ಸಂಭ್ರಮದಿಂದ ಜರುಗಿದ ಚೆನ್ನಮ್ಮಳ ತೊಟ್ಟಿಲು ಕಾರ್ಯಕ್ರಮ
Chennammala's cradle program Chennammala's cradle program was celebrated with enthusiasmwas celebrat
ಸಂಭ್ರಮದಿಂದ ಜರುಗಿದ ಚೆನ್ನಮ್ಮಳ ತೊಟ್ಟಿಲು ಕಾರ್ಯಕ್ರಮ
ತಾಳಿಕೋಟಿ 15: ಪಟ್ಟಣದ ರಾಜವಾಡೆ ಮೈದಾನದಲ್ಲಿ ಕಿತ್ತೂರ ರಾಣಿ ಚೆನ್ನಮ್ಮಳ ಪುತ್ಥಳಿ ಅನುಷ್ಠಾನದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ "ಚೆನ್ನಮ್ಮಾಜಿ ಜೀವನ ಚರಿತ್ರೆ" ಪ್ರವಚನದಲ್ಲಿ ಚೆನ್ನಮ್ಮಾಜಿಯ ತೊಟ್ಟಿಲು ಕಾರ್ಯಕ್ರಮ ಶನಿವಾರ ಸಂಭ್ರಮದಿಂದ ಜರುಗಿತು. ಜೂನ್ 12 ರಿಂದ 22 ರವರೆಗೆ ನಡೆಯಲಿರುವ ಈ ಪ್ರವಚನದ ಮೂರನೇ ದಿನದ ಕಾರ್ಯಕ್ರಮದಲ್ಲಿ ತೊಟ್ಟಿಲದ ಈ ವಿಶೇಷ ಕಾರ್ಯಕ್ರಮವನ್ನು ನೂರಾರು ಮಹಿಳೆಯರು ಶಾಸ್ತ್ರೋಕ್ತವಾಗಿನೆರವೇರಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಖ್ಯಾತ ಪ್ರವಚನಕಾರರಾದ ಪರಮ ಪೂಜ್ಯ ಪ್ರಭುಲಿಂಗ ಶರಣರು ವೀರರಾಣಿ ಕಿತ್ತೂರು ಚೆನ್ನಮ್ಮಳ ಇಡೀ ಜೀವನದ ವೃತ್ತಾಂತವನ್ನು ತಿಳಿದುಕೊಳ್ಳುವುದು ನಮ್ಮ ತಾಯಂದಿರಿಗೆ ಅಗತ್ಯವಾಗಿದೆ ರಾಜ ಮನೆತನದಲ್ಲಿ ಜನಸಿದರೂ ತನ್ನ ಅಸ್ತಿತ್ವವನ್ನು ರಕ್ಷಿಸಲು ಸರ್ವಸ್ವವನ್ನು ತ್ಯಾಗ ಮಾಡಿದ ತ್ಯಾಗಮಯಿ ಮಹಿಳೆ ಅವಳಾಗಿದ್ದಾಳೆ ಎಂದರು.
ತೊಟ್ಟಿಲು ಕಾರ್ಯಕ್ರಮಕ್ಕೆ ದಾನಿಗಳಾದ ಶಿವಾನಂದ್ ಬಬಲೇಶ್ವರ ಬೆಳ್ಳಿ ಲಿಂಗದಕಾಯಿ ಮಗುವಿಗೆ ಬಟ್ಟೆ, ಶಂಕ್ರಮ್ಮ ಹಡಪದ ಮಗುವಿಗೆ ಕೈಕಟ್ಟು ಹಾಗೂ ಬಟ್ಟೆ, ನಾಗಮ್ಮ ಕಂದಗಲ್ ಬೆಳ್ಳಿಯ ಚೈನು, ಗುರುಪಾದ ಎಂ ಬಂಗಾರದ ಮೂರವು, ಪ್ರೇಮಬಾಯಿ ಜಾಧವ ಮಗುವಿಗೆ ಬಟ್ಟೆ ಹಾಗೂ ಕೆಲವರು ಕಾಣಿಕೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ಸಿ.ಎಸ್.ಪಾಟೀಲ,ಅಧ್ಯಕ್ಷೆ ನೀಲಮ್ಮ ಎಸ್.ಪಾಟೀಲ,ಉಪಾಧ್ಯಕ್ಷ ಕಲ್ಲಪ್ಪ ಪಾಟೀಲ ಪ್ರಧಾನ ಕಾರ್ಯದರ್ಶಿ ಎಂ.ಬಿ.ಕೋಟಿ, ಕಾರ್ಯದರ್ಶಿ ಬಿ.ಕೆ.ಪಾಟೀಲ, ಸಮಾಜದ ಗಣ್ಯರು ಹಿರಿಯರು ಹಾಗೂ ಮಹಿಳೆಯರು ಇದ್ದರು. ಶ್ರೀ ಖಾಸ್ಗತೇಶ್ವರ ಸಂಗೀತ ಶಾಲೆಯ ದೀಲೀಪಸಿಂಗ್ ಹಜೇರಿ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 