ಶಿಕ್ಷಕ ವೃಂದ-ಸಿಬ್ಬಂದಿಗಳ ಪಾದಪೂಜೆ ಮೂಲಕ ಗುರುಪೂರ್ಣಿಮೆ ಆಚರಣೆ
ಧಾರವಾಡ 11: ದಿ. 10 ಜುಲೈ 2025 ರಂದು ಜೆ. ಎಸ್. ಎಸ್. ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯಲ್ಲಿ “ಗುರು ಪೂರ್ಣಿಮ” ಕಾರ್ಯಕ್ರಮವನ್ನು ಹತ್ತನೆಯ ತರಗತಿಯ ಮಕ್ಕಳು ಶಿಕ್ಷಕ ವೃಂದಕ್ಕೆ ಹಾಗೂ ಶಾಲಾ ಸಿಬ್ಬಂದಿಗಳಿಗೆ “ಪಾದಪೂಜೆ” ಮಾಡುವ ಮುಖಾಂತರ ತಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತಾ ಅರ್ಥಪೂರ್ಣವಾಗಿ ಆಚರಿಸಿದರು.
ಗುರು ಪೂರ್ಣಿಮಾ ಕಾರ್ಯಕ್ರಮ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ಶಾಲಾ ಪ್ರಾಚಾರ್ಯೆ ಸಾಧನಾ ಎಸ್. ಜ್ಯೋತಿ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 10ನೇ ತರಗತಿಯ ಮಕ್ಕಳು ಆಯೋಜಿಸಿದ್ದ ಗುರು ಪೂರ್ಣಿಮಾ ವಿಶೇಷ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸುತ್ತಾ ನಮ್ಮ ಪರಂಪರೆ ನಮ್ಮ ಆಚಾರ-ವಿಚಾರಗಳು ಮಹತ್ತರವಾದದ್ದು. ತಾವೆಲ್ಲ ಮಕ್ಕಳು ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗವನ್ನು ಪಾದ ಪೂಜೆಯ ಮುಖಾಂತರ ಸನ್ಮಾನಿಸುತ್ತಿರುವುದು ನಮಗೆಲ್ಲರಿಗೂ ಗೌರವದ ವಿಷಯವಾಗಿದೆ ಹಾಗೆಯೇ ಹೆಮ್ಮೆಯೂ ಅನಿಸುತ್ತಿದೆ ಎಂದರು. ಎಲ್ಲ ಮಕ್ಕಳ ಭವಿಷ್ಯ ಉಜ್ವಲವಾಗಲಿ ಹಾಗೂ ಜೀವನದಲ್ಲಿ ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ನಮ್ಮ ಶಾಲೆಯ ಸಂಸ್ಕೃತ ವಿಷಯದ ಮುಖ್ಯಸ್ಥರಾದ ಡಾ. ಶ್ರೀಶಾಚಾರ್ಯ ನಾಮಾವಳಿ ಅವರು ಪಾದ ಪೂಜೆಯ ಮಹತ್ವದ ಕುರಿತು ತಿಳಿಸುತ್ತಾ ಪಾದ ಪೂಜೆ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ಪಾದ ಪೂಜೆ ನೆರವೇರಿಸಿದ ನಂತರ ಮಕ್ಕಳು ಹಾಗೂ ಶಿಕ್ಷಕ ವೃಂದದಲ್ಲಿ ಆದರ, ಗೌರವ, ಆತ್ಮೀಯತೆ ಹಾಗೂ ಧನ್ಯತಾಭಾವ ಮನೆಮಾಡಿತ್ತು. ವಂದನಾರೆ್ಣಯ ಮುಖಾಂತರ ಕಾರ್ಯಕ್ರಮ ಮುಕ್ತಾಯಗೊಂಡಿತು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 