ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಣೆ
Celebration of Swami Vivekananda's birth anniversary
ವಿಜಯಪುರ 13: 12-01-2026 ರಂದು ಜಿಲ್ಲೆಯ ಪ್ರತಿಷ್ಠಿತ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿವಾಜಿ ಮಹಾರಾಜ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯಲ್ಲಿ ರಾಜಮಾತಾ ಜೀಜಾಬಾಯಿ ಹಾಗೂ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷರಾದ ಶಂಕರ ಕನಸೆ ಭಾವಚಿತ್ರಗಳಿಗೆ ಮಾಲಾರೆ್ಣ ಮಾಡಿ ಪೂಜೆ ನೆರವೇರಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಉಪಾಧ್ಯಕ್ಷರಾದ ಸಂಜಯ ಜಂಬೂರೆ 1598 ರ ಜನವರಿ 12 ರಂದು ಮಹಾರಾಷ್ಟ್ರದ ಸಿಂಧಖೇಡ ಬಳಿಯ ದೇವಲಗಾಂವನಲ್ಲಿ ಜೀಜಾಬಾಯಿಯ ಜನ್ಮ ತಾಳಿದಳು.
ಜೀಜಾಬಾಯಿ ತಮ್ಮ ವೀರಪುತ್ರ ಛತ್ರಪತಿ ಶಿವಾಜಿ ಮಹಾರಾಜರ ಮನದಲ್ಲಿ ಮರಾಠಾ ಸಾಮ್ರಾಜ್ಯ ಸ್ಥಾಪನೆಯ ಕನಸನ್ನು ತುಂಬಿ, ಹಿಂದವೀ ಸಾಮ್ರಾಜ್ಯ ಸ್ಥಾಪನೆಗೆ ಭದ್ರ ಬುನಾದಿ ಹಾಕಿದರು. ಈ ದಿನದಂದು ರಾಜಮಾತಾ ಜೀಜಾವು ಸಾಹೇಬರನ್ನು ಶ್ರದ್ಧಾಭಕ್ತಿಯಿಂದ ಸ್ಮರಿಸಿಕೊಳ್ಳುತ್ತಾರೆ ಎಂದು ಹೇಳಿದರು. ಅದೇ ರೀತಿ ಸ್ವಾಮಿ ವಿವೇಕಾನಂದ ಜನ್ಮದಿನದಂದು ದೇಶದಲ್ಲೆಡೆ “ರಾಷ್ಟ್ರೀಯ ಯುವ ದಿನಾಚರಣೆ” ಆಚರಿಲಾಗುತ್ತಿದ್ದು ಯುವಕರು ಉತ್ಸಾಹ ಭರಿತರಾಗಿ ಜಯಂತಿಯನ್ನು ಆಚರಣೆ ಮಾಡುತ್ತಿದ್ದಾರೆ. ಅದಲ್ಲದೇ ಸ್ವಾಮಿ ವಿವೇಕಾನಂದರು ಯುವಕರಿಗೆ ನೀಡಿದ ಕರೆ “ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂಬ ಅವರ ವಾಕ್ಯವನ್ನು ಹಾಗೂ ಅವರ ಆದರ್ಶಮಯವಾದ ಜೀವನ ಹಾಗೂ ವಿಚಾರಗಳು ಇಂದಿನ ಯುವಕರು ಪ್ರೇರಣೆಯ ಶಕ್ತಿ ಎಂದು ಭಾವಿಸುತ್ತಾರೆ ಎಂದು ಹೇಳಿದರು.
ಅದೇ ರೀತಿ ಸರ್ಕಾರಿ ಜೀಜಾಮಾತಾ ಶಾಲೆಯಲ್ಲಿಯ ರಾಜಮಾತಾ ಜೀಜಾವು ಅವರ ಕಂಚಿನ ಪುತ್ಥಳಿಗೆ ಸಂಘದ ನಿರ್ದೇಶಕರುಗಳಾದ ಮಹಾದೇವ ಪವಾರ ಹಾಗೂ ಪ್ರವೀಣ ಬೋಡಕೆ ಮಾಲಾರೆ್ಣ ಮಾಡಿ ಪೂಜೆ ನೆರವೇರಿಸಿದರು. ಅದೇ ರೀತಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಸಂಘದ ಪ್ರಧಾನ ವ್ಯವಸ್ಥಾಪಕರಾದ ಸಂಜಯ ಜಾಧವ ಮಾಲಾರೆ್ಣ ಮಾಡಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರುಗಳಾದ ರಾಮಚಂದ್ರ ಚವ್ಹಾಣ, ಭಾರತ ದೇವಕುಳೆ, ರವಿ ಮದಭಾವಿ, ಪಾಂಡುರಂಗ ರೋಹಿಟೆ, ಸರೋಜನಿ ನಿಕ್ಕಮ್, ಅಂಬುತಾಯಿ ಜಾಧವ, ಸುರೇಖಾ ಕದಂ, ವ್ಯವಸ್ಥಾಪಕರುಗಳಾದ ಚಂದ್ರಕಾಂತ ಜಾಧವ, ಅಂಬಾದಾಸ ಚವ್ಹಾಣ ಹಾಗೂ ಸಿಬ್ಬಂದಿ ವರ್ಗದವರು, ಪಿಗ್ಮಿ ಏಜೆಂಟರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 