ಕನ್ನಡ ಸಾಹಿತ್ಯ ಪರಿಷತ್‌ನ ದತ್ತಿ ಉಪನ್ಯಾಸ ಕಾರ್ಯಕ್ರಮ

ಕನ್ನಡ ಸಾಹಿತ್ಯ ಪರಿಷತ್‌ನ ದತ್ತಿ ಉಪನ್ಯಾಸ ಕಾರ್ಯಕ್ರಮ Charity lecture program of Kannada Sahitya Parishad

ಲೋಕದರ್ಶನ ವರದಿ 

ಶಿಗ್ಗಾವಿ 17: ಕನ್ನಡ ಸಾಹಿತ್ಯ ಪರಿಷತ್‌ನ ದತ್ತಿ ಕಾರ್ಯಕ್ರಮಗಳಿಂದ ಪೂರ್ವಜರ ಹೆಸರನಲ್ಲಿ ಕನ್ನಡ ಕಟ್ಟುವ ಕೆಲಸವಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಂದ ಸಾಹಿತ್ಯ, ಭಾಷೆ ಮತ್ತು ಮುಂದಿನ ಯುವ ಪೀಳಿಗೆ ಸಹಕರಿಯಾಗಲಿದೆ ಎಂದು ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು. 

ಪಟ್ಟಣದ ನಳಂದ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ   ಕಮಲಮ್ಮ ಮತ್ತು ದಿ. ರುದ್ರಗೌಡ ಪಾಟೀಲ ಹಾಗೂ ದಿ. ಗುರುಸಿದ್ದಪ್ಪ ಅಜೂರ್, ದಿ. ಲಿಂಗಪ್ಪ ಮಲ್ಲಪ್ಪ ಹೊಳಲಾಪೂರ, ಶ್ರೀ ಆರೂಢ ದಾಸೋಹಿ ಧರ್ಮ ಚಿಂತಾಮಣಿ ಮಹಾಶರಣ ಲಿಂಗೈಕ್ಯ ಮಾಗನೂರು ಬಸಪ್ಪ ಮತ್ತು ಸರ್ವಮಂಗಳಮ್ಮ ಇವರ ಸ್ಮರಣಾರ್ಥ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಅವರು, ದೇಶದ ಬಹುತೇಕ ಪ್ರಾದೇಶಿಕ ಭಾಷೆಗಳು ಸಂವಿಧಾನಾತ್ಮಕ ಮಾನ್ಯತೆ ಪಡೆದರೂ ಸಹ ಅಳಿವಿನಂಚಿನಲ್ಲಿವೆ, ಎಲ್ಲ ಕನ್ನಡದ ಮನಸುಗಳು ಹೀಗೆ ಎಲ್ಲರನ್ನ ಒಳಗೊಂಡು ಕಾರ್ಯಕ್ರಮ ಮಾಡುತ್ತಿರುವುದು ಸುವರ್ಣ ಯುಗದ ಸಂಕೇತವಾಗಿದೆ ಎಂದರು.   

ಖ್ಯಾತ ಜಾನಪದ ವಿದ್ವಾಂಸ ಡಾಽ ರಾಮು ಮೂಲಗಿ ಮಾತನಾಡಿ, ಸಾಹಿತ್ಯ ಮತ್ತು ಜನಪದ ಒಂದೇ ನಾಣ್ಯದ ಎರಡು ಮುಖಗಳು ಇಂದು ಅವುಗಳ ಬದುಕಿನ ವೈವಿದ್ಯಮಯ ಜೀವನ ಶೈಲಿಯನ್ನ ಮಕ್ಕಳಿಗೆ ಮನಮುಟ್ಟುವಂತೆ ವಿವರಿಬೇಕಿದೆ, ಪಠ್ಯಪುಸ್ತಕದಲ್ಲಿರುವ ಜನಪದ ಹಾಡುಗಳನ್ನು ಹಾಡುವ ಮೂಲಕ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಮಾರ್ಗದರ್ಶಕರಾಗಬೇಕಿದೆ ಎಂದರು.      

ನಳಂದ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಎಫ್‌.ಸಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಕಾರ್ಯಕ್ರಮದ ಅದ್ಯಕ್ಷತೆಯನ್ನು ಕ.ಸಾ.ಪ ಗೌರವಾಧ್ಯಕ್ಷ ಎಂ.ಬಿ ಹಳೆಮನಿ ವಹಿಸಿದ್ದರು. ಲಾವಣಿ ಪದ, ಜಾನಪದ, ಗೀಗಿ ಪದಗಳನ್ನ ಹೇಳುವ ಮೂಲಕ ಖ್ಯಾತ ಜಾನಪದ ವಿದ್ವಾಂಸ ಡಾ. ರಾಮ ಮೂಲಗಿ ಅವರು ಎಲ್ಲರ ಮನಸ್ಸನ್ನು ರಂಜಿಸಿದರು. 

ಕ.ಸಾ.ಪ ತಾಲೂಕಾಧ್ಯಕ್ಷ ನಾಗಪ್ಪ ಬೆಂತೂರ, ಡಾ. ಪಿ ಆರ್ ಪಾಟೀಲ, ಕಲ್ಲಪ್ಪ ಆಜೂರ, ಲಲಿತಾ ಹಿರೇಮಠ, ಮಂಜುನಾಥ ಹೊಳಲಾಪೂರ, ವಿಜಯಲಕ್ಷ್ಮಿ ಹೊಳಲಾಪೂರ, ಆನಂದಗೌಡ ಹಿರೇಗೌಡ್ರ, ವಾಯ್‌.ಎಚ್ ಮೇಕಳಿ, ಎನ್‌.ಎಂ ನದಾಫ್, ಹನುಮಂತಪ್ಪ ಯು ವಿ, ಲೋಹಿತಕುಮಾರ, ಚೇತನ್ ಪಾಟೀಲ, ಗೌರಮ್ಮ ಆಜೂರ, ವಿದ್ಯಾ ಯಲಿಗಾರ ಸೇರಿದಂತೆ ಕಸಾಪ ಸದಸ್ಯರು, ಶಾಲೆಯ ಶಿಕ್ಷಕರು ಹಾಗೂ ಸಾಹಿತ್ಯಾಭಿಮಾನಿಗಳು ಇದ್ದರು.