ಬಿಜೆಪಿ ಪಕ್ಷದ ವತಿಯಿಂದ ಸಂಭ್ರಮಾಚರಣೆ

ಬಿಜೆಪಿ ಪಕ್ಷದ ವತಿಯಿಂದ ಸಂಭ್ರಮಾಚರಣೆ  Celebrations by the BJP party

ಬಿಜೆಪಿ ಪಕ್ಷದ ವತಿಯಿಂದ ಸಂಭ್ರಮಾಚರಣೆ  

ಬ್ಯಾಡಗಿ 15 : .ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಒಕ್ಕೂಟ ಪ್ರಚಂಡ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಹಳೇ ಪುರಸಭೆ ಎದುರು  ಸಂಭ್ರಮಾಚರಣೆ ನಡೆಯಿತು.ಕಚೇರಿ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಬಿಜೆಪಿ ಪಟ್ಟಣದ ನಡೆದ ಸಂಭ್ರಮಾಚರಣೆಯಲ್ಲಿ ಭಾಗಿಯಾದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾವೇರಿ ಗದಗ್ ಕ್ಷೇತ್ರದ ಸಂಸದ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಶಾಸಕ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಅವರ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಸಂಭ್ರಮಾಚರಣೆ ಮಾಡಿದರು.ಈ ವೇಳೆ ಬಸವರಾಜ ಬೊಮ್ಮಾಯಿ ಮಾತನಾಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ಪಕ್ಷದ ನಾಯಕರು ಮತಗಳ್ಳತನ ನಡೆಯುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಚುನಾವಣಾ ಆಯೋಗ ಇದರಲ್ಲಿ ಶಾಮೀಲಾಗಿದೆ ಎಂದು ಆರೋಪಿಸಿದ್ದರು. ಜತೆಗೆ ಚುನಾವಣೆ ಪ್ರಚಾರ ಸಂದರ್ಭ ಪ್ರಧಾನಿ ಮೋದಿ ಅವರ ತಾಯಿಯ ಬಗ್ಗೆ ಕೇವಲವಾಗಿ ಮಾತನಾಡಿದ್ದರು. ಇದರಿಂದ ಕೆರಳಿದ ಮತದಾರರು ಎನ್ಡಿಎ ಪರ ನಿಂತಿದ್ದಾರೆ ಎಂದರು.ಪ್ರಧಾನಿ ನರೇಂದ್ರಮೋದಿ ನಾಯಕತ್ವದ ಆಡಳಿತಕ್ಕೆ ಮನ್ನಣೆ ನೀಡಿದ್ದಾರೆ. ರಾಹುಲ್ ಗಾಂಧಿ ಆಧಾರರಹಿತ ಆರೋಪಗಳಿಗೆ ಜನರು ಮತದಾನದ ಮೂಲಕ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಮುಂದಾದರೂ ಜವಾಬ್ದಾರಿಯಾಗಿ ವರ್ತಿಸಬೇಕು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಮನೆಗೆ ಹೋಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ ಬಿಹಾರದಲ್ಲಿ ಹಿಂದೆಂದಿಗಿಂತಲೂ ಭರ್ಜರಿ ಗೆಲವು ದಾಖಲಿಸಿದ್ದು,  ಪ್ರಜಾಪ್ರಭುತ್ವದ ಗೆಲುವಿನ ಸಂಕೇತವಾಗಿದೆ  ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಸಲಾದ ಅಪಪ್ರಚಾರಗಳು ಫಲಿಸಿಲ್ಲ. ಅಪಪ್ರಚಾರಕ್ಕೆ ಸರಿಯಾದ ಉತ್ತರವನ್ನು ದೇಶದ ಜನ ನೀಡಿದ್ದಾರೆ, ಮುಂದೆಯೂ ನೀಡುತ್ತಾರೆ. ಚುನಾವಣಾ ಆಯೋಗ ಮತ ಕಳ್ಳತನ ಬಗ್ಗೆ ದೂರು ನೀಡಲು ತಿಳಿಸಿದ್ದರೂ ರಾಹುಲ್ ಗಾಂಧಿ ದೂರು ನೀಡಲು ಹೆದರಿದ್ದಾರೆ. ದೇಶದೆಲ್ಲೆಡೆ ಹಿಟ್ ಅಂಡ್ ರನ್ ಮಾತ್ರವೇ ಮಾಡಿದ್ದಾರೆ  ಎಂದು ಹೇಳಿದರು.ತಾಲೂಕು ಅಧ್ಯಕ್ಷ ನಿಂಗಪ್ಪ ಬತ್ತಲಕಟ್ಟಿ ಮಾತನಾಡಿ ಸಂವಿಧಾನ ವಿರೋಧಿ ಯಾರೆಂಬುದನ್ನು ಬಿಹಾರ ಜನತೆ ಈ ಚುನಾವಣೆಯಲ್ಲಿ ದೇಶದ ಜನರಿಗೆ ತೋರಿಸಿದ್ದಾರೆ. ಬಿಹಾರ ಚುನಾವಣೆ ಫಲಿತಾಂಶ ಇಡೀ ದೇಶಕ್ಕೆ ಸ್ಪಷ್ಟ ಸಂದೇಶವಾಗಿದೆ ಇನ್ನು ಮುಂದೆ ರಾಹುಲ್ ಗಾಂಧಿಯ ಸುಳ್ಳು ಪ್ರಚಾರ ನಡಿಗೆಗಳು ನಡೆಯಲ್ಲ ಅದು ಇಂದಿಗೆ ಅಂತ್ಯವಾಯಿತು ಎಂದರು.ಸಂಭ್ರಮಾಚರಣೆಯಲ್ಲಿ ಪಕ್ಷದ ಮುಖಂಡರಾದ ಶಂಕ್ರಣ್ಣ ಮಾತನವರ್‌. ಸುಭಾಷ್ ಮಾಳಗಿ. ವಿನಯ್ ಹಿರೇಮಠ. ಶಿವಯೋಗಿ ಶಿರೂರ್‌. ಶಂಕರಗೌಡ ಪಾಟೀಲ. ಸರೋಜಮ್ಮ ಉಳ್ಳಾಗಡ್ಡಿ. ವಿಜಯ್ ಭರತ್ ಬಳ್ಳಾರಿ. ವಿನಾಯಕ ಕಂಬಳಿ. ಈರ​‍್ಪ ಚೌಟಿ. ಪ್ರದೀಪ್ ಜಾದವ್‌.ಯಶೋಧರ ಅರ್ಕಾಚಾರಿ. ಸುರೇಶ್ ಉದ್ಯೋಗಣ್ಣನವರ್‌. ವಿದ್ಯಾ ಶೆಟ್ಟಿ. ಪರಶುರಾಮ್‌.ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.