ರಾಣೇಬೆನ್ನೂರಲ್ಲಿ ಚಂದ್ರಶೇಖರ್ ಪಾಟೀಲ್ ಜನ್ಮ ದಿನೋತ್ಸವ
Chandrashekhar Patil's birthday celebration in Ranebennur
ರಾಣೇಬೆನ್ನೂರು 23: ಚಂಪಾ ಅವರು ಈ ದೇಶ ಕಂಡ ಅಪ್ರತಿಮ ಪ್ರಬುದ್ಧ ಸಾಹಿತಿ. ಸೂಕ್ಷ್ಮ ಸಂವೇದನೆಯ ಮೂಲಕ ಗುರುತಿಸಿಕೊಂಡಿದ್ದ ಚಂದ್ರಶೇಖರ ಪಾಟೀಲರು ಯುವ ಸಾಹಿತಿಗಳಿಗೆ ಬಹು ಮಾರ್ಗದರ್ಶಕರಾಗಿದ್ದರು ಎಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರಭಾಕರ್ ಶಿಗ್ಲಿ ಹೇಳಿದರು.
ಅವರು, ಇಲ್ಲಿನ ವಾಗೀಶ ನಗರದ ಕಸಾಪ ಭವನದಲ್ಲಿ ಆಯೋಜಿಸಲಾಗಿದ್ದೆ, ಬಡಾವಣೆಯ ಕನ್ನಡದ ಸಾಹಿತಿ, ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ ಹಾಗೂ ಕನ್ನಡ ಹೋರಾಟಗಾರಾಗಿದ್ದ ಚಂದ್ರಶೇಖರ ಪಾಟೀಲ ಅವರ ಚಂದ್ರಶೇಖರ್ ಪಾಟೀಲ್ ಅವರ ಜನ್ಮ ದಿನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿದರು. ಚಂಪಾ ಅವರು ತಮ್ಮ ಕಾವ್ಯನಾಮದ ಮೂಲಕ ಚಿರಪರಿಚಿತರು.
ಆಡು ಮುಟ್ಟದ ಗಿಡವಿಲ್ಲ, ಚಂಪಾ ಅವರು ಬರೆಯದಿರುವ ಸಾಹಿತ್ಯವಿಲ್ಲ ಎನ್ನುವಂತೆ ಅವರು ಜನಜನಿತರಾಗಿದ್ದರು ಎಂದರು. ಚಂಪಾ ಅವರು ನಮ್ಮ ಜಿಲ್ಲೆಯವರು ಎನ್ನುವುದು ನಮಗೆಲ್ಲ ಬಹಳ ಹೆಮ್ಮೆ. ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಅರಸಿ ಬಂದಿವೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದಾಗ ಅಭಿವೃದ್ಧಿಗಾಗಿ ಸಾಕಷ್ಟು ಪರಿಶ್ರಮ ಪಟ್ಟವರು 2017 ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಸಮ್ಮೇಳನ ಅಧ್ಯಕ್ಷರಾಗಿ ಹೊಸ ದಿಕ್ಕುಗಳನ್ನು ತೋರಿಸಿದ ಮಹಾನ್ ಚೇತನ ಅವರಾಗಿದ್ದರು ಎಂದರು. ಕಾರ್ಯಕ್ರಮದಲ್ಲಿ ಹೋಬಳಿ ಘಟಕದ ಅಧ್ಯಕ್ಷ ಬಸನಗೌಡ ಉಮ್ಮನಗೌಡ್ರ, ರವಿಕುಮಾರ ಪಾಟೀಲ, ಚಂದ್ರಶೇಖರ ಮಡಿವಾಳರ, ಪರಶುರಾಮ ಸವಣೂರ, ಕರಬಸಪ್ಪ ಏಕಬೋಟೆ, ಭರಮಪ್ಪ ಕುರುವತ್ತಿ ಸೇರಿದಂತೆ ಪದಾಧಿಕಾರಿಗಳು ದತ್ತಿಧಾನಿಗಳು ಗಣ್ಯರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 