ಚಳಗೇರಿ ಟೋಲ್ ಗೇಟ್ ಶುಲ್ಕ ವಸೂಲಿ : ಸ್ಥಳಿಯ ವಾಹನಗಳಿಗೆ ಶುಲ್ಕಬೇಡ ಕರವೇ ಆಗ್ರಹ
Chalageri toll gate fee collection: Demand for local vehicles to not be charged
ರಾಣೇಬೆನ್ನೂರು : ಅ, 17 ಕುಮಾರ ಪಟ್ಟಣಂ ಕಡೆಯಿಂದ ರಾಣೆಬೆನ್ನೂರ್ ಕಡೆಗೆ ವಾಹನಗಳು ಸಂಚರಿಸಬೇಕಾದರೆ ಟೋಲ್ ಶುಲ್ಕದ ಹೊಡೆತಕ್ಕೆ ಸುಸ್ತಾಗಿದ್ದಾರೆ ಕೂಡಲೇ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಆಗ್ರಹಿಸಿದ ಕರ್ನಾಟಕ ರಕ್ಷಣಾ ವೇದಿಕೆ( ಟಿ.ಎ. ನಾರಾಯಣ ಗೌಡ್ರು ಬಣ) ಕಾರ್ಯಕರ್ತರು ಟೋಲ್ ವ್ಯವಸ್ಥಾಪಕ ಕೇಶವರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಅಧ್ಯಕ್ಷ ಕೊಟ್ರೇಶ ಗುತ್ತೂರು ಅವರು,
ಹರಿಹರ ಚಳಗೇರಿ ಮದ್ಯ ಇಟ್ಟಂಗಿ ಭಟ್ಟಿಗಳು ಸಾಕಷ್ಟಿವೆ. ಮಜಡಾ ವಾಹನಗಳಲ್ಲಿ ಇಟ್ಟಂಗಿಗಳು ಸಾಗಿಸುವುದು ಸರ್ವೇಸಾಮಾನ್ಯ. ರಾಣೆಬೆನ್ನೂರಿಗೆ ಹೋಗಬೇಕಾದರೆ ಕನಿಷ್ಠ 325 ಟೂಲ್ ಶುಲ್ಕ ಪಾವತಿಸಬೇಕಾಗುತ್ತದೆ. ಇದರಿಂದ ವಾಹನ ಸವಾರರಿಗೆ ಆರ್ಥಿಕ ಭಾರವಾಗಿ, ದೊರೆಯುವ ಬಾಡಿಗೆಗೆ ಸಂಚಕಾರ ಬರುತ್ತದೆ ಇದರಿಂದ ಜೀವನ ನಿರ್ವಹಿಸುವುದು ಕಷ್ಟ ಸಾಧ್ಯವಾಗುತ್ತದೆ. ಎಂದಿದ್ದಾರೆ.
ಈ ಹಿಂದೆ ಇದ್ದ ಟೋಲ್ ವ್ಯವಸ್ಥಾಪಕರು ಸ್ಥಳೀಯವಾಗಿರುವ ಇಟ್ಟಂಗಿ ಸಾಗಿಸುವ ಮತ್ತು ಇಲ್ಲಿಂದ ಸಂಚರಿಸುವ ವಾಹನಗಳಿಗೆ ಯಾವುದೇ ಶುಲ್ಕ ವಿಧಿಸುತ್ತಿರಲಿಲ್ಲ. ಹೊಸ ವ್ಯವಸ್ಥೆಯಿಂದ ಶುಲ್ಕ ಪಾವತಿಸಲು ಮುಂದಾಗಿದ್ದಾರೆ ಇದು ಸರಿಯಾದ ಕ್ರಮವಲ್ಲ ಎಂದು ಸಲ್ಲಿಸಿರುವ ಮನವಿಯಲ್ಲಿ ಅವರು ಶುಲ್ಕ ಪಡೆಯಲು ಮುಂದಾದ ಕ್ರಮವನ್ನು ಖಂಡಿಸಿದ್ದಾರೆ.
ಸ್ವರಾಜ್ ಮಜಡಾದಲ್ಲಿ ಇಟ್ಟಂಗಿ ತುಂಬಿ ಸಾಗಿಸಬೇಕಾದರೆ ಬಾಡಿಗೆದರ 2500 ಮಾತ್ರ
ಅದರಲ್ಲಿ ಡೀಸೆಲ್ 800, ಹಮಾಲಿ 800 ಚಾಲಕರ ಭತ್ತೆ 300 ಮತ್ತು ಗಾಡಿ ಸವಕಳಿ 500 ಸೇರಿದರೆ 2400, ಅದರಲ್ಲಿ 325 ಶುಲ್ಕ ನೀಡಿದರೆ ಉಳಿಯುವುದೇನು? ಎನ್ನುವ ಪ್ರಶ್ನೆ ಕಾಡುತ್ತಲ್ಲಿದೆ. ಇದರ ಬೇರೆ ಬೇರೆ ವಾಹನಗಳಿಗೆ ಸಂಬಂಧಿಸಿದಂತೆ ಅನೇಕ, ವ್ಯವಸ್ಥಾಪಕರು ಕೂಡಲೇ, ಪರಾಮರ್ಶಿಸಿ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು ಇಲ್ಲವಾದಲ್ಲಿ, ಚಳಗೇರಿ ಟೋಲ್ ವಿರುದ್ಧ, ಶೀಘ್ರದಲ್ಲಿಯೇ ರಸ್ತೆ ತಡೆದು, ಮುತ್ತಿಗೆ ಹಾಕಿ ಪ್ರತಿಭಟನೆಗಿಳಿಯುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾ ನೀರತರು ಮನವಿಯಲ್ಲಿ ಎಚ್ಚರಿಸಿದ್ದಾರೆ. ಮನವಿ ಸ್ವೀಕರಿಸಿ ಮಾತನಾಡಿದ ಕೇಶವರೆಡ್ಡಿ ಅವರು, ಈ ಕುರಿತು ಮುಖ್ಯ ವ್ಯವಸ್ಥಾಪಕರಲ್ಲಿ ಸಮಾಲೋಚಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 