ಚಂದ್ರಕಾಂತ ಬೆಲ್ಲದ ತಂಡದಿಂದ ಮತ ಯಾಚನೆ
Chandrakanth Bellad's team appeals for votes
ಗದಗ 17 : ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣೆಯು ಇದೆ ಮೇ.25 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಶ್ರೀ ಚಂದ್ರಕಾಂತ ಬೆಲ್ಲದ ಮತ್ತು ಮಕ್ಕಳ ಮಹರ್ಷಿ ಶಂಕರ ಹಲಗತ್ತಿ ಅವರ ತಂಡವು ಗದಗ ನಗರಕ್ಕೆ ಆಗಮಿಸಿ ಸದಸ್ಯರಲ್ಲಿ ಮತಯಾಚನೆ ಮಾಡಿದರು.
ಪ್ರಧಾನ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿ ಶ್ರೀ ಶಂಕರ ಹಲಗತ್ತಿ , ವೀರಣ್ಣ ಒಡ್ಡೀನ, ಡಾ.ಜಿನದತ್ತ ಹಡಗಲಿ, ಶಿವಾನಂದ ಭಾವಿಕಟ್ಟಿ , ಡಾ.ಧನವಂತ ಹಾಜವಗೋಳ ಅವರ ತಂಡವು ಪಂಚಾಕ್ಷರ ಗವಾಯಿಗಳ ಪದವಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಮೂರು ವರ್ಷಗಳ ಅವಧಿಯಲ್ಲಿ ಕೈಕೊಂಡಿದ್ದ ಕಾರ್ಯಗಳ ಕುರಿತು ವಿವರಿಸಿದರಲ್ಲದೆ ತಮ್ಮ ಮತಗಳಲ್ಲದೆ ಇತರ ಸದಸ್ಯರ ಮತಗಳನ್ನು ಚಂದ್ರಕಾಂತ ಬೆಲ್ಲದ ಅವರ ಗುಂಪಿಗೆ ಹಾಕಿಸುವ ಮೂಲಕ ಗುಂಪಿನ ಎಲ್ಲ ಹದಿನೈದು ಸದಸ್ಯರನ್ನೂ ಬೆಂಬಲಿಸಿ ಆಯ್ಕೆ ಮಾಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಿಪಿಜಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಜಶೇಖರ ದಾನರಡ್ಡಿ, ಪ್ರೊ.ಬಸವರಾಜ ಪೂಜಾರ್ , ಪ್ರೊ.ಬಾಹುಬಲಿ ಜೈನರ, ನಿವೃತ್ತ ಪ್ರಾಚಾರ್ಯ ವಿ.ಎಂ.ಗುರುಮಠ, ನಿವೃತ್ತ ಪ್ರಾಚಾರ್ಯ ಡಾ.ಪ್ರಭು ಗಂಜಿಹಾಳ ಮೊದಲಾದವರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 