ಚಂದ್ರಶೇಖರಯ್ಯ ಬೂದಿಹಾಳಮಠ ಬೀಳ್ಕೊಡುಗೆ: ಸಾಧಕರಿಗೆ ಸನ್ಮಾನ ಸಮಾರಂಭ
Chandrashekariah Budihalamath bids farewell: Honor ceremony for achievers
ಮುದ್ದೇಬಿಹಾಳ 20: ಪ್ರತಿಯೊಬ್ಬ ಸರಕಾರಿ ಅಧಿಕಾರಿಗಳಿಗೆ ಸೇವಾ ನಿವೃತ್ತಿ ಸಹಜವಾಗಿದ್ದು. ಆದರೇ ತಮ್ಮ ಸರಕಾರಿ ಸೇವೆಯಲ್ಲಿ ಎಲ್ಲರ ಪ್ರೀತಿ, ವಿಶ್ವಾಸ ಗಳಿಸುವ ಮೂಲಕ ಒಂದೂ ಕಪ್ಪು ಚಿಕ್ಕೆ ಇಲ್ಲದಂತೆ ಬೆಂಗಳೂರಿನ ಕೆಬಿಜೆಎನ್‌ಎಲ್ ಇಲಾಖೆಯ ಎಂ ಡಿ ಅವರ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸಿದ ಚಂದ್ರಶೇಖರಾ್ಯ ಬೂದಿಹಾಳಮಠ ಅವರು ಇತರೇ ಸರಕಾರಿ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ಬ, ಬಾಗೇವಾಡಿಯ ಸಂಸ್ಥಾನ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆ ಹತ್ತಿರವಿರುವ ಟಾಪ್ ಇನ್ ಟೌನ್ ಮಂಗಲಭವನದಲ್ಲಿ ಹಮ್ಮಿಕೊಂಡಿದ್ದ ಕೆಬಿಜೆಎನ್‌ಎಲ್ ಇಲಾಖೆಯ ಎಂ ಡಿ ಅವರ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸಿದ ಚಂದ್ರಶೇಖರಾ್ಯ ಬೂದಿಹಾಳಮಠ ಅವರ ಸೇವಾ ನಿವೃತ್ತಿ ಹಾಗೂ ಸಾಧಕರಿಗೆ ನಾಗರೀಕ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡ ಜಿಲ್ಲಾ ಪಂಚಾಯತಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಬಿ.ಎಸ್.ಮೂಗನೂರಮಠ ಅವರದು ಯುವ ಅಧಿಕಾರಿ, ನೌಕರರಿಗೆ ಮಾದರಿ ಆಗಿರುವ ವ್ಯಕ್ತಿತ್ವ. ಕೆಲಸದಲ್ಲಿನ ಅವರ ಪ್ರಾಮಾಣಿಕತೆ, ಬದ್ಧತೆ ಮತ್ತು ತ್ವರೀತತೆಗಳು ಅವರನ್ನು ಮೇಲ್ಮಟ್ಟಕ್ಕೆ ಎರಿಸಿವೆ. ಅವರ ಡಿಎಸ್ ಅವಧಿಯಲ್ಲಿ ಧಾರವಾಡ ಜಿಲ್ಲಾ ಪಂಚಾಯತ ಉತ್ತಮ ಸಾಧನೆ ಮಾಡಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು.
ಅನುಭವಿಕರಾದ, ಪ್ರಾಮಾಣಿಕರಾದ ಮತ್ತು ಕೆಲಸದಲ್ಲಿ ಬದ್ಧತೆ ಹೊಂದಿರುವ ಅಧಿಕಾರಿಗಳು ಇಲಾಖೆಯ ಆಸ್ತಿ ಆಗಿರುತ್ತಾರೆ. ಕೆಬಿಜೆಎನ್ ಎಲ್ ಇಲಾಖೆ ಎಂ ಡಿ ಅವರು ಆಪ್ತ ಸಹಾಯಕರಾಗಿ ಮೇಲಿನ ಅಧಿಕಾರಿಗಳಿಗೆ ಸೂಕ್ತ ಸಲಹೆ ಮತ್ತು ಕೆಳಗಿನ ಅಧಿಕಾರಿಗಳಿಗೆ ಸರಿಯಾದ ಮಾರ್ಗದರ್ಶನ ಮಾಡುವ ಸಾಮಥ್ರ್ಯ ಹೊಂದಿರಬೇಕು. ಅಂತಹ ಶಕ್ತಿ, ಯುಕ್ತಿ ಚಂದ್ರಶೇಖರಯ್ಯಾ ಬೂದಿಹಾಳಮಠ ಅವರಿಗಿತ್ತು. ಅವರಿಗಿರುವ ಅಪಾರ ಅನುಭವ ಮತ್ತು ಸಾಮಾಜಿಕವಾಗಿ, ವಿಶೇಷವಾಗಿ ಗ್ರಾಮೀಣ ಜನರ, ಜನಪ್ರತಿನಿಧಿಗಳ ಬಗ್ಗೆ ಅವರಿಗಿದ್ದ ಪ್ರೀತಿ, ವಿಶ್ವಾಸ, ಕಳಕಳಿಗಳು ನಮಗೆ ಪಾಠವಾಗಿವೆ.
