ಗೊಲ್ಲ, ಯಾದವ, ಹಣಬರ ಸಂಘದ ಶತಮಾನೋತ್ಸವ: ಪ್ರತಿಭಾ ಪುರಸ್ಕಾರ
Centenary of Golla, Yadava, Hanaba Sangha: Pratibha Award
ಚಿಕ್ಕೋಡಿ 29: ಮಕ್ಕಳ ಭವಿಷ್ಯದ ಕುರಿತು ಚಿಂತನೆ ಮಾಡಿದಾಗ ಗೊಲ್ಲ, ಯಾದವ ಮತ್ತು ಹಣಬರ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗಲು ಸರ್ಕಾರ ಸರ್ವೇ ಆರಂಭಿಸಿದಾಗ ಗೊಲ್ಲ ಕಾಲಂ ಮುಂದೆ ಉಪಜಾತಿ ಕಾಲಂದಲ್ಲಿ ಯಾದವ ಮತ್ತು ಹಣಬರ ಅಂತ ನಮೂದಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಅಲೆಮಾರಿ ಬುಡಕಟ್ಟು ನಿಗಮದಿಂದ ಆರ್ಥಿಕ ಸಹಾಯ ಸಿಗಲು ಗೊಲ್ಲ ಅಂತ ನಮೂದಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರು ಮತ್ತು ಅಖಿಲ ಕರ್ನಾಟಕ ಗೊಲ್ಲ ಯಾದವ ಮತ್ತು ಹಣಬರ ಸಂಘದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ ಹೇಳಿದರು.
ಇಲ್ಲಿನ ಸಂಸದರ ಕಚೇರಿ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಗೊಲ್ಲ ಯಾದವ ಮತ್ತು ಹಣಬರ ಸಂಘದ ಶತಮಾನೋತ್ಸವದಲ್ಲಿ ಶ್ರಮಿಸಿದ ಬಾಂಧವರಿಗೆ ಮತ್ತು ಪಿಯುಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಭಾಗದ ಹಣಬರ ಸಮಾಜ ಬಾಂಧವರು ಗೊಲ್ಲ ಅಂತ ಹೇಗೆ ಬರೆಯಿಸಿಕೊಳ್ಳುವುದೆಂದು ಮುಜಗರ ಪಡುವುದು ಬೇಡ, ಗೊಲ್ಲ, ಯಾದವ ಮತ್ತು ಹಣಬರ ಒಂದೇಯಾಗಿರುತ್ತದೆ. ಮಕ್ಕಳ ಭವಿಷ್ಯದ ಆಲೋಚನೆ ಮಾಡಿ ಗೊಲ್ಲ ಕೆಳಗಡೆ ಹಣಬರ ಅಂತ ಸರ್ಕಾರದ ಸರ್ವೇಯಲ್ಲಿ ನಮೂಧಿಸಬೇಕು ಎಂದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಲೆಮಾರಿ ಬುಡಕಟ್ಟು ಅಭಿವೃದ್ಧಿ ನಿಗಮಕ್ಕೆ ಸಾಕಷ್ಟು ಅನುದಾನ ಕೊಡುತ್ತಾರೆ. ಇಡೀ ರಾಜ್ಯದಲ್ಲಿ ಗೊಲ್ಲ ಅಂತ ಜನಸಂಖ್ಯೆ ಹೆಚ್ಚು ಇದ್ದರೆ ಎಲ್ಲ ಕಡೆ ಅನುದಾನ ಹರಿದು ಬರುತ್ತದೆ. ರಾಜ್ಯದ ದಕ್ಷಿಣ ಕಡೆ ಗೊಲ್ಲ ಮತ್ತು ಉತ್ತರ ಕರ್ನಾಟಕದ ಕಡೆ ಹಣಬರ ಅಂತ ಬರೆಯಿಸಿದರೆ ಸಮಾಜದ ಜನಸಂಖ್ಯೆ ಕಡಿಮೆಯಾಗಿ ನೀರೀಕ್ಷಿತ ಅನುದಾನ ಬರುದಿಲ್ಲ ಎಲ್ಲ ಸಮಾಜ ಬಾಂಧವರು ರಾಜ್ಯ ಸಂಘದ ಸೂಚನೆ ಮೇರಿಗೆ ಜಾತಿ ಕಾಲಂ ಬರೆಯಿಸಬೇಕು ಎಂದರು.
