ಚಚಡಿ ಏತ ನೀರಾವರಿ ಯೋಜನೆ: 2718 ಹೇಕ್ಟರ್ ಕ್ಷೇತ್ರಕ್ಕೆ ನೀರಾವರಿ ಮಾಡುವ ಉದ್ದೇಶ

ಚಚಡಿ ಏತ ನೀರಾವರಿ ಯೋಜನೆ: 2718 ಹೇಕ್ಟರ್ ಕ್ಷೇತ್ರಕ್ಕೆ ನೀರಾವರಿ ಮಾಡುವ ಉದ್ದೇಶ Chachadi Lift Irrigation Project: Aims to irrigate 2718 hectares of land

ಲೋಕದರ್ಶನ ವರದಿ 

ನೇಸರಗಿ 18: ಗೋಕಾಕ, ಬೈಲಹೊಂಗಲ, ಸವದತ್ತಿ ತಾಲೂಕಿನ ಗ್ರಾಮಗಳಿಗೆ ನೀರಾವರಿಗೊಳಪಡುವ ಚಚಡಿ ಏತ ನೀರಾವರಿ ಯೋಜನೆಗೆ  ಮಾರ್ಕಂಡೇಯ ಬಲದಂಡೆ ಮುಖ್ಯ ಕಾಲುವೆಯಿಂದ ಸುಮಾರು 2718 ಹೇಕ್ಟರ್ ಕ್ಷೇತ್ರಕ್ಕೆ ನೀರಾವರಿ ಮಾಡಲು ಉದ್ದೇಶಿಸಲಾಗಿದೆ ಎಂದು ಗೋಕಾಕ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಹೊನ್ನಪ್ರಭು ಕಾಕಂಡಕಿ ಹೇಳಿದರು. 

 ಸಮೀಪದ ಮಿಡಕನಟ್ಟಿ ಗ್ರಾಮದಲ್ಲಿ  ಚಚಡಿ ಎತ ನೀರಾವರಿ ಯೋಜನೆಯ ಪಂಪ್ ಸೆಟ್ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಖನಗಾಂವ,ವಣ್ಣೂರ, ಗಜಮಿನಾಳ, ಕಲಕುಪ್ಪಿ,ಮೇಕಲಮರಡಿ, ಉಜ್ಜನಹಟ್ಟಿ, ಹಣಬರಹಟ್ಟಿ, ಚಿಕ್ಕಬೂದನೂರ, ಹೀರೇಬೂದನೂರ, ಚಚಡಿ, ಗುಂಡ್ಲೂರ, ತಡಸಲೂರ ಇಲ್ಲಿಯ 6713 ಏಕರೆ ಪ್ರದೇಶದ  ಗ್ರಾಮಗಳಿಗೆ ಅನುಕೂಲವಾಗಲಿದೆ. 2007 ರಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡು 2015 ರಲ್ಲಿ ಕಾಮಗಾರಿ ಪ್ರಾರಂಭಗೊಂಡಿದ್ದು 2016 ರಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಕಾಮಗಾರಿ ವಿಳಂಬವಾಗಿತ್ತು. ಇದೀಗ ಹಂತ ಹಂತವಾಗಿ ಕಾಮಗಾರಿ ಪ್ರಾರಂಭಗೊಳ್ಳುತ್ತಿದೆ ಎಂದರು. 

ಈ ಸಂದರ್ಭದಲ್ಲಿ ಬಸವರಾಜ ಹೊಸಮನಿ, ಸತ್ಯಪ್ಪ  ನಾಯ್ಕ, ಯಲ್ಲಪ್ಪ  ಉದ್ದನಾಯ್ಕ, ಬಸಪ್ಪ ರಾಮದುರ್ಗ, ಹುಸೇನ್‌ಸಾಬ್ ಕಿಲೇದಾರ್ , ಶಂಕರ ಮಡಿವಾಳರ, ಸಿದ್ದಪ್ಪಾ ಹನ್ನಿಕೇರಿ, ಬಸಪ್ಪ ಅಂಗಡಿ,  ಸುತ್ತಮುತ್ತಲಿನ ರೈತ ಬಾಂಧವರು   ಉಪಸ್ಥಿತರಿದ್ದರು.