361 ಕೋಟಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರಕಾರದ ಪಾತ್ರವಿಲ್ಲ : ಶಾಸಕ ಪಠಾಣ

361 ಕೋಟಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರಕಾರದ ಪಾತ್ರವಿಲ್ಲ : ಶಾಸಕ ಪಠಾಣ Central government has no role in Rs 361 crore permanent drinking water project: MLA Pathana

ಶಿಗ್ಗಾವಿ 21 : ಶಿಗ್ಗಾವಿ, ಸವಣೂರ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಕ್ಯಾಬಿನೆಟ್‌ನಲ್ಲಿ ಅನುಮೋದನೆ ದೊರೆತಿರುವ 361 ಕೋಟಿ ಶಾಶ್ವತ ಕುಡಿಯುವ ನೀರಿನ ಯೋಜನೆಯಲ್ಲಿ ಕೇಂದ್ರ ಸರಕಾರದ ಹಾಗೂ ಹಿಂದಿನ ಬಿಜೆಪಿ ಸರಕಾರದ ಯಾವುದೇ ಪಾತ್ರವಿಲ್ಲ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಸ್ಪಷ್ಟಪಡಿಸಿದರು. 

ಪಟ್ಟಣದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಸ್ಪಷ್ಟಪಡಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಳೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಿದ್ದು ಈ ಕುರಿತು ನಾನು ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ವ್ಯತಿರಿಕ್ತ ಹೇಳಿಕೆಗಳನ್ನು ಗಮನಿಸಿದ್ದೇನೆ. ಈ ಕುರಿತಂತೆ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ ಎಂದರು. ಶಿಗ್ಗಾವಿಯಲ್ಲಿ ನೀರಿನ ತೊಂದರೆ ಈಗ ಇರದೇ ಇರಬಹುದು. ಆದರೆ ಸವಣೂರ ತಾಲೂಕಿನಲ್ಲಿ ಬಹಳಷ್ಟು ಸಮಸ್ಯೆ ಇದೆ. ಶಾಶ್ವತ ನೀರಿನ ಯೋಜನೆ ಸವಣೂರಿನಲ್ಲಿ ಆಗಿಲ್ಲ. ನಾನು ಶಾಸಕನಾದ ಮೇಲೆ 50 ಬೋರ್ ಸವಣೂರಿಗೆ, 40 ಬೋರ್ ಬಂಕಾಪುರದಲ್ಲಿ ಹೊಡೆಸಲಾಗಿದೆ. ಶಿಗ್ಗಾವಿಯಲ್ಲಿ ಬೋರ್ ಹೊಡೆಸಿಲ್ಲ. ನೀರು ಬೀಳಲಿಲ್ಲ. ಸಾಮಾನ್ಯವಾಗಿ ಶಿಗ್ಗಾವಿ, ಸವಣೂರ ಮತ್ತು ಬಂಕಾಪುರ ಮೂರು ಪಟ್ಟಣಗಳ ಶಾಶ್ವತ ಕುಡಿಯುವ ನೀರಿನ ಸಲುವಾಗಿ ಒಂದು ಯೋಜನೆ ಸಿದ್ಧ ಮಾಡಿದ್ದೇವೆ ಎಂದರು.

ಉಪ ಉಪಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಜನರಿಗೆ ಮಾತು ಮತ್ತು ಭರವಸೆ ಕೊಟ್ಟಂತೆ ಕಳೆದ ಕ್ಯಾಬಿನೆಟ್‌ನಲ್ಲಿ ಅನುಮೋದನೆ ದೊರೆತಿದೆ. ಅಮೃತ ಯೋಜನೆಯಂತಹ ಯೋಜನೆಗಳಲ್ಲಿ ಶೇ. 50 ರಾಜ್ಯ ಸರಕಾರ, ಶೇ. 50 ರಾಜ್ಯ ಸರಕಾರ ಹಣ ಭರಿಸುತ್ತವೆ. ಈ ಯೋಜನೆ ಸಂಪೂರ್ಣವಾಗಿ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ಇದರಲ್ಲಿ ಕೇಂದ್ರದ ಹಾಗೂ ಹಿಂದಿನ ಬಿಜೆಪಿ ಸರಕಾರದಯಾವುದೇ ಪಾತ್ರವಿಲ್ಲ ಎಂದರು.