ಯದುವಂಶದ ಮೈಸೂರ ಒಡೆಯರು ಸಹ ಯಾದವ ಸಮಾಜಕ್ಕೆ ಸೇರಿದವರು. ಅವರು ನಮ್ಮ ಸಂಘಟನೆ ಒಪ್ಪಿಕೊಂಡು ಸಿದ್ಧಾಂತ ಅನುಸರಿಸಿದರೆ ನಮ್ಮ ಸಮಾಜದ ಗೌರವ ಎರಡು ಪಟ್ಟು ಹೆಚ್ಚುತ್ತದೆ. ನಮ್ಮ ರಾಜ್ಯ ಸಂಘಟನೆ ಈಗಾಗಲೇ ಮೈಸೂರ ಒಡೆಯರಿಗೆ ಮನವರಿಕೆ ಮಾಡಲಾಗಿದೆ ಎಂದರು.
ಅಖಿಲ ಭಾರತ ಗೊಲ್ಲ ಯಾದವ ಮತ್ತು ಹಣಬರ ರಾಜ್ಯ ಸಂಘಟನೆಗೆ ಶಿಘ್ರದಲ್ಲಿ ಚುನಾವಣೆ ನಡೆಸಲಾಗುತ್ತದೆ. ಬೆಳಗಾವಿ ಜಿಲ್ಲೆಯಿಂದ ಹೆಚ್ಚು ಹೆಚ್ಚು ಸದಸ್ಯತ್ವ ಮಾಡಿಕೊಟ್ಟರೆ ಬೆಳಗಾವಿ ಮತ್ತು ಚಿಕ್ಕೋಡಿ ಭಾಗಕ್ಕೆ ಹೆಚ್ಚು ಪ್ರಾತಿನಿಧ್ಯ ಕೊಡಲಾಗುತ್ತದೆ. ಈ ಭಾಗದ ಹಣಬರ ಸಮಾಜದ ಮುಖಂಡರು ಸಮಾಜದ ಶ್ರಯೋಭಿವೃದ್ಧಿಗೆ ಶ್ರಮೀಸಬೇಕು ಎಂದರು.
ಸಾನಿಧ್ಯವನ್ನು ಕೃಷ್ಣಯಾದವಾನಂದ ಸ್ವಾಮಿಜಿ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಹಣಬರ ಸಮಾಜದ ಜಿಲ್ಲಾಧ್ಯಕ್ಷ ಶೀತಲ ಮುಂಡೆ, ಭರಮಣ್ಣಾ ತೋಳಿ, ಶಿವಲಿಂಗ ಪೂಜಾರಿ, ಡಾ,ಎಸ್.ಡಿ.ಪಾಟೀಲ, ಜಯಗೌಡ ಪಾಟೀಲ, ಮಹೇಶ ವಾಘನ್ನವರ, ಬಸವರಾಜ ಮೋದಿಗಿಕರ, ಎಸ್.ವೈ.ಪಾಟೀಲ, ಬಸವರಾಜ ಅಮಾತೆ, ಕೆಂಪಣ್ಣಾ ಪಾಟೀಲ, ವಸಂತ ಕರಿಕಾಯಿ, ವೈ.ವೈ.ಗಡ್ಕರಿ, ರಾಜು ಹಮ್ಮನ್ನವರ, ರಾಮಗೌಡ ಪಾಟೀಲ, ವಸಂತ ಖೋತ, ವೇಂಕಟೇಶ ಶಿಂಧೆ, ಮಂಜುನಾಥ ಪಾಟೀಲ, ಚಂದ್ರಕಾಂತ ಪಾಟೀಲ, ಮಡಿವಾಳಪ್ಪ ಬಸರಗಿ, ರಾಜು ಸಂಕೇಶ್ವರಿ ಮುಂತಾದವರು ಇದ್ದರು.
ಏ-20ರಂದು ಅಖಲ ಭಾರತ ಗೊಲ್ಲ ಯಾದವ ಮತ್ತು ಹಣಬರ ಸಮಾಜದ ಶತಮಾನೋತ್ಸವ ಜರುಗಿರುವುದು ಇತಿಹಾಸವಾಗಿದೆ. 25 ಸಾವಿರಕ್ಕಿಂತ ಹೆಚ್ಚು ಜನರು ಸಮಾವೇಶದಲ್ಲಿ ಪಾಲ್ಗೊಂಡು ಸಮಾಜದ ಒಗ್ಗಟ್ಟಿಗೆ ಬಲ ತಂದಿರುವುದು ಮರೆಯುವಂತಿಲ್ಲ, ಸಮಾಜದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಸಂಪೂರ್ಣ ಸಹಕಾರ ನೀಡಿ ಸಮಾವೇಶದ ಯಶಸ್ವಿಗಾಗಿ ಸಹಕರಿಸಿದ್ದಾರೆ.
ಡಿ.ಟಿ.ಶ್ರೀನಿವಾಸ ವಿಧಾನ ಪರಿಷತ್ ಸದಸ್ಯರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 