ಧಾರವಾಡ ಘರಾಣಾಗೆ ಸ್ವರವನ ಮೆರಗು: 48 ವಾದ್ಯಗಳು ರೂಪುಗೊಳ್ಳಲಿದೆ ಸಸಿಗಳ ನೆಡುತೋಪು

ಹರ್ಷವರ್ಧನ ವಿ. ಶೀಲವಂತ 

ಧಾರವಾಡ, 07: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಬಳಕೆಯಾಗುವ ಒಟ್ಟು 58 ವಾದ್ಯಗಳ ಪೈಕಿ, 48 ವಾದ್ಯಗಳು ರೂಪುಗೊಳ್ಳುವ ಮರಗಳ ಪುಟ್ಟ ಸಸಿಗಳನ್ನು, ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜ್ನಲ್ಲಿ ನೂತನವಾಗಿ ರೂಪಿಸಿದ `ಸ್ವರ ವನ'ದಲ್ಲಿ ನೆಡಲಾಗುತ್ತಿದೆ. 

ಶಾಸ್ತ್ರೀಯ ಸಂಗೀತದ ತವರು ಧಾರವಾಡ. ಈ `ಧಾರವಾಡ ಘರಾಣೆ'ಗೆ ಇದೊಂದು ವಿಶೇಷ ಮೆರಗು. ಸಂಗೀತ ಕಾಶಿಗೆ ಹೊಸ ಸೇರ್ಪಡೆ. ಶಿರಸಿಯ ಯೂತ್ ಫಾರ್ ಸೇವಾ ಸಂಯೋಜಕ ಹಾಗೂ ಹೆಸರಾಂತ ಪರಿಸರವಾದಿ ಉಮಾಪತಿ ಭಟ್ ಕೆ.ವಿ. ಅವರ ಮಾರ್ಗದರ್ಶನದಲ್ಲಿ ಈ ಸ್ವರ ವನ ರೂಪಿತವಾಗುತ್ತಿದೆ. 

ಬರುವ (ಡಿಸೆಂಬರ್) 8ನೇ ತಾರೀಖು, ಭಾನುವಾರ ಸಂಜೆ 4 ಗಂಟೆಗೆ ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜ್ನಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ. ಮನಗುಂಡಿಯ ಚೆನ್ನಯ್ಯನಗಿರಿ ಮಹಾಮನೆ ಆಶ್ರಮದ ಪೂಜ್ಯ ಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. 

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ವಾಯೋಲಿನ್ ನುಡಿಸುವ ರಾಷ್ಟ್ರದ ಏಕೈಕ ದಂಪತಿ, ಆಕಾಶವಾಣಿಯ `ಎ'ಶ್ರೇಣಿ ಪಿಟೀಲು ವಾದಕರು, ಪ್ರತಿಷ್ಠಿತ ನಿಜಗುಣ ಪುರಂದರ ಪ್ರಶಸ್ತಿ ಪುರಸ್ಕೃತ ಪಂ.ಬಿ.ಎಸ್. ಮಠ ಹಾಗೂ ವಿದುಷಿ ಅಕ್ಕಮಹಾದೇವಿ ಮಠ ಅವರು ಸ್ವರ ವನದಲ್ಲಿ ಸಸಿಗಳನ್ನು ನೆಟ್ಟು ಉದ್ಘಾಟಿಸಲಿದ್ದಾರೆ. 

ಶಿರಸಿಯ ಪರಿಸರವಾದಿ ಉಮಾಪತಿ ಭಟ್ ಕೆ.ವಿ. ಅವರು 'ಸ್ವರ ವನ'ದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. 

ಮೈಸೂರು ಆಕಾಶವಾಣಿಯ ಕಾರ್ಯಕ್ರಮ ನಿವರ್ಾಹಕ, ಏಕ ವ್ಯಕ್ತಿ ತಾಳ ಮದ್ದಲೆ ಖ್ಯಾತಿಯ ಹಿರಿಯ ಸಾಹಿತಿ ದಿವಾಕರ ಹೆಗಡೆ, ಕೆರೆಹೊಂಡ ಅವರು 'ಸಂಗೀತ ಮತ್ತು ಪರಿಸರ' ವಿಷಯವಾಗಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. 

ನೇಚರ್ ಫಸ್ಟ್ ಇಕೋ ವಿಲೇಜ್ನ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಂಚಯ್ಯ ವಿರೂಪಾಕ್ಷಯ್ಯ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. 

ಸಂಗೀತ ಲೋಕದ ದಿಗ್ಗಜರು, ಸಂಗೀತ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು, ಸಂಗೀತ ಸಾಧಕರು, ವಿದ್ಯಾಥರ್ಿಗಳು, ವಿಶೇಷ ಆಹ್ವಾನಿತ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಏನಿದು 'ಸ್ವರ ವನ'!? 

ಸಂಗೀತದ ತೊಟ್ಟಿಲು ಧಾರವಾಡ. ಸಾಹಿತ್ಯ, ಕಲೆಗಳ ತವರು. ಶಿಕ್ಷಣ ಕಾಶಿ. ಅಸಂಖ್ಯ ಸಾಧಕರ ತಪೋಭೂಮಿ. ಲೆಕ್ಕಿಗ-ಮಿತಾಕ್ಷರರಂತೆ ಸಾಂಸ್ಕೃತಿಕ ರಾಯಭಾರಿಗಳನ್ನು ನೀಡಿದ ನೆಲ. 

ಪಂ.ಮಲ್ಲಿಕಾಜರ್ುನ ಮನ್ಸೂರ, ಪಂ.ಬಸವರಾಜ ರಾಜಗುರು, ವಿದುಷಿ ಗಂಗೂಬಾಯಿ ಹಾನಗಲ್, ಪಂಡಿತ ಭೀಮಸೇನ ಜೋಶಿ, ಉಸ್ತಾದ್ ಬಾಲೇಖಾನ್, ಪಂಡಿತ ವಸಂತ ಕನಕಾಪೂರ.. ಈ ಪಟ್ಟಿ ಅಕ್ಷಯವಾಗಿದೆ. 

ಧಾರವಾಡದಿಂದ ದಾಂಡೇಲಿ ರಸ್ತೆಯ ಮೇಲೆ, ಕೇವಲ 14 ಕಿ.ಮೀ. ದೂರದಲ್ಲಿದೆ ಹಳ್ಳಿಗೇರಿ. ನೇಚರ್ ಫಸ್ಟ್ ಇಕೋ ವಿಲೇಜ್ ಸ್ಥಾಪನೆಗೊಂಡು ಈಗ 5 ವರ್ಷಗಳು ಪೂರ್ಣ. ಇಲ್ಲಿ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಸೇರಿದಂತೆ, ಇತರೆ ಪ್ರಕಾರದ ಸಂಗೀತದಲ್ಲಿ ಬಳಕೆಯಾಗುವ 58 ವಾದ್ಯ ಪ್ರಕಾರಗಳ ಪೈಕಿ, 48 ವಾದ್ಯಗಳನ್ನು ತಯಾರಿಸುವ ವಿಶಿಷ್ಠ ಮರಗಳ ಸಸಿಗಳನ್ನು ನೆಡಲಾಗುತ್ತಿದೆ. ಬಾಕಿ ಹತ್ತು ಸಸಿಗಳ ಹುಡುಕಾಟವೂ ಮುಂದುವರಿದಿದೆ. 

ಒಟ್ಟು 58 ಸಸಿಗಳ ಸ್ವರ ವನ ಇಲ್ಲಿ ರೂಪುಗೊಳ್ಳಲು ಸಜ್ಜಾಗಿದೆ. ಯುವ ಪೀಳಿಗೆಗೆ ವಾದ್ಯಗಳ ಬಗ್ಗೆ, ಅವು ರೂಪುಗೊಳ್ಳುವ ಪರಿಯ ಕುರಿತು ಹಾಗೂ ಬಳಕೆಯ ರೀತಿ ತಿಳಿಸಿಕೊಡಲು ಈ ಯೋಚನೆ ಮತ್ತು ಯೋಜನೆ. ಶಿರಸಿಯ ಖ್ಯಾತ ಪರಿಸರ ತಜ್ಞ ಶ್ರೀ ಉಮಾಪತಿ ಭಟ್ ಕೆ.ವಿ. ಅವರ ಮಾರ್ಗದರ್ಶನದಲ್ಲಿ, ನೇಚರ್ ರಿಸಚರ್್ ಸೆಂಟರ್ ಈ ಕನಸನ್ನು ಸಾಕಾರಗೊಳಿಸಲು ಸನ್ನದ್ಧವಾಗಿದೆ. ಸದ್ಯ ನಮಗೆ ಲಭ್ಯವಾದ 48 ಸಸಿಗಳನ್ನು ನೆಟ್ಟು, ಪೋಷಿಸಿ, ವನ ರೂಪದಲ್ಲಿ ನಿಮರ್ಿಸಿ, ನಿರ್ವಹಿಸಲು ಯೋಜಿಸಲಾಗಿದೆ. 

ಸಂಗೀತಕ್ಕೆ ಜಾತಿ, ಮತ, ಪಂಥ, ಧರ್ಮಗಳ ಹಂಗಿಲ್ಲ. 'ಹಾಡುವವರಿತರ್ಾರೆ', 'ನುಡಿಸುವವರಿತರ್ಾರೆ'.. 'ಕೇಳುಗರನ್ನೂ' ಇಂದು ನಾವು ರೂಪಿಸಬೇಕಿದೆ. ಸಹೃದಯರ ಹೃದಯ ತೆರೆದಿದ್ದರೆ, ಕಲಾವಿದ ಅಮರ. ಭರಾಟೆಯ ಜೀವನ, ತಂತ್ರಜ್ಞಾನದ ವ್ಯಾಪ. ಮಿತಿಮೀರಿದ ಇಲೆಕ್ಟ್ರಾನಿಕ್ ಗೆಝೆಟ್ಗಳ ಬಳಕೆ ನಮ್ಮ ನೆಮ್ಮದಿ ಕದಡುತ್ತಿದೆ. ಬದುಕು ಧಾವಂತದ ಅಲುಗಿನ ಮೇಲಿದೆ. ಹಾಗಾಗಿ, ಈ ಕನಸು ಕಟ್ಟಿದ್ದೇವೆ. 

ಮನುಷ್ಯನ ಸ್ವಭಾವ 'ನೇಚರ್, ಈ 'ನೇಚರ್ನಲ್ಲಿ ಸಮಭಾವದಂತೆ ವಿಲೀನಗೊಳ್ಳದ ಹೊರತು ಮುಂದಿನ ಬದುಕು ಸಹ್ಯವಾಗಿರದು. ಎಲ್ಲರೂ ಸೇರಿ 'ಸ್ವರ ವನ' ರೂಪಿಸೋಣ. 'ಧಾರವಾಡ ಘರಾಣೆ' ಮಾದರಿಯಾಗಲಿ. ಕಾಣ್ಕೆಯಾಚೆಗಿನ ಕಾಣ್ಕೆ ಸಿದ್ಧಿಸಿಕೊಂಡ ವರಕವಿ, ನಮ್ಮ ಬೇಂದ್ರೆ ಅಜ್ಜ ನಿರೂಪಿಸಿದಂತೆ, 'ಧಾರವಾಡ ದಾರಿತೋರಿಸ್ತು..' ಅನ್ನೋ ಮಾತಿಗೆ 'ಸಾಧನಕೇರಿ' ಈ ಸ್ವರ ವನವಾಗಲಿ.. ಎಂಬ ಅಪೇಕ್ಷೆ.  

ನೇಚರ್ ಫಸ್ಟ್ ಇಕೋ ವಿಲೇಜ್, ಹಳ್ಳಿಗೇರಿ..

ಪರಿಸರದ ಬಗ್ಗೆ ತುಂಬ ಕಾಳಜಿ ಮತ್ತು ಪ್ರೀತಿ ಮೈಗೂಡಿಸಿಕೊಂಡಿರುವ ಪಿ.ವಿ. ಹಿರೇಮಠ (ನಮ್ಮ ನೇಚರ್ ರಿಸಚರ್್ ಸೆಂಟರ್ನ ಅಧ್ಯಕ್ಷರು ಹಾಗೂ ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜ್ನ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಯೂ ಹೌದು.. ಸ್ವತಃ ಲ್ಯಾಂಡ್ಸ್ಕೇಪ್ ಡಿಸೈನ್ ಎಂಜಿನಿಯರ್ ಕೂಡ..) ತುಂಬ ಆಸ್ಥೆ ವಹಿಸಿ 'ಸ್ವರ ವನ' ನಿಮರ್ಿಸಲು ಮನಸ್ಸು ಮಾಡಿದ್ದಾರೆ.  

ಧಾರವಾಡದಿಂದ ಹಳಿಯಾಳ ರಸ್ತೆ. 14 ಕಿ.ಮೀ. ಅಂತರದಲ್ಲಿ ಹಳ್ಳಿಗೇರಿ ನಾಕಾ ಇದೆ. ಯುವ ಜನತೆಗೆ ಪರಿಸರದ ಬಗ್ಗೆ ತಿಳಿವಳಿಕೆ, ಪರಿಸರ ಸ್ನೇಹಿ ಸರಳ ಬದುಕು ರೂಢಿಸಿಕೊಳ್ಳಲು ಅನುವಾಗುವ ಪ್ರಾತ್ಯಕ್ಷಿಕೆ ಮತ್ತು ಪ್ರಾಯೋಗಿಕ ಮಾದರಿಗಳ ಮೂಲಕ ಮನಃ ಪರಿವರ್ತನೆ ಮಾಡಬಲ್ಲ ಜೀವಂತ 'ಮಾಡೆಲ್ ಅಂದರೆ, ಅತಿಶಯೋಕ್ತಿ ಏನಲ್ಲ. ನೇಚರ್ ಫಸ್ಟ್ ಇಕೋ ವಿಲೇಜ್ ಉದ್ಯಾನವದು. ಸಮಾನ ಮನಸ್ಕ ಗೆಳೆಯರ ಕತರ್ೃತ್ವಶಕ್ತಿಯ ಜೀವಂತ ಮಾದರಿ ಅದು. ಹಸಿರ ಸನ್ನಿಧಿ. ಉಸಿರ ಕಾಶಿ.  

ಒಟ್ಟು 08 ಎಕರೆ ಜಮೀನಿನ ಪೈಕಿ, 7 ಎಕರೆಯಲ್ಲಿ ಗುಡ್ಡದ ತಪ್ಪಲಿನಲ್ಲಿ ಮೈವೆತ್ತಂತಿರುವ ಇಕೋ ವಿಲೇಜ್ನಲ್ಲಿ, ಒಟ್ಟು 6 ಗುಂಟೆ ಜಾಗೆಯಲ್ಲಿ ಸ್ವರ ವನ ಸಿದ್ಧಗೊಂಡಿದೆ.  

ಹಳ್ಳಿಗೇರಿಯಲ್ಲಿ ಇಕೋ ವಿಲೇಜ್ಗೆ ಕಂಠ ಹಾರದ ಮಾದರಿಯಲ್ಲಿ ಗುಡ್ಡದ ನೀರು ಆಧರಿಸಿ ನಿಮರ್ಿಸಲಾದ ಒಟ್ಟು ಆರು ಕೆರೆಗಳು, ಮಣ್ಣು, ಕಸ, ಕಡ್ಡಿ ತೇಲಿ ಬಂದರೂ.. ಸೋಸಿ ಕೊನೆಗೆ ಪದಕದಂತಹ ದೊಡ್ಡ ಕೆರೆಗೆ ತಿಳಿ ನೀರು ಬಂದು ನಿಂತರೆ.. ವರ್ಷವಿಡೀ ನಮ್ಮ ಈ ಇಕೋ ವಿಲೇಜ್ನಲ್ಲಿ ನೀರ ನೆಮ್ಮದಿ!  ಗುಡ್ಡದ ಮೇಲೆ ಸುರಿದ ಒಂದೇ ಮಳೆಗೆ ಕನಿಷ್ಠ ಆರೂ ಕೆರೆಗಳ ಒಡಲು ತುಂಬಿ, ದೊಡ್ಡ ಕೆರೆಯ ಮೆರಗು ಇಮ್ಮಡಿಸಿದೆ. ಈ ಗುಡ್ಡವೇ ನಮ್ಮೀ ಕೆರೆಯ `ಜಲ ವಿಭಜಕ ರೇಖೆ'! ಸಮೃದ್ಧ ಮಳೆಯಾದಲ್ಲಿ 25 ಲಕ್ಷ ಲೀಟರ್ ನೀರು ಹಿಡಿದಿಡಬಲ್ಲ ಅಕ್ಷಯಪಾತ್ರೆ ನಮ್ಮೀ ಕಂಠಹಾರ ಕೆರೆ!

ಈ ಕೆರೆಯ ತಪ್ಪಲಿನಲ್ಲಿ ಸಿದ್ಧಗೊಂಡ `ಸ್ವರ ವನ'ದಲ್ಲಿ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಬಳಕೆಯಾಗುವ ಒಟ್ಟು 58 ವಾದ್ಯಗಳ ಪೈಕಿ, 48 ವಾದ್ಯಗಳು ರೂಪುಗೊಳ್ಳುವ ಮರಗಳ ಪುಟ್ಟ ಸಸಿಗಳನ್ನು, ನೆಡಲಾಗುತ್ತಿದೆ.