ಕೇಂದ್ರ ಸರ್ಕಾರದ ಯೋಜನೆಗಳು ಬಡವರ ಪಾಲಿಗೆ ವರದಾನವಾಗಿವೆ : ವೈ.ಎಂ.ಸತೀಶ
Central government schemes are a boon for the poor: Y.M. Satish
ಕಂಪಿ 14: ಪಟ್ಟಣದ ಕೊಟ್ಟಾಲ್ ರಸ್ತೆಯ ಮಾಜಿ ಶಾಸಕ ಸುರೇಶ ಬಾಬು ಅವರ ತುಂಗಭದ್ರಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಕಂಪ್ಲಿ ಮಂಡಲವತಿಯಿಂದ ವಿಕಸಿತ ಭಾರತದ ಅಮೃತ ಕಾಲ ಸೇವೆ, ಸುಶಾಸನ, ಬಡವರ ಕಲ್ಯಾಣ್ ಮೋದಿ ಸರ್ಕಾರಕ್ಕೆ 11 ವರ್ಷ ತುಂಬಿದ ಹಿನ್ನಲೆ ವಿಕಸಿತ ಭಾರತ ಸಂಕಲ್ಪ ಸಭೆಯ ಶನಿವಾರ ಜರುಗಿತು.
ಸಭೆಯ ಅಧ್ಯಕ್ಷತೆವಹಿಸಿ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ ಮಾತನಾಡಿ, ಕೇಂದ್ರ ಸರಕಾರದ ಅನೇಕ ಯೋಜನೆಗಳನ್ನು ಮನೆ ಮನೆಗೆ ತಲುಪಿಸಬೇಕೆಂಬುದು ವಿಕಸಿತ ಭಾರತ ಸಂಕಲ್ಪದ ಉದ್ದೇಶವಾಗಿದೆ. ಕೇಂದ್ರ ಸರಕಾರದ ಯೋಜನೆಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದೆ. ಈ ದೇಶದ ಬಡವರ ಸಂಕಷ್ಟ, ಈ ದೇಶದ ರೈತರ ಸಮಸ್ಯೆಗಳನ್ನು ಅರಿತುಕೊಂಡು ಪಿಎಂ ಕೃಷಿ ಸಮ್ಮಾನ್, ಫಸಲ್ ಬಿಮಾ, ಗೊಬ್ಬರದ ಸಬ್ಸಿಡಿ, ಈ ದೇಶದ ಪ್ರತಿ ಮನೆಗೂ ಶೌಚಾಲಯ, ಪಿಎಂ ಆವಾಜ್ ಯೋಜನೆ, ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ನೀಡಿದ ಶ್ರೇಯಸ್ಸು ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.ನಂತರ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ು.ವಿಕಸಿತ ಭಾರತ ಸಂಕಲ್ಪ ಹಿನ್ನಲೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಇತ್ತೀಚೆಗೆ ವಿಮಾನದ ದುರ್ಘಟನೆಯಲ್ಲಿ ಸಾಕಷ್ಟು ಜನರು ಮೃತಪಟ್ಟ ಪರಿಣಾಮ ಒಂದು ನಿಮಿಷಿ ಮೌನಾಚಾರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಯರ‌್ರಂಗಳಿ ತಿಮ್ಮಾರೆಡ್ಡಿ, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಸುಗುಣ, ಪುರಸಭೆ ಸದಸ್ಯರಾದ ರಾಮಾಂಜಿನೇಯ, ಟಿ.ವಿ.ಸುದರ್ಶನರೆಡ್ಡಿ, ಆರ್.ಆಂಜನೇಯ, ಯುವ ಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ನಗರ ಘಟಕ ಅಧ್ಯಕ್ಷ ಮುರುಳಿ ಮೋಹನ್ ರೆಡ್ಡಿ, ಮುಖಂಡರಾದ ಅಳ್ಳಳ್ಳಿ ವಿರೇಶ, ಪಿ.ಬ್ರಹ್ಮಯ್ಯ, ಜಿ.ಸುಧಾಕರ, ಎಂ.ಗುರುರಾಜ, ದೇವಲಾಪುರ ರವಿ, ಕೊಡಿದಲ್ ರಾಜು, ಬಿ.ದೇವೆಂದ್ರ, ಚಂದ್ರಶೇಖರ ಗೌಡ, ಶ್ರೀನಿವಾಸ, ಶಿವುಕುಮಾರ, ಬಸವಪ್ರಭು, ಹೂವಣ್ಣ, ಕಟ್ಟೆ ವಿಶ್ವನಾಥ, ರಬಿಯಾ ನಿಸಾರ ಸೇರಿದಂತೆ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 