ಗ್ರಾಪಂ ಸದಸ್ಯೆ ಸುವರ್ಣಾ ಬಿರಾದಾರಗೆ ಪ್ರಮಾಣ ಪತ್ರ ವಿತರಣೆ
Certificate distribution to Gram Panchayat member Suvarna Biradar
ತಾಳಿಕೋಟಿ 29: ತಾಲೂಕಿನ ಹಿರೂರ ಗ್ರಾಮ ಪಂಚಾಯತ್ ನ ತೆರೆವಾದ ಒಂದು ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಸದಸ್ಯೆ ಸುವರ್ಣಾ ಸಾಹೇಬಗೌಡ ಬಿರಾದಾರ ಇವರಿಗೆ ಚುನಾವಣಾಧಿಕಾರಿ ಮಹೇಶ ಜೋಶಿ ಬುಧವಾರ ಸದಸ್ಯತ್ವ ಪ್ರಮಾಣ ಪತ್ರ ವಿತರಿಸಿದರು.
ಸಾಮಾನ್ಯ ಮಹಿಳೆಗೆ ಮೀಸಲಾರಿರುವ ಈ ಸ್ಥಾನಕ್ಕೆ ಈ ಪೂರ್ವ ನೀಲಮ್ಮ ಬಿರಾದಾರ ಸದಸ್ಯರಾಗಿದ್ದರು ಅವರ ನಿಧನದಿಂದಾಗಿ ತೆರವಾದ ಈ ಸ್ಥಾನಕ್ಕೆ 25-05-2025 ರಂದು ಚುನಾವಣೆ ನಡೆದಿತ್ತು ಇದರಲ್ಲಿ ಸುವರ್ಣಾ ಸಾಹೇಬಗೌಡ ಬಿರಾದಾರ ಇವರನ್ನು ಹೊರತುಪಡಿಸಿ ಬೇರಾರೂ ಸ್ಪರ್ಧಿಸದೆ ಇರುವುದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ನೂತನ ಸದಸ್ಯೆ ಸುವರ್ಣಾ ಸಾಹೇಬ ಗೌಡ ಬಿರಾದಾರ ಇವರಿಗೆ ಬುಧವಾರ ಸದಸ್ಯತ್ವದ ಪ್ರಮಾಣ ಪತ್ರ ವಿತರಿಸಿ ಚುನಾವಣಾಧಿಕಾರಿ ಮಹೇಶ ಜೋಶಿ ಮಾತನಾಡಿ ತೆರವಾದ ಸ್ಥಾನಕ್ಕೆ ಸದಸ್ಯರ ಸರ್ವ ಸಮ್ಮತಿಯಿಂದ ಅವಿರೋಧವಾಗಿ ಆಯ್ಕೆ ನಡೆದಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು ಆಯ್ಕೆಯಾದ ಸದಸ್ಯರು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದರು. ಈ ಸಮಯದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿ.ಎಸ್.ಮಠ, ಕಾರ್ಯದರ್ಶಿ ಎಚ್.ಎ.ಬಿರಾದಾರ, ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿಗಳು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 