ಪ್ರತಿಷ್ಠಿತ ಎಮಜಿಂರ್ಗ್ ವಿವಿ ಪ್ರಶಸ್ತಿ ಸ್ವೀಕರಿಸಿದ ಕುಲಪತಿ ಪ್ರೊ. ತ್ಯಾಗರಾಜ

ಪ್ರತಿಷ್ಠಿತ ಎಮಜಿಂರ್ಗ್ ವಿವಿ ಪ್ರಶಸ್ತಿ ಸ್ವೀಕರಿಸಿದ ಕುಲಪತಿ ಪ್ರೊ. ತ್ಯಾಗರಾಜ Chancellor Prof. Tyagaraja who received the prestigious Emazingrg University award

ಬೆಳಗಾವಿ 17: ಸಮಾಜದ ಅಂಚಿನಲ್ಲಿರುವ ಕಟ್ಟಕಡೆಯ ವಿದ್ಯಾರ್ಥಿಯನ್ನು ಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಅವರ ಭವಿಷ್ಯವನ್ನು ರೂಪಿಸುವುದಕ್ಕಾಗಿ ಶ್ರಮಿಸುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾಲಯ ಮುನ್ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ನಮ್ಮ ಸಿಬ್ಬಂದಿಗಳು ಸದಾ ಕಾರ್ಯಪ್ರವೃತ್ತರಾಗುತ್ತಿದ್ದಾರೆ. ರಾಚವಿವಿ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿ ಶ್ಲಾಘಿಸಿದರು. ಅವರ ಕಾರ್ಯತತ್ಪರತೆ ಮತ್ತು ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರ ಅವಿರತ ಪ್ರಯತ್ನದಿಂದ ಇಂಥ ಒಂದು ಪ್ರತಿಷ್ಠಿತ ಪ್ರಶಸ್ತಿಗೆ ಇಂದು ಭಾಜನರಾದೆವು ಎಂದು ರಾಚವಿವಿ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅವರು ಹೇಳಿದರು. 

ಐಐಟಿ ಬಾಂಬೆಯ ಫೋಸ್ಸೀ (ಜಿಐಎಸ್) ಯೋಜನೆ ಹಾಗೂ ಋಖಿ ಮೂಲಕ ಶಿಕ್ಷಣಕ್ಕಾಗಿ ರಾಷ್ಟ್ರೀಯ ಮಿಷನ್ (ಓಒಇಋಖಿ), ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಮುಂಬೈನ ಐಐಟಿಯಲ್ಲಿ ಗುರುವಾರದಂದು ಆಯೋಜಿಸಲಾಗಿದ್ದ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದಿಂದ ದೊರೆತ ಎಮಜಿಂರ್ಗ್ ಯುನಿವರ್ಸಿಟಿ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು. 

ಸಂಶೋಧನೆ, ಸಮಾಜ ಸೇವೆ, ಆಡಳಿತ, ಶಿಕ್ಷಣ, ಪರಿಸರ ಸಂರಕ್ಷಣೆ ಮುಂತಾದ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. ಎಲ್ಲಾ ಪ್ರಶಸ್ತಿಗಳನ್ನು ಇಸ್ರೋ ಮಾಜಿ ಅಧ್ಯಕ್ಷ ಪದ್ಮಶ್ರೀ ಡಾ. ಕಿರಣ ಕುಮಾರ ಅವರು ಪ್ರದಾನ ಮಾಡಿದರು. 

ಕರ್ನಾಟಕದಲ್ಲಿ ಇಲ್ಲಿಯವರೆಗೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿರುವುದು ಕೇವಲ ಎರಡು ಸಂಸ್ಥೆಗಳು ಮಾತ್ರ. ಒಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಎರಡನೆಯದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ. ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿಯಾದ, ವೀರವನಿತೆ ರಾಣಿ ಚನ್ನಮ್ಮನ ನಾಮಧೇಯ ಹೊಂದಿದ ಉತ್ತರ ಕರ್ನಾಟಕದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾದ ರಾಣಿ ವಿಶ್ವವಿದ್ಯಾಲಯಕ್ಕೆ ಬಂದಿರುವುದು ಅತ್ಯಂತ ಸಂತಸ ತಂದಿದೆ. ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು, ವಿವಿಯ ಸಂಯೋಜಿತ ಕಾಲೇಜಿನ ಸಿಬ್ಬಂದಿಗಳು ಹರ್ಷವ್ಯಕ್ತಪಡಿಸಿದರು. 

ರಾಚವಿವಿ ಭೂಗೋಳಶಾಸ್ತ್ರ ವಿಭಾಗದ ಪ್ರೊ. ಬಸವರಾಜ ಬಗಾಡೆ ಅವರು ನ್ಯಾಷನಲ್ ಜಿಯೋಸ್ಪೆಷಿಯಲ್ ಎಮಜಿಂರ್ಗ್ ಫ್ಯಾಕಲ್ಟಿ ಫೆಲೋ ಅವಾರ್ಡ್‌ಗೆ ಭಾಜನರಾದರು. 

ಈ ರಾಷ್ಟ್ರ ಮಟ್ಟದ ಗೌರವದೊಂದಿಗೆ ಫೋಸ್ಸೀ ಜಿಐಎಸ್ (ಎನ್‌ಎಂಇಐಸಿಟಿ) ಯೋಜನೆಯ ಹಲವಾರು ಪ್ರಯೋಜನಗಳನ್ನು ಇನ್ನೂ ಮುಂದೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಸಂಬಂಧಿತ ಕಾಲೇಜುಗಳು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ಗಳಿಗೆ ಮುಕ್ತವಾಗಲಿವೆ.