ಚಬನೂರ ಗ್ರಾಮ ಹೈಟೆಕ್ ಗ್ರಾಮ ಆಗಲಿದೆ: ಶಾಸಕ ರಾಜುಗೌಡ

ಚಬನೂರ ಗ್ರಾಮ ಹೈಟೆಕ್ ಗ್ರಾಮ ಆಗಲಿದೆ: ಶಾಸಕ ರಾಜುಗೌಡ  Chabanura village will become a high-tech village: MLA Rajugowda

ತಾಳಿಕೋಟಿ 26 : ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತಂದು ಕೆಲಸ ಮಾಡುತ್ತಿದ್ದೇನೆ ಇದಕ್ಕೆ ನಿಮ್ಮೆಲ್ಲರ ಸಹಕಾರವೇ ಕಾರಣವಾಗಿದೆ ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ (ಕು.ಸಾಲವಾಡಗಿ) ಹೇಳಿದರು. ಶನಿವಾರ ಮತಕ್ಷೇತ್ರದ ಚಬನೂರ ಗ್ರಾಮದಲ್ಲಿ ಜಿ.ಪಂ.ವಿಜಯಪುರ, ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗ ವಿಜಯಪುರ ಇದರ ಸನ್ 2025-26ನೇ ಸಾಲಿನ ಲೆಕ್ಕ ಶಿರ್ಷಿಕೆ 5054 ಯೋಜನೆ ಅಡಿ ರೂ.10.55 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಅಂಗನವಾಡಿ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಚಬನೂರ ಗ್ರಾಮ ಇಡೀ ಮತ ಕ್ಷೇತ್ರದಲ್ಲಿಯೇ ಒಂದು ಹೈಟೆಕ್ ಮಾದರಿಯ ಗ್ರಾಮ ಆಗಲಿದೆ ಇದರ ಕೀರ್ತಿ ಮುಖಂಡರಾದ ರುದ್ರಗೌಡ ಪಾಟೀಲ ಅವರಿಗೆ ಸಲ್ಲುತ್ತದೆ ಏಕೆಂದರೆ ಅವರು ಸ್ವತಃ ಕಷ್ಟಪಟ್ಟು ಈ ಅನುದಾನವನ್ನು ತಂದಿದ್ದಾರೆ ಅವರಿಗೆ ನಾನು ಅಭಿನಂದಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಯಾರೇ ಪ್ರಯತ್ನ ಪಟ್ಟು ನನ್ನೊಂದಿಗೆ ಸಹಕರಿಸಿದರೆ ಅದನ್ನು ನಾನು ಸ್ವಾಗತಿಸುತ್ತೇನೆ ಅಭಿವೃದ್ಧಿ ವಿಷಯದಲ್ಲಿ ನನಗೆ ರಾಜಕಾರಣ ಬೇಕಾಗಿಲ್ಲ.

ಚಬನೂರು ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಗ್ರಾಮವಾಗಿದೆ ಮುಂದೆಯೂ ನಿಮ್ಮ ಸಹಕಾರ ಇದೇ ರೀತಿಯಾಗಿರಲಿ, ನಿಮ್ಮ ಋಣ ತೀರಿಸುವ ಹಾಗೆ ನಾನು ಕೆಲಸ ಮಾಡುತ್ತೇನೆ ಎಂದರು. ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಚಬನೂರ ರಾಮಲಿಂಗೇಶ್ವರ ಮಠದ ಪೂಜ್ಯ ಶ್ರೀರಾಮಲಿಂಗಯ್ಯ ಮಹಾಸ್ವಾಮಿಗಳು ಗ್ರಾಮದ ಅಭಿವೃದ್ಧಿ ಕುರಿತು ಅಪಾರ ಕಾಳಜಿ ಹೊಂದಿರುವ ಮುಖಂಡ ರುದ್ರಗೌಡರು ಶಾಸಕ ರಾಜುಗೌಡರ ಸಹಕಾರದೊಂದಿಗೆ ಅನುದಾನ ತಂದು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ.

ಸಾಸನೂರ ಗ್ರಾ.ಪಂ. ಪಿಡಿಒ ಕಸನಕ್ಕಿ ಅವರು ಬಹಳ ಕ್ರಿಯಾಶೀಲತೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ ಇವರಿಗೆ ನಿಮ್ಮೆಲ್ಲರ ಸಹಕಾರ ಇರಲಿ, ಅಮೋಘಸಿದ್ಧ ಹಾಗೂ ಸಿದ್ಧಿ ಪುರುಷರ ಆಶೀರ್ವಾದ ಸದಾ ತಮ್ಮೊಂದಿಗೆ ಇರಲಿದೆ ಎಂದರು.  ಕಾರ್ಯಕ್ರಮದಲ್ಲಿ ತಾಪಂ ಇಒ ಅನಸೂಯಾ ಚಲವಾದಿ,ಎಇಇ ಆನಂದ ಸ್ವಾಮಿ,ವಿಲಾಸ್ ರಾಠೋಡ, ಮುಖಂಡರಾದ ರುದ್ರಗೌಡ ಪಾಟೀಲ, ಸಂಗನಗೌಡ ಪಾಟೀಲ, ಮಡು ಸೌಕಾರ ಬಿರಾದಾರ, ಮಲ್ಲನಗೌಡ ಬಿರಾದಾರ, ಸಿದ್ದು ಹಿರೇಕುರಬರ, ಯಮನೂರಿ ಒಡೆಯರ್, ಆದಿಲಶಾಹಿ ಕಡಕೋಳ, ತಿಪ್ಪಣ್ಣ ಹಿರೇಕುರಬರ, ರಾಮನಗೌಡ ಚೌದರಿ, ಸಿದ್ದು ಸಿಂಧನಕೇರಿ, ಸಿದ್ದರಾಯ ಹಿರೇಕುರಬರ, ಪ್ರಕಾಶ ಪಡಶೆಟ್ಟಿ, ಸಿದ್ದು ಅವಟಿ ಹಾಗೂ ಗ್ರಾಮಸ್ಥರು ಇದ್ದರು.