ದಾನ ಧರ್ಮ ಪರೋಪಕಾರ ಭಾರತೀಯರ ಪರಂಪರೆ: ಮಂಜುನಾಥ ಗೌಡ ಶಿವಣ್ಣನವರ

ದಾನ ಧರ್ಮ ಪರೋಪಕಾರ ಭಾರತೀಯರ ಪರಂಪರೆ: ಮಂಜುನಾಥ ಗೌಡ ಶಿವಣ್ಣನವರ Charity Dharma Philanthropy Heritage of Indians: Manjunatha Gowda Shivannavara

ರಾಣೇಬೆನ್ನೂರು : ಅ 23 ದಾನ, ಧರ್ಮ, ಪರೋಪಕಾರ ಇವುಗಳು ಸಮಗ್ರ ಭಾರತೀಯರ ಪರಂಪರೆಯಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ, ಯುವ  ಮುಖಂಡ ಮಂಜುನಾಥ ಗೌಡಶಿವಣ್ಣನವರ ಹೇಳಿದರು.  

ಅವರು, ಶನಿವಾರ  ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಸಿದ್ದೇಶ್ವರ ದೇವಸ್ಥಾನ ಸಭಾಂಗಣದಲ್ಲಿ, ಅವರ ತಂದೆ ಶಂಕರ​‍್ಪ  ತಾಯಿ ನೀಲಮ್ಮ ಗೌಶಿವಣ್ಣನವರ ಅವರ ಸ್ಮರಣೆಯಲ್ಲಿ ಶ್ರಾವಣ ಮಾಸದ ಪ್ರಯುಕ್ತ  ಸಾರ್ವಜನಿಕವಾಗಿ ಆಯೋಜಿಸಿದ್ದ, 34ನೇ ವರ್ಷದ ಮಹಾಪ್ರಸಾದ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿದರು.  

ಎಲ್ಲ ದಾನಕ್ಕಿಂತ ಶ್ರೇಷ್ಠವಾದ ದಾನ ಅನ್ನದಾನವಾಗಿದೆ. ತಮ್ಮ ಕುಟುಂಬದಲ್ಲಿ ಪ್ರತಿ ವರ್ಷವೂ, ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ನಡೆಸುತ್ತಾ ಬಂದಿದ್ದೇವೆ. ದೇವರ ಸನ್ನಿಧಿಯಲ್ಲಿ ಈಗಾಗಲೇ 33 ವರ್ಷಗಳನ್ನು ನೆರವೇರಿಸಿದ್ದೇವೆ  ಇದು ನಮ್ಮ ಕುಟುಂಬಕ್ಕೆ ಅತ್ಯಂತ ಸಂತೋಷದ ದಿನ ಜೊತೆಗೆ, ನಮ್ಮ ಎಲ್ಲಾ ಅಭಿಮಾನಿಗಳು ಕುಟುಂಬದ ಸದಸ್ಯರು ಮತ್ತು ಸಾರ್ವಜನಿಕರು ಪರಸ್ಪರ ಕೊಡುವ ಸುಧೀನವಾಗಿದೆ ಎಂದರು. ಕುಟುಂಬದ ಗಣ್ಯರಾದ  ಸಿದ್ದನಗೌಡ ಗೌಡಶಿವಣ್ಣನವರ, ಪತ್ನಿ ಶಶಿಕಲಾ ಮಂಜುನಾಥ್‌. ಮನು ಗೌಡಶಿವಣ್ಣನವರ , ಮಂಜು ಬಸನಗೌಡ, ಕರಿಯಪ್ಪ ಶಿಡಗನಾಳ, ಸಿದ್ದಲಿಂಗೇಶ್ ಕಂಟ್ಲಿ, ನಾಗರಾಜ್ ಅಜಗಣ್ಣನವರ, ಬಸವರಾಜ ನೆಗಳೂರು, ಬಸವರಾಜ ಗೌಡ ಶಿವಣ್ಣನವರ, ರೇವಣಸಿದ್ದಪ್ಪ ಗೌಡ ಶಿವಣ್ಣನವರ, ಸಿದ್ದಣ್ಣ ಗುಡಿಮುಂದ್ಲರ, ಶಂಕ್ರ​‍್ಪ ಹಾಲಬಾವಿ ಶಿವಲಿಂಗಪ್ಪ ಗೌಡ ಶಿವಣ್ಣನವರ, ಶಿವನಗೌಡ ಕಡೂರ, ಮಹೇಶ್ ಬುರುಡಿಕಟ್ಟಿ, ಬಸವರಾಜ ಕೊಪ್ಪದ, ಹನುಮಂತಪ್ಪ ಕಬ್ಬಾರ್, ಹನುಮಂತಪ್ಪ ಗೋಳಣ್ಣನವರ ಅಭಿಮಾನಿಗಳ ಸಂಘದ ಅಧ್ಯಕ್ಷರು ಪದಾಧಿಕಾರಿಗಳು, ಅಭಿಮಾನಿಗಳು ಪಾಲ್ಗೊಂಡಿದ್ದರು. ಶ್ರೀ ಸಿದ್ದೇಶ್ವರ ಸ್ವಾಮಿಗೆ, ಕುಟುಂಬ ಪರಿವಾರದವರು ಅತ್ಯಂತ ಭಕ್ತಿ ಭಾವದೊಂದಿಗೆ ಪೂಜೆ ಸಲ್ಲಿಸಿ ಪ್ರಸಾದ ವಿತರಣೆಗೆ ಚಾಲನೆ ನೀಡಿದರು.  

 ಮಧ್ಯಾಹ್ನದಿಂದ ಸಂಜೆವರೆಗೂ ನಡೆದ ಅನ್ನದಾಸೋಹ ಹತ್ತಾರು ಸಾವಿರ ಭಕ್ತಾದಿಗಳು ಪಾಲ್ಗೊಂಡಿದ್ದರು.