ಹಾಕಿ ಮಾಂತ್ರಿಕ ಧ್ಯಾನ್ಚಂದ್ ಜನ್ಮದಿನ ಆಚರಣೆ

ಹಾಕಿ ಮಾಂತ್ರಿಕ ಧ್ಯಾನ್ಚಂದ್ ಜನ್ಮದಿನ ಆಚರಣೆ  Celebration of Hockey Wizard Dhyan Chand's Birth Anniversary


ತಾಳಿಕೋಟಿ: ಪಟ್ಟಣದ ಎಸ್‌.ಎಸ್‌. ವಿದ್ಯಾಸಂಸ್ಥೆಯ   ಎಚ್‌.ಎಸ್‌. ಪಾಟೀಲ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ಚಂದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಚ್‌.ಎಸ್‌. ಪಾಟೀಲ ಅವರು ಧ್ಯಾನ್ಚಂದ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಧ್ಯಾನ್ಚಂದ್ ಅವರು ಭಾರತದ ಸಾರ್ವಕಾಲಿಕ ಶ್ರೇಷ್ಠ ಹಾಕಿ ಆಟಗಾರರಾಗಿದ್ದು, ‘ಹಾಕಿ ಮಾಂತ್ರಿಕ’ ಎಂದು ಪ್ರಸಿದ್ಧರಾಗಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರ 1956ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಜನ್ಮದಿನವಾದ ಆಗಸ್ಟ್‌ 29ರಂದು ದೇಶಾದ್ಯಂತ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸಚಿನ್ ಎಚ್‌. ಪಾಟೀಲ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ. ಎಂ.ಎಂ. ಬೆಳಗಲ್ಲ, ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಶಿವಕುಮಾರ ನಾಯಕ, ಪಿಯು ವಿಭಾಗದ ಎಸ್‌.ಬಿ. ಮಂಗ್ಯಾಳ, ಪ್ರಕಾಶ ವಾಲೀಕಾರ, ಶ್ರೀನಿವಾಸ ಬಸಂತಾಪೂರ, ಪ್ರೌಢಶಾಲೆಯ ಎಂ.ಎಸ್‌. ರಾಯಗೊಂಡ ಹಾಗೂ ಬಿಪಿಇಡಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.