೆ.ಉತ್ತಣ್ಣ ನಿಧನ ಹೊಂದಿದ ಹಿನ್ನಲೆ ಕರ್ನಾಟಕ ಗೃಹ ರಕ್ಷಕದಳದ ಕೇಂದ್ರ ಕಛೇರಿಯಿಂದ ಮಂಜೂರಾದ 15 ಸಾವಿರ ಸಹಾಯಧನದ ಚೆಕ್ ಅನ್ನು ಅವರ ಪತ್ನಿ ಪಾರ್ವತಿ ಇವರಿಗೆ ವಿತರಿಸಿದ ನಂತರ ಮಾತನಾಡಿ, ಕೆ.ಉತ್ತಣ್ಣ ಇವರು ಗೃಹ ರಕ್ಷಕದಳದಲ್ಲಿ ಹಲವು ವರ್ಷ ಕರ್ತವ್ಯದೊಂದಿಗೆ ಸೇವೆ ಸಲ್ಲಿಸಿದ್ದು ಅವಿಸ್ಮರಣೀಯವಾಗಿದೆ. ಈ ಸಹಾಯಧನವನ್ನು ಜೀವನ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಂಪ್ಲಿ ಘಟಕಾಧಿಕಾರಿ ಹೊನ್ನೂರವಲಿಸಾಬ್, ನಿಕಟ ಪೂರ್ವ ಘಟಕಾಧಿಕಾರಿ ಹೆಚ್.ಗಿರಿಧರ್, ಲೀಡರ್‌ಗಳಾದ ಕೆ.ಸುರೇಶ, ಬಿ.ಚಂದ್ರಶೇಖರ, ಕೆ.ಜಗದೀಶ ಸೇರಿದಂತೆ ಗೃಹ ರಕ್ಷಕದಳದವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 