ದೃಷ್ಟಿ ಬದಲಿಸಿ ನೋಡುದೃಶ್ಯವೇ ಬದಲಾದೀತು- ಶ್ರೀಶೈಲ ಮನಗುತ್ತಿ

ದೃಷ್ಟಿ ಬದಲಿಸಿ ನೋಡುದೃಶ್ಯವೇ ಬದಲಾದೀತು- ಶ್ರೀಶೈಲ ಮನಗುತ್ತಿ Change your perspective and the scene will change - Srishaila Managutti

ದೃಷ್ಟಿ ಬದಲಿಸಿ ನೋಡುದೃಶ್ಯವೇ ಬದಲಾದೀತು- ಶ್ರೀಶೈಲ ಮನಗುತ್ತಿ 

ಮೂಡಲಗಿ 17 : “ಕಲಿಯುಗದಲ್ಲಿ ಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಹೇಳುವ ಈ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರ ಸಂಪ್ರದಾಯ ಕಲಿಸಿಕೊಡುವ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ದೃಷ್ಟಿ ಬದಲಾಯಿಸಿ ನೋಡಿದರೆದೃಶ್ಯ ಬದಲಾದೀತು ದೋಣಿ ಬದಲಿಸಬೇಕೆಂದಿಲ್ಲ ದಿಕ್ಕು ಬದಲಿಸಿದರೆ ಸಾಕು,ಜ್ಞಾನವನ್ನು ಗಳಿಸಲು ಸತತವಾದ ಪರಿಶ್ರಮ ಪಟ್ಟು ನಿಮಗೆ ಇಷ್ಟವಾದ ವಿಷಯದಲ್ಲಿ ಪರಿಣಿತಿ ಗಳಿಸಿ” ಎಂದು ಶ್ರೀಶೈಲ ಮನಗುತ್ತಿ ಸಹ ಶಿಕ್ಷಕರು ಸರಕಾರಿ ಪ್ರೌಢಶಾಲೆ ನೇರ್ಲಿತಾ.ಹುಕ್ಕೇರಿಇವರುಕರೆ ನೀಡಿದರು.  ಸ್ಥಳೀಯಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ2025-26 ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌.ಎಸ್‌.ಎಸ್, ದಿ.ಭಾರತ ಸ್ಕೌಟ್‌ಗೈಡ್ಸ್‌, ಯುವರೆಡ್‌ಕ್ರಾಸ್ ವಿವಿಧ ಘಟಕಗಳ ಕಾರ್ಯ ಚಟುವಟಿಕೆಗಳ ಉದ್ಘಾಟನೆಹಾಗೂ ಪ್ರಥಮ ವರ್ಷದವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ,“ ದೇಹದ ಹಸಿವಿಗಿಂತ ಬೌದ್ಧಿಕ ಹಸಿವಿಗೆ ಮಹತ್ವ ನೀಡಿ, ಜ್ಞಾನ ಸಂಪಾದನೆಗಾಗಿ ಅನುದಿನವು ಅನುಕ್ಷಣವು ಓದಿಗಾಗಿ ವಿದ್ಯಾರ್ಥಿಗಳು ಹಂಬಲಿಸಬೇಕು ಆಗ ನಿಮ್ಮ ನಿಜವಾದ ಬದುಕಿನ ನಾಯಕರಾಗುತ್ತೀರಿ”ಎಂದು ಹಲವು ನಿದರ್ಶನಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.  ಪ್ರಾಂಶುಪಾಲರಾದಶ್ರೀ ಮಹೇಶ ಕಂಬಾರಅವರುಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಮಹಾವಿದ್ಯಾಲಯವುವಿದ್ಯಾರ್ಥಿಗಳ ಜ್ಞಾನದಾಹ ನೀಗಿಸಲು ಅಗತ್ಯವಿರುವಎಲ್ಲಾರೀತಿಯ ನೆರವನ್ನು ಸದಾಕಾಲ ನೀಡುತ್ತೇವೆಅದನ್ನು ಸದುಪಯೋಗಪಡಿಸಿಕೊಳ್ಳಿ”ಎಂದು ಹೇಳಿದರು. ಇದೇ ಸಂದರ್ಭದಲ್ಲಿ 2024-25 ನೇ ಸಾಲಿನಲ್ಲಿ ಮಹಾವಿದ್ಯಾಲಯದಲ್ಲಿಅಧ್ಯಯನ ಮಾಡಿ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಕ್ರೀಡಾ ಪ್ರೋತ್ಸಾಹಕರಾದ ಶ್ರೀ ಮರೆಪ್ಪ ಮರೆಪ್ಪಗೋಳ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿದ್ದ ಸಿದ್ಧ ಸಂಸ್ಥಾನಮಠದ ಪೂಜ್ಯರಾದ ಶ್ರೀಧರಬೋಧ ಸ್ವಾಮೀಜಿಗಳು “ವಿದ್ಯಾರ್ಥಿಗಳು ಯಶಸ್ಸಿಗಾಗಿ ಓದುವುದಕ್ಕಿಂತ, ಜ್ಞಾನಕ್ಕಾಗಿ ಮನಸಿನ ಆನಂದಕ್ಕಾಗಿ ಓದಿ ಪ್ರತಿದಿನ ಅಭ್ಯಾಸ ಮಾಡಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ”ಎಂದು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿಸಾಂಸ್ಕೃತಿಕ ಸಂಯೋಜಕರಾದ ಶಿವಾನಂದ ಚಂಡಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಬಿ.ಸಿ. ಹೆಬ್ಬಾಳರವರು ಅತಿಥಿಗಳನ್ನು ಪರಿಚಯಿಸಿದರು.ಕಾರ್ಯಕ್ರಮದಲ್ಲಿ ಆಯ್‌.ಕ್ಯೂ.ಎ.ಸಿ.ಸಂಯೋಜಕರಾದ ಚೇತನ್‌ರಾಜ್‌ಬಿ ,ಯುವರೆಡ್‌ಕ್ರಾಸ್ ಸಂಯೋಜಕರಾದ ಶ್ರೀ ಬಿ.ಎಸ್‌ಕೆಸರಗೊಪ್ಪಎನ್‌. ಎಸ್‌. ಎಸ್‌.ಸಂಯೋಜಕರಾದ ಆರ್‌.ಆಯ್‌.ಆಸಂಗಿರೋವರ​‍್ಸ‌ಸಂಯೋಜಕರಾದ ಮೋಹನಕುಮಾರ, ಸಿ.ಡಿ.ಸಿ ಸದಸ್ಯರಾದ ಚಂದ್ರುಗಾಣಿಗ, ಸಂಜೀವ ಮೊಕಾಶಿ, ಹಿರಿಯಉಪನ್ಯಾಸಕರಾದಎ.ಜಿ.ಗಿರೆನ್ನವರ. ಸುಮಿತ್ರಾ ಮಾಸ್ತಿ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ ಪ್ರತಿನಿದಿಗಳು ಭಾಗವಹಿಸಿದ್ದರು.ಪೂಜಾ ಪುರಾಣಿಕ, ವರ್ಷಾಪತ್ತಾರ, ಸುಪ್ರೀತಾ ನಾವಿ ದಾನಮ್ಮ ಭದ್ರಶೆಟ್ಟಿಸ್ವಾಗತಿಸಿದರು.ರುಕ್ಮಿಣಿಅಟಮಟ್ಟಿ ಪ್ರಾರ್ಥಿಸಿದರು. ವಿದ್ಯಾಶ್ರೀ ಸಾಯನ್ನವರ ಹಾಗೂ ಪೂಜಾ ಹುಕ್ಕೇರಿ ನಿರೂಪಿಸಿದರು. ರಾಜಶ್ರೀ ಗೋಕಾ ವಿವಂದಿಸಿದರು.