ಸವದತ್ತಿ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ: ಶೌಚಾಲಯದ ಮುಂದೆಯೇ ಹಾಲಿನ ಮಳಿಗೆ!
Chaos at Savadatti bus stand: Milk stall right in front of the toilet!
ವರದಿ ಆಯ್.ಎಮ್.ಫಣಿಬಂದ
ಸವದತ್ತಿ: ಸುಕ್ಷೇತ್ರ ಶ್ರೀ ಯಲ್ಲಮ್ಮದೇವಿಯ ದರ್ಶನಕ್ಕೆ ದೇಶದ ಮೂಲೆ ಮೂಲೆಗಳಿಂದ
ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೆ, ಸವದತ್ತಿ ಬಸ್ ನಿಲ್ದಾಣದಲ್ಲಿನ ಮೂಲಭೂತ
ಸೌಕರ್ಯಗಳ ಕೊರತೆ ಮತ್ತು ಅವೈಜ್ಞಾನಿಕ ನಿರ್ಧಾರಗಳು ಪ್ರಯಾಣಿಕರನ್ನು ನರಕಯಾತನೆಗೆ
ದೂಡಿವೆ.
ಇಲ್ಲಿನ ಬಸ್ ನಿಲ್ದಾಣದ ಶೌಚಾಲಯದ ಮುಂಭಾಗದಲ್ಲೇ ನಂದಿನಿ ಹಾಲಿನ ಮಳಿಗೆ
ಸ್ಥಾಪಿಸಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಶೌಚಾಲಯದ ಗಬ್ಬು ವಾಸನೆಯ
ನಡುವೆ ಆಹಾರ ಪದಾರ್ಥಗಳ ಮಾರಾಟ ನಡೆಯುತ್ತಿದೆ. ಆರೋಗ್ಯದ ದೃಷ್ಟಿಯಿಂದ ಅತ್ಯಂತ
ಅಪಾಯಕಾರಿಯಾಗಿದೆ.
ಮೂಲಭೂತ ಸೌಕರ್ಯದ ಕೊರತೆ: ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ಭಕ್ತರು
ಹಣ ನೀಡಿ ನೀರಿನ ಬಾಟಲಿ ಖರೀದಿಸುವಂತಾಗಿದೆ.
ಮಹಿಳೆಯರ ಶೌಚಾಲಯಕ್ಕೆ ತಲಾ 10 ರೂ. ವಸೂಲಿ ಮಾಡುತ್ತಿದ್ದರೂ, ಸ್ವಚ್ಛತೆ ಮಾತ್ರ
ಮರೀಚಿಕೆಯಾಗಿದೆ. ಒಳಗೆ ಕಾಲಿಡಲಾಗದಷ್ಟು ದುರ್ವಾಸನೆ ಹರಡಿದೆ.
ಹಾಲಿನ ಮಳಿಗೆಯಿಂದಾಗಿ ಶೌಚಾಲಯದ ದಾರಿ ಮರೆಯಾಗಿದ್ದು, ಸರಿಯಾದ ದಿಕ್ಸೂಚಿ
ಫಲಕಗಳಿಲ್ಲದೆ ವೃದ್ಧರು ಮತ್ತು ಮಹಿಳೆಯರು ಪರದಾಡುವಂತಾಗಿದೆ.
"ದೂರದ ಊರುಗಳಿಂದ ದೇವಿಯ ದರ್ಶನಕ್ಕೆ ಬರುವ ನಮಗೆ ಕನಿಷ್ಠ ಕುಡಿಯುವ ನೀರು
ಸಿಗುತ್ತಿಲ್ಲ. ಶೌಚಾಲಯದ ಪಕ್ಕದಲ್ಲೇ ಹಾಲಿನ ಮಳಿಗೆ ಇಟ್ಟಿರುವುದು ಎಷ್ಟರ ಮಟ್ಟಿಗೆ
ಸರಿ ? ಅಧಿಕಾರಿಗಳು ಇದಕ್ಕೆ ಹೇಗೆ ಅನುಮತಿ ನೀಡಿದ್ದಾರೆ ? ಎಂದು ಪ್ರಯಾಣಿಕರು
ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ ಈ ಹಾಲಿನ
ಮಳಿಗೆಯನ್ನು ಸ್ಥಳಾಂತರಿಸಬೇಕು. ಮತ್ತು ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ
ಕಲ್ಪಿಸಬೇಕೇಂದು ಸಾರ್ವಜನಿಕರು, ವಿದ್ಯಾರ್ಥಿಗಳ ಆಗ್ರಹಿಸಿದ್ದಾರೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 