ಕೊಪ್ಪಳದಲ್ಲಿ ಬೆಳಗಾವಿ ಹೈದರಾಬಾದ್ ರೈಲಿಗೆ ಸ್ವಾಗತಿಸಿ ಸಿಹಿ ಹಂಚಿ ಸಂಭ್ರಮ
Celebrations in Koppal to welcome Belgaum-Hyderabad train, distribute sweets
ಕೊಪ್ಪಳ 18: ನಗರದ ರೈಲ್ವೆ ನಿಲ್ದಾಣಕ್ಕೆ ಶುಕ್ರವಾರ ಸಂಜೆ ಆಗಮಿಸಿದ ಬೆಳಗಾವಿ ಹೈದರಾಬಾದ್ ರೈಲಿಗೆ ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸ್ವಾಗತಿಸಿ ರೈಲಿನ ಚಾಲಕರಿಗೆ ಹಾಗೂ ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎ.ಗಫಾರ್ ಮಾತನಾಡಿ ಬೆಳಗಾವಿ ಹೈದರಾಬಾದ್ ರೈಲು ಕೋವಿಡ್ ಕಾಲದಿಂದ ಸ್ಥಗಿತಗೊಳಿಸಲಾಗಿತ್ತು. ಪುನಃಪ್ರಾರಂಭಿಸಲು ನಮ್ಮ ಸಂಘಟನೆಯಿಂದ ಪದೇಪದೇ ಮನವಿ ಸಲ್ಲಿಸಲಾಗಿತ್ತು. ಈ ಮಾರ್ಗದ ಜಿಲ್ಲೆಗಳಿಂದ ಬಹುಬೇಡಿಕೆಯಾಗಿದ್ದ ಬೆಳಗಾವಿ ಹೈದರಾಬಾದ್ ರೈಲು ಪುನಃ ಪ್ರಾರಂಭಿಸಿದವರು ಸ್ವಾಗತಾರ್ಹ.ಭಾರತದಲ್ಲಿ ರೈಲ್ವೆಗಳು ಏಪ್ರಿಲ್ 16, 1853 ರಂದು ಬಾಂಬೆ (ಈಗ ಮುಂಬೈ) ಯಿಂದ ಥಾಣೆ ವರೆಗೆ ಮೊದಲ ಪ್ರಯಾಣಿಕ ರೈಲು ಓಡಿದ್ದು. ಕಳೆದ 173 ವರ್ಷಗಳಿಂದ ಆಧುನೀಕರಣಗೊಳ್ಳುತ್ತ ಬುಲೆಟ್ ರೈಲಿನ ಹಂತ ತಲುಪಿದೆ ಎಂದು ವಿವರಿಸಿದರು. ರೈಲ್ವೆ ಹೋರಾಟ ಸಮಿತಿಯ ಮುಖಂಡ ಚನ್ನಬಸಪ್ಪ ಅಪ್ಪಣವರ್ ಮಾತನಾಡಿ ಕೊಪ್ಪಳ ಮೂಲಕ ಬೆಂಗಳೂರಿಗೆ ಹೆಚ್ಚಿನ ರೈಲುಗಳನ್ನು ಓಡಿಸುವುದು ಸೇರಿದಂತೆ ಬೆಳಗಾವಿ ಹೈದರಾಬಾದ್ ರೈಲು ಪುನಃ ಪ್ರಾರಂಭಿಸಲು ಒತ್ತಾಯಿಸಲಾಗಿತ್ತು ಇಂದು ಈ ರೈಲಿನ ಬೇಡಿಕೆ ಈಡೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು. ರೈಲ್ವೆ ಹೋರಾಟ ಸಮಿತಿಯ ಮುಖಂಡರಾದ ಬಸವರಾಜ್ ಶೀಲವಂತರ್.ಮಖಬೂಲ್ ರಾಯಚೂರು.ಮಹಾಂತೇಶ ಕೊತಬಾಳ. ಹಂಚಾಳಪ್ಪ ಇಟಗಿ ಹ್ಯಾಟಿ ಮುಂಡರಗಿ. ಶಿವಪ್ಪ ಹಡಪದ್. ಮೈಲಾರ್ಪ ಇಟಗಿ ಹ್ಯಾಟಿ ಮುಂಡರಗಿ ಮುಂತಾದವರು ಬೆಳಗಾವಿ ಹೈದರಾಬಾದ್ ರೈಲನ್ನು ಸ್ವಾಗತಿಸಿ ಸಿಹಿ ಹಂಚಿ ಸಂಭ್ರಮದಲ್ಲಿ ಭಾಗಿಯಾಗಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 