ಸೇವಾ ನಿವೃತ್ತ ನ್ಯಾಯಲಯದ ಶಿರಸ್ಥೇದಾರರಿಗೆ ಬಿಳ್ಕೊಡುಗೆ ಸಮಾರಂಭ
Ceremony to felicitate retired court chiefs
ಸವದತ್ತಿ 12: ನ್ಯಾಯವಾದಿಗಳ ಸಂಘದ ಸಬಾಭವನದಲ್ಲಿ ಪ್ರಧಾನ ಹಿರಿಯ ಶ್ರೇಣಿದಿವಾಣಿ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ. ಎಸ್. ವಾಯ್. ಕಟ್ಟಿಮನಿ ಹಾಗೂ ಪ್ರಧಾನ ಕಿರಿಯ ಶ್ರೇಣಿದಿವಾಣಿ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ. ಡಿಡಿ. ಗೌಡರ, ಅವರಿಗೆ ಸವದತ್ತಿ ನ್ಯಾಯವಾದಿಗಳ ಸಂಘದವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಅಯೋಜಿಸಲಾಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಜೆ. ಬಿ. ಮುನವಳ್ಳಿರವರು ಮಾತನಾಡಿ ಇವರಿಬ್ಬರ ಸೇವೆ ಗಮನಾರ್ಹವಾಗಿದೆ. ನ್ಯಾಯಾಲಯದಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವಲ್ಲಿ ಇವರಿಬ್ಬರು ಪ್ರಮುಖ ಪಾತ್ರವಹಿಸಿದ್ದಾರೆ. ತಮ್ಮ ನಿಷ್ಠೆ ಹಾಗೂ ಪ್ರೀತಿಯಿಂದ ನಿಸ್ವಾರ್ಥಸೇವೆಯನ್ನು ನೀಡಿದ್ದಾರೆ. ಇವರಿಬ್ಬರಿಗೂ ನಿವೃತ್ತಿ ಜೀವನದಲ್ಲಿ ದೇವರು ಆರೋಗ್ಯ ಮತ್ತು ನೆಮ್ಮದಿಯನ್ನು ನೀಡಲಿ ಎಂದು ಶುಭಹಾರೈಸಿದರು.
ಅತಿಥಿ ಭಾಷಣ ಮಾಡಿದ ಹಿರಿಯ ನ್ಯಾಯವಾದಿಗಳಾದ ಪಿ.ಕೆ. ಬಡಿಗೇರರವರು ಮಾತನಾಡಿ ನಿವೃತ್ತ ಶಿರಸ್ಥೇದಾರರಿಬ್ಬರು ಸಹೃದಯದವರು, ಯವುದೇ ಕೆಲಸದ ಒತ್ತಡ ಇದ್ದರೂ ನಗುಮುಖದಿಂದ ಎಲ್ಲ ಕೆಲಸವನ್ನು ಮಾಡುತ್ತಿದ್ದರು. ಇವರಿಬ್ಬರ ನಿವೃತ್ತಿ ಜೀವನ ಸುಖಕರವಾಗಿರಲಿ ಮುಂದೆ ಸಮಾಜ ಮುಖಿಕೆಲಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಎಸ್.ಎಸ್.ಅಂಗಡಿ, ಎಮ್.ವಾಯ್.ದೇವಲಾಪೂರ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷರಾದ ಎಮ್.ಎಸ್.ಹುಬ್ಬಳ್ಳಿ, ನ್ಯಾಯವಾದಿಗಳಾದ ವಾಯ್.ಪಿ.ರಾಮಜಾರ, ಎಫ್.ಆಯ್.ಶಿದ್ಲಿಂಗನವರ, ಎಸ್.ಎಸ್.ಹಿರೇಮಠ, ಆರ್.ಎಸ್.ಬಾಳಿ, ಎ.ಎಸ್.ಮಾನಗಾಂವ, ಆರ್.ಎಮ್.ನದಾಫ್, ವಿ.ಎಸ್.ಮುನವಳ್ಳಿ, ಎನ್.ಎಸ್.ನಾಯ್ಕರ, ಪಿ.ಎನ್.ಡೊಳ್ಳಿನ, ಜೆ.ಎಸ್.ಸಂಗ್ರೇಶಕೊಪ್ಪ, ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿಯಾದ ಎಸ್.ಎಸ್.ಕಾಳಪ್ಪನವರರವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 