ಕೇಂದ್ರ ಪುರಸ್ಕೃತ ಯೋಜನೆ: ಪಂಚಾಯತಿ ಸದಸ್ಯರೊಂದಿಗೆ ಸಂವಾದ
Centrally Sponsored Scheme: Interaction with Panchayat Members
ಲೋಕದರ್ಶನ ವರದಿ
ಕೇಂದ್ರ ಪುರಸ್ಕೃತ ಯೋಜನೆ: ಪಂಚಾಯತಿ ಸದಸ್ಯರೊಂದಿಗೆ ಸಂವಾದ
ಹಾವೇರಿ 03: ಕೇಂದ್ರ ಸರ್ಕಾರದ (ಎನ್‌ಎಲ್‌ಎಮ್) ನ್ಯಾಷನಲ್ ಲೆವೆಲ್ ಮಾನಿಟರಿಂಗ್ ಕೇಂದ್ರ ತಂಡದ ಮುಖ್ಯಸ್ಥರಾದ ಅನಿಲ್ ಅಣ್ಣಪ್ಪ ಮೋರೆ, ಸದಸ್ಯರಾದ ಸತ್ಯವಾನ್ ಭರಾಟೆ ಅವರು ತಾಲೂಕಿನ ಗ್ರಾಮ ಅಗಡಿ, ಮೇವುಂಡಿ ಹಾಗೂ ಕಳ್ಳಿಹಾಳ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಕೇಂದ್ರ ಪುರಸ್ಕೃತ ಯೋಜನೆಗಳಾದ ಎಮ್‌ಜಿಎನ್‌ಆರ್‌ಇಜಿಇಎ, ಪಿಎಮ್‌ಎವೈ, ಎನ್‌ಆರ್‌ಎಲ್‌ಎಮ್ ಹಾಗೂ ಪಿಎಮ್‌ಜಿಎಸ್‌ವೈ ಮುಂತಾದ ಯೋಜನೆಗಳ ಅನುಷ್ಠಾನದ ಕುರಿತು ಫಲಾನುಭವಿಗಳ ಜೊತೆ ಸಂವಾದ ಮತ್ತು ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರೊಂದಿಗೆ ಸಂವಾದ ಹಾಗೂ ಯೋಜನೆಯ ಕುಂದು ಕೊರತೆ ಹಾಗೂ ಕೇಂದ್ರ ಸರ್ಕಾರಕ್ಕೆ ರೆಕಮಂಡೇಶನ್ ಕುರಿತು ಚರ್ಚಿಸಲಾಯಿತು. ಕೇಂದ್ರದ ಎನ್‌ಎಲ್‌ಎಮ್ ತಂಡವು ಯೋಜನೆಗಳ ಬಗ್ಗೆ ಕಾಮಗಾರಿಗಳನ್ನು ವೀಕ್ಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪರಮೇಶ ಹುಬ್ಬಳ್ಳಿ, ಸಹಾಯಕ ನಿರ್ದೇಶಕರಾದ ಜಿಜಿ ನಾಯಕ್,(ಗ್ರಾ.ಉ) ಸಹಾಯಕ್ ನಿರ್ದೇಶಕರಾದ ಸಂದೀಪ್‌ಸ್.ಡಿ, (ಪಂಚಾಯತ್ ರಾಜ್) ಖಾದರ್ ಭಾಷಾ ಬಸರಿಕಟ್ಟಿ ಟಿಎನ್‌ಓ, ಇಂದಿರಾ ಕನವಳ್ಳಿ (ಎನ್ ಎಲ್ ಎಮ್ ಸಂಯೋಜಕರು) ಮಹಾಗುಂಡೆಶ್ವರ ಮುಗಳಿ ಟಿ.ಸಿ ಗೀರೀಶ ಬೆನ್ನೂರು,ಐಇಸಿ ಸಂಯೋಜಕರು ತಾಂತ್ರಿಕ ಸಹಾಯಕರಾದ ಬರಮಪ್ಪ ಕಡೆಮನಿ, ಮಂಜುನಾಥ್ ನಿಂಗನಗೌಡ್ರ,ಕೃಷ್ಣ ಸುಬ್ಬರಗಟ್ಟಿ ತೋಟಗಾರಿಕೆ ಇಲಾಖೆಯಿಂದ ಮಂಗಳ ಹೊನ್ನತ್ತಿ,ಮೇವುಂಡಿ,ಕಳ್ಳಿಹಾಳ ಹಾಗೂ ಅಗಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಪಂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 