ವಿಜಯಪುರದಲ್ಲಿ ಚಾಲುಕ್ಯರ ಶರಭದ ಉಬ್ಬು ಶಿಲ್ಪ ಪತ್ತೆ : ಸಂರಕ್ಷಣೆಗೆ ಇತಿಹಾಸ ಸಂಶೋಧಕ ಲಾಯಪ್ಪ ಇಂಗಳೆ ಆಗ್ರಹ
Chalukya relief sculpture of Sharabha discovered in Vijayapura: History researcher Layappa Ingale de
ವಿಜಯಪುರ 05: ನಗರದ ಪುರಾತನ ಕೋಟೆಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶರಭ ದ ಉಬ್ಬು ಶಿಲ್ಪ ಪತ್ತೆಯಾಗಿದ್ದು, ವಿಜಯಪುರದ ರಾಷ್ಟ್ರೀಯ ಸಂಶೋಧನಾ ವೇದಿಕೆ ಅಧ್ಯಕ್ಷ ಲಾಯಪ್ಪ ಇಂಗಳೆ ಅವರು ಉಬ್ಬು ಶಿಲ್ಪವನ್ನು ಗುರುತಿಸಿದ್ದು. ವಿಜಯಪುರ ನಗರದ ಕೋಟೆಯು ಕಲ್ಯಾಣ ಚಾಲುಕ್ಯರು ಮತ್ತು ದೇವಗಿರಿ ಯಾದವರು ನಿರ್ಮಿಸಿರುವುದಕ್ಕೆ ಪ್ರಮುಖ ಐತಿಹಾಸಿಕ ದಾಖಲೆಯಾಗಿದೆ. ಎಂದು ಅವರು ತಿಳಿಸಿದ್ದಾರೆ.
ಶರಭ ಎಂದರೆ ಹಿಂದೂ ಪುರಾಣಗಳಲ್ಲಿ ವರ್ಣಿಸಲಾದ, ಸಿಂಹದ ಮುಖ ಮತ್ತು ಹಕ್ಕಿಯ ರೆಕ್ಕೆಗಳು ಹಾಗೂ ಎಂಟು ಕಾಲುಗಳನ್ನು ಹೊಂದಿರುವ ಶಕ್ತಿಶಾಲಿ ಪ್ರಾಣಿಯಾಗಿದೆ. ಇದು ಆನೆ ಮತ್ತು ಸಿಂಹಕ್ಕಿಂತ ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲ್ಪಟ್ಟಿದೆ. ನರಸಿಂಹನ ಕೋಪವನ್ನು ಶಾಂತಗೊಳಿಸಲು ಶಿವನು ಶರಭನ ಅವತಾರ (ಶರಭೇಶ್ವರ) ತಾಳಿದನು ಎಂದು ಶೈವ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಇದು ಒಂದೇ ಜಿಗಿತದಲ್ಲಿ ಬೃಹತ್ ಕಣಿವೆಗಳನ್ನು ಜಿಗಿಯಬಲ್ಲಂತಹ ವೇಗ ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಲಾಗಿದೆ. ಹಿರಣ್ಯಕಶ್ಯಪನನ್ನು ವಧಿಸಿದ ನಂತರ ಉಗ್ರರೂಪಿಯಾಗಿದ್ದ ನರಸಿಂಹನನ್ನು ಪಳಗಿಸಲು ಶಿವನು ಈ ಅವತಾರ ಧರಿಸಿದ್ದು ಶರಭದ ಪೌರಾಣಿಕ ಹಿನ್ನಲೆಯಾಗಿದೆ. ಬೌದ್ಧ ಜಾತಕ ಕಥೆಗಳಲ್ಲಿ, ಶರಭನು ಬುದ್ಧನ ಹಿಂದಿನ ಜನ್ಮದ ಸಂಕೇತವಾಗಿ ಕಾಣಿಸಿಕೊಳ್ಳುತ್ತದೆ, ಇದು ಶಕ್ತಿ ಮತ್ತು ಕರುಣೆಯನ್ನು ಪ್ರತಿನಿಧಿಸುತ್ತದೆ. ಕೆಲವೊಮ್ಮೆ ಇದನ್ನು ಗಂಡಭೇರುಂಡದೊಂದಿಗೆ ಹೋಲಿಸಲಾಗುತ್ತದೆ, ಗಂಡಭೇರುಂಡವು ವಿಷ್ಣುವಿನ ಸಂಕೇತವಾದರೆ ಶರಭವು ಮುಖ್ಯವಾಗಿ ಶಿವನ ಶಕ್ತಿಯ ಸಂಕೇತವಾಗಿದೆ.
ಪ್ರತಿಮಾಶಾಸ್ತ್ರದ ಪ್ರಕಾರ ಶರಭ ಎಂದರೆ ಬೇಟೆಗಾರ ಭಾಗಶಃ ಪ್ರಾಣಿ, ಭಾಗಶಃ ಪಕ್ಷಿ ಮತ್ತು ದೊಡ್ಡ ಕೀರೀಟವನ್ನು ಧರಿಸಿರುವ ಎರಡು ತಲೆಗಳೊಂದಿಗೆ ದೇಹವನ್ನು ಹೊಂದಿದ್ದಾನೆ ಎಂದು ವಿವರಿಸುತ್ತದೆ. ಇಂತಹ ಅಪರೂಪದ ಐತಿಹಾಸಿಕ, ಪಾರಂಪರಿಕ ಹಿನ್ನಲೆ ಹೊಂದಿರುವ ಕಲ್ಯಾಣ ಚಾಲುಕ್ಯರು ಮತ್ತು ದೇವಗಿರಿ ಯಾದವರ ಇತಿಹಾಸ ಸಾರುವ ಶರಭದ ಉಬ್ಬು ಶಿಲ್ಪವು ವಿಜಯಪುರ ಕೋಟೆಯಲ್ಲಿ ಕೆತ್ತಿಸಿರುವುದು ಚಾಲುಕ್ಯರು ಮತ್ತು ಯಾದವರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಇತಿಹಾಸ ಸಂಶೋಧಕ ಲಾಯಪ್ಪ ಇಂಗಳೆ ತಿಳಿಸಿರುವ ಅವರು ಐತಿಹಾಸಿಕ ಶರಭದ ಶಿಲ್ಪ ಇರುವ ಕೋಟೆ ಭಾಗವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 