ಜೆ.ಸಿ. ಮಾಧುಸ್ವಾಮಿ ನಡೆ ಅಚ್ಚರಿ ಮೂಡಿಸಿದೆ: ಡಿಕೆಶಿ

ಬೆಂಗಳೂರು, ಮೇ 21, ಒಬ್ಬ ಹಿರಿಯ ಸಚಿವರಾಗಿ ಜೆ.ಸಿ. ಮಾಧುಸ್ವಾಮಿ ಈ ರೀತಿಯಾಗಿ ನಡೆದುಕೊಂಡಿದ್ದಾರೆ ಎನ್ನುವುದು ತಮಗೆ ಆಶ್ಚರ್ಯ ಮೂಡಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಅಧಿಕಾರದಲ್ಲಿದ್ದವರ  ಬಳಿ ಜನರು ತಮ್ಮ ಕಷ್ಟ ಹೇಳಿಕೊಳ್ಳುವುದು ಸಹಜ. ಜನರು ಕಷ್ಟ ಹೇಳಿಕೊಂಡಾಗ ನಾವು ಯಾವ  ರೀತಿ ನಡೆದುಕೊಳ್ಳುತ್ತೇವೆ ಎನ್ನುವುದು ಮುಖ್ಯ. ಹೆಣ್ಣು ಮಗಳಾಗಲಿ ಯಾರೇ ಆಗಲೀ ಮಂತ್ರಿಗಳ  ಹತ್ತಿರ ಜನಪ್ರತಿನಿಧಿಗಳ ಬಳಿ ಬಂದಾಗ ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು ಎಂದು  ಮಾಧುಸ್ವಾಮಿಗೆ ಡಿ.ಕೆ‌.ಶಿವಕುಮಾರ್ ಬುದ್ಧಿವಾದ ಹೇಳಿದ್ದಾರೆ.ಮಾಧುಸ್ವಾಮಿಗೆ ಮಹಿಳೆಯ ಮಾತಿನಿಂದ ಇರಿಟೇಟ್ ಆಗಿರಬಹುದು‌‌‌‌. ಹಾಗೆಂದ ಮಾತ್ರಕ್ಕೆ ಅಚಾಚ್ಯವಾಗಿ ಬೈಯುವುದು ಸರಿಯಲ್ಲ ಎಂದರು.