ಫ.ಗು. ಹಳಕಟ್ಟಿ ಜಯಂತಿ ಆಚರಣೆ

ಫ.ಗು. ಹಳಕಟ್ಟಿ ಜಯಂತಿ ಆಚರಣೆ  Celebration of F.G. Halakatti's Birth Anniversary

ದೇವರಹಿಪ್ಪರಗಿ   02: ತಾಲೂಕು ಬಸವಶರಣ ಸಂಗಮ ಸೇವಾ ಸಮಿತಿಯ ಅಧ್ಯಕ್ಷ ಸಂಗಪ್ಪ ತಡವಲ್ ಅವರ ನೇತೃತ್ವದಲ್ಲಿ ಫ.ಗು. ಹಳಕಟ್ಟಿ ಜಯಂತಿ ಆಚರಣೆ ಮಾಡಲಾಯಿತು.ಪಟ್ಟಣದ ಚೌಡೇಶ್ವರಿ ದೇವಸ್ಥಾನದಲ್ಲಿ ಗುರುವಾರದಂದು ಫ.ಗು. ಹಳಕಟ್ಟಿ ಅವರ ಜನ್ಮದಿನ ಹಾಗೂ ವಚನ ಸಾಹಿತ್ಯ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಚನ ಸಾಹಿತ್ಯ, ಬಸವ ತತ್ವಕ್ಕೆ ಅವರ ಕೊಡುಗೆ ಅಮೋಘ ಎಂದು ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಗೊಲ್ಲಾಳಪ್ಪ ಬಿರಾದಾರ, ಕಾಸಪ್ಪ ಯಂಬತ್ನಾಳ, ನಿಂಗು ದಾನಗೊಂಡ, ರೇವಣಸಿದ್ಧ ನಂದ್ಯಾಳ, ಬಸಪ್ಪ ಕುಂಬಾರ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.