ಸರಕಾರಿ ಸೇವೆ ದೇವರ ಕೆಲಸ ಎಂಬುದು ಮಾತಿಗಾಗಿ, ತೋರಿಕೆಗಾಗಿ ಇರಬಾರದು. ಅದನ್ನು ಅಂತರಾಳದಲ್ಲಿ ಅನುಭವಿಸಿ, ಬಾಹ್ಯವಾಗಿ ಪ್ರಕಟಿಸಬೇಕು. ನೌಕರಿ ಬರೀ ನೌಕರಿ ಅಗಿದ್ದರೆ ಅದರಲ್ಲಿ ಒಂದು ರೀತಿಯ ಜಡತ್ವ ಬರುತ್ತದೆ. ಕರ್ತವ್ಯದಲ್ಲಿ ಖುಷಿ, ಆಸಕ್ತಿ, ಪ್ರಾಮಾಣಿಕತೆ, ಬದ್ಧತೆ, ನಮ್ಮತನ, ನಮ್ಮದು ಎಂಬ ಭಾವನೆಗಳಿದ್ದರೆ ಅದು ಸೇವೆ ರೂಪದಲ್ಲಿ ಬದಲಾಗುತ್ತದೆ. ಈ ಗುಣಗಳು ಬೂದಿಹಾಳಮಠ ಅವರಲ್ಲಿ ಇದ್ದವು, ಮಾತ್ರವಲ್ಲದೇ ಬಡಕುಟುಂಭದಲ್ಲಿ ಬೆಳೆದುಬಂದ ಇವರು ಜೀವನದಲ್ಲಿ ಬಹಳ ಕಷ್ಟಪಟ್ಟು ಅನುಭವಿಸಿದವರು ಮುಂದೆ ಕೇವಲ ಒಬ್ಬ ಟೈಪಿಷ್ಟಾಗಿ ಸರಕಾರಿ ಸೇವೆ ಪ್ರಾರಂಭಿಸಿದ ಅವರು ಬಡತದಲ್ಲಿದ್ದ ಎಲ್ಲ ಸಹೋದರಿಗೆ ತಂದೆ ಸ್ಥಾನದಲ್ಲಿ ನಿಂತು ಅವರ ಶ್ರೇಯಸ್ಸು ಬಯಸಿದವರು ಅದಕ್ಕಾಗಿ ನಮ್ಮ ಜನರು, ಜನಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಅಪಾರ ಗೌರವ, ಪ್ರೀತಿ ತೋರಿದ್ದಾರೆ. ಇದನ್ನು ಇಂದಿನ ಎಲ್ಲ ನೌಕರರು ತಮ್ಮ ವೃತ್ತಿ ಜೀವನದಲ್ಲಿ ಬೆಳೆಸಿಕೊಳ್ಳಬೇಕು.
ಗೌರವ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರ ಬೂದಿಹಾಳಮಠ ಅವರು, ನನಗೆ ಕೆಲಸದ ಸಂತೃಪ್ತಿ ಇದೆ. ಜನರ ಜೊತೆ ನೇರಬಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನನ್ನ ಪೂರ್ವ ಜನ್ಮದ ಪುಣ್ಯದಿಂದ, ಹಿರಿಯರ ಆಶಿರ್ವಾದದಿಂದ ಈ ಇಲಾಖೆಯಲ್ಲಿ ನೌಕರಿ ಲಭಿಸಿದೆ. ಜನರ ಸೇವೆ ಮಾಡುವ ಸೌಭಾಗ್ಯ ನನ್ನದಾಗಿದೆ. ಈ ಅವಕಾಶಕ್ಕಾಗಿ ಚಿರಋಣಿ ಆಗಿದ್ದೇನೆ ನನಗೂ ಮತ್ತು ನಮ್ಮ ಬೂದಿಹಾಳಮಠ ಕುಟುಂಭಕ್ಕೆ ಸದಾ ಒಂದಲ್ಲ ಒಂದು ರೀತಿ ಮಶಾರ್ಗದರ್ಶಕರಾಗಿ ಸಲಹೇ ನೀಡಿ ಗೌರವಿಸಿದ ಮುದ್ದೇಬಿಹಾಳದ ಎಲ್ಲ ಗಣ್ಯರಿಗೆ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಭಾವುಕರಾಗಿ ನುಡಿದರು.
ಈ ವೇಳೆ ನಿವೃತ್ತ ಶಿಕ್ಷಕ ಜಿ ಆರ್ ನಾವದಗಿ, ಭಾರತೀಯ ಸೇವೆ ನಿವೃತ್ತ ಲೇಪ್ಟಿನೆಂಟ್ ಕರ್ನಲ್ ಶಿವಾನಂದ ಬಿರಾದಾರ, ಪ್ರಗತಿಪರ ರೈ ಶೃಇಶೈಲ ಮೇಟಿ, ವೈದ್ಯ ಡಾ, ಚಂದ್ರಶೇಖರ ಶಿವಯೋಗಿಮಠ, ಇಂಜಿನಿಯರ ಪ್ರಶಾಂತ ಬಿದರಕೋಟಿ ಅವರು ವಿಶೇಷ ಸನ್ಮಾನಿಸಿ ಗೌರವಿಸಲಾಯಿತು.
ಮುದ್ದೇಬಿಹಾಳ ಹೊಸಮಠದ ಶ್ರೀ ಸಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸಿದ್ದರು.ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ ಬಿ ನಾವದಗಿ, ಕರ್ನಾಟಕ ಬ್ಯಾಂಕಿನ ನಿರ್ದೇಶಕ ಸತೀಶ ಓಸ್ವಾಲ್, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ,ದಾನಯ್ಯ ಹಿರೇಮಠ, ಮಹಾಂತೇಶ ಬೂದಿಹಾಳಮಠ ಸೇರಿದಂತಯೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 