ದೇವಾಂಗ ಕುಲ ಬಾಂಧವರಿಂದ ನೂಲ ಹುಣ್ಣಿಮೆ ಆಚರಣೆ ಸಂಭ್ರಮ
Celebration of 'Noola Hunnime' by the Devanga community members
ಲೋಕದರ್ಶನ ವರದಿ
ಯಮಕನಮರಡಿ 29 : ಸಮೀಪದ ಆನಂದಪುರ ಗ್ರಾಮದಲ್ಲಿ ದಿನಾಂಕ 28 ರಂದು ಆನಂದಪುರದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಸುಮಂಗಲಿಯರಿಂದ ಆರತಿ ಸಂಭ್ರಮ ಹಾಗೂ ನೂಲಹುಣ್ಣಿಮೆ ಆಚರಣೆ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಿತು ಈ ನೂಲ ಹುಣ್ಣಿಮೆ ನಮ್ಮ ಭಾರತದ ಸಂಸ್ಕೃತ ಸನಾತನ ಧರ್ಮದ ವಿಶಿಷ್ಟ ಹುಣ್ಣಿಮೆ ಆಗಿದ್ದು ಈ ಹುಣ್ಣಿಮೆ ದಿನದಂದು ಹಿಂದುಗಳು ಪ್ರತಿಯೊಬ್ಬರು ