ಮಾಗಳ-ವಿಠಲಾಪುರ ಯಾಂತ್ರೀಕೃತ ದೋಣಿ ಪ್ರಯಾಣಿಕರಿಗೆ ಅರೆ​‍್ಣ

ಮಾಗಳ-ವಿಠಲಾಪುರ ಯಾಂತ್ರೀಕೃತ ದೋಣಿ  ಪ್ರಯಾಣಿಕರಿಗೆ ಅರೆ​‍್ಣ Mechanized boat service for Magala-Vithalapura passengers


ಲೋಕದರ್ಶನ ವರದಿ  

ಹೂವಿನಹಡಗಲಿ ಆ.17- ತಾಲೂಕಿನ ಮಾಗಳ- ಬಿದರೆಹಳ್ಳಿ , ವಿಠಲಾಪುರ ಮಧ್ಯೆ ಸಂಚರಿಸುತ್ತಿದ್ದ ಯಾಂತ್ರೀಕೃತ ದೋಣಿ ಪಂಚಮಿ ಹಬ್ಬದ ದಿನ ಸೋಮವಾರ ಚಾಲನೆ ನೀಡಲಾಯಿತು.ಮಾಗಳ ಬಿದರಹಳ್ಳಿ ಮಧ್ಯೆ ಯಾಂತ್ರೀಕೃತ ದೋಣಿ ದುರಸ್ತಿ ಯಿಂದ ಮಾಗಳ -ಬಿದರಹಳ್ಳಿ, ವಿಠಲಾಪುರ ಸಂಚಾರ ಇರಲಿಲ್ಲ.ಒಳನಾಡು ಮತ್ತು ಬಂದರು ಜಲಸಾರಿಗೆ ಇಲಾಖೆ ಅಧಿಕಾರಿಗಳು ಜನರಿಗೆ ಆಗುವ ತೊಂದರೆಯನ್ನು ಗಮನದಲ್ಲಿ ಇಟ್ಟುಕೊಂಡು ಮತ್ತೆ ಸಂಚಾರಕ್ಕೆ ಅರೆ​‍್ಣ ಯಾಗಿದೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು. ದೋಣೆಯಿಂದ ವಿಜಯನಗರ, ಗದಗ, ಹಾವೇರಿ ಮೂರು ಜಿಲ್ಲೆಗಳ ಗ್ರಾಮಗಳಿಗೆ ಸಂಪರ್ಕ ಪಡೆದು ಕೊಂಡಿದೆ.ಇದೇ ವೇಳೆ ಮಾಗಳದ ಮುಖಂಡರಾದ ಬಿ.ಎಲ್‌.ಶ್ರೀಧರ, ಸತ್ಯನಾರಾಯಣ ರೆಡ್ಡಿ, ಹೆಚ್‌.ಕೋಟೆಪ್ಪ, ಲಕ್ಕಣ್ಣನವರ ಮಂಜುನಾಥ, ಬಸಪ್ಪ, ಆರ್‌.ಮಂಜಪ್ಪ,  ಅಲ್ಲಳ್ಳಿ ಮಂಜುನಾಥ ಇದ್ದರು.