ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರಾಗಿ ಚಲ್ಲಾ ಮಹೇಶ್ ಆಯ್ಕೆ

ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರಾಗಿ ಚಲ್ಲಾ ಮಹೇಶ್ ಆಯ್ಕೆ  Challa Mahesh elected as district president of Lorry Owners Association

ಬಳ್ಳಾರಿ 16 : ಜಿಲ್ಲಾ ಲಾರಿ ಮಾಲೀಕರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಚಲ್ಲಾ ಮಹೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಎಲ್ಲರ ಸಹಮತದಿಂದ ಚಲ್ಲಾ ಮಹೇಶ್ ಅವರನ್ನು ಅವಿರೋಧವಾಗಿ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.  ಅದೇ ರೀತಿಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ ವೈ ಶ್ರೀನಿವಾಸ್ ಮತ್ತು ನಾರಾಯಣಸ್ವಾಮಿ ಕಾರ್ಯದರ್ಶಿಯಾಗಿ ಜೆ.ಎಸ್ ರಮೇಶ್ ಬಾಬು ಖಜಂಚಿಯಾಗಿ ಲಕ್ಷ್ಮಿ ನಾರಾಯಣ ಇವರುಗಳನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ ಎಂದು ಕಾರ್ಯದರ್ಶಿ ಶ್ರೀನಿವಾಸ್ ತಿಳಿಸಿದ್ದಾರೆ.

ನೂತನ ಜಿಲ್ಲಾಧ್ಯಕ್ಷ ಮಹೇಶ್ ಮಾತನಾಡಿ, ಡೀಸೆಲ್ ಬೆಲೆಯ ಸತತ ಏರಿಕೆಯಿಂದ ಲಾರಿ ಮಾಲೀಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಇದರ ಜೊತೆಗೆ ಲಾರಿಗಳ ಬಾಡಿಗೆಯನ್ನು ಸಹ ಹೆಚ್ಚಿಸಬೇಕು ಎಂಬುದು ಸೇರಿದಂತೆ ಲಾರಿ ಮಾಲೀಕರ ಸರ್ವ ಸಮಸ್ಯೆಗಳನ್ನು ಪರಿಹರಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಜೊತೆಗೆ ಎಲ್ಲರನ್ನೂ ಸಹ ಮತಕ್ಕೆ ಪಡೆದು ಸಂಘವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ, ಇನ್ನೆಷ್ಟು ಲಾರಿ ಮಾಲೀಕರನ್ನು ಈ ಸಂಘದಲ್ಲಿ ಸದಸ್ಯರನ್ನಾಗಿ ನೋಂದಣಿ ಮಾಡುವ ಉದ್ದೇಶವಿದೆ ಎಂದರು.  ಈ ಸಂದರ್ಭದಲ್ಲಿ ಜಿ.ಶ್ರೀನಿವಾಸ್ ರಮೇಶ ಬಾಬು ನಾರಾಯಣ್ ಸ್ವಾಮಿ ಲಕ್ಷ್ಮಿ ನಾರಾಯಣ ಸೇರಿದಂತೆ ಹಲವಾರು ಜನ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಸದಸ್ಯರು ಇದ್ದರು.