ಬೆಂಗಳೂರು ಏ, 17 ,ಕೇಂದ್ರ ದಿಂದ ರಾಜ್ಯಕ್ಕೆ ಸಾಕಷ್ಟು ಪಡಿತರ ದಾಸ್ತಾನು ಬಂದಿದ್ದು ಮೇ ಒಂದರಿಂದ ಎಪಿಎಲ್ ಪಡಿತರ ಚೀಟಿದಾರರಿಗೂ ರಿಯಾಯಿತಿ ದರದಲ್ಲಿ ಆಹಾರ ಪದಾರ್ಥ ಪೂರೈಕೆಯಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು ಸಾಕಷ್ಟು ದಾಸ್ತಾನು ಬಂದಿದ್ದು, ಯಾವುದೇ ಕೊರತೆ ಇಲ್ಲ ಒಂದು ವರ್ಷಕ್ಕಿಂತಲೂ ಹೆಚ್ಚಿನ ದಾಸ್ತಾನು ರಾಜ್ಯದಲ್ಲಿ ಲಭ್ಯವಿದೆ ಎಂದು ಹೇಳಿದರು. ಇದೆ 30ನೇ ರೊಳಗೆ ಎಲ್ಲಾ ಪಡಿತರ ಅಂಗಡಿಗಳಿಗೆ ದವಸ ಧಾನ್ಯಗಳ ಪೂರೈಕೆಗೆ ಕ್ರಮ ವಹಿಸಲಾಗಿದೆ ಮೇ ಒಂದರಿಂದ ಎಪಿಎಲ್ ಪಡಿತರ ಚೀಟಿದಾರರಿಗೂ ಕೆಜಿ ಗೆ 15ರೂ ದರದಲ್ಲಿ 10 ಕೆಜಿ ಅಕ್ಕಿ ಜೊತೆಗೆ , 1ಕೆಜಿ ತೊಗರಿ ಬೇಳೆ ವಿತರಣೆ ಮಾಡಲಾಗುತ್ತದೆ ಅವರು ಹೇಳಿದರು. ಶೇಕಡಾ 91ರಷ್ಟು ಪಡಿತರ ಅಂಗಡಿಗಳಲ್ಲಿ ಎರಡು ತಿಂಗಳ ಪಡಿತರ ವಿತರಣೆಯಾಗಿದ್ದು, ರಾಜ್ಯದ ಇತಿಹಾಸದಲ್ಲಿ ದಾಖಲೆಯಾಗಿದೆ ಎಂದರು. .2.22 ಲಕ್ಷಬಿಪಿಎಲ್ ಕಾರ್ಡ್ ಗೆ ಅರ್ಜಿ ಹಾಕಿದ್ದು, 1.90 ಲಕ್ಷ ಅರ್ಜಿ ವಿಲೇವಾರಿ ಆಗಬೇಕು.ಅರ್ಜಿ ಹಾಕಿದವರಿಗೂ ಪಡಿತರ ಆಹಾರ ಸಮಾಗ್ರಿಯನ್ನು ಪೂರೈಕೆ ಮಾಡಲಾಗುವುದು ಎಂದು ಎಂದರು. ಮುಗ್ಗಲು ಅಕ್ಕಿ ವಿತರಣೆ ಕಂಡುಬಂದರೆ ಕ್ರಮ ಜರುಗಿಸುವಾದಿ ಎಚ್ಚರಿಕೆ ನೀಡಿದ ಸಚಿವರು ಈವರಗೆ 12,558 ಪಡಿತರ ಅಂಗಡಿಗಳ ಮೇಲೆ ಈವರೆಗೆ ದಾಳಿ ಮಾಡಲಾಗಿದೆ ಉಜ್ವಲ ಮತ್ತು ಸಿಎಂ ಅನಿಲ ಭಾಗ್ಯ ಯೋಜನೆಯನ್ನು ಮೂರು ತಿಂಗಳ ವರೆಗೂ ವಿಸ್ತರಿಸಲಾಗಿದೆ ಎಂದೂ ಸಚಿವರು ಹೇಳಿದರು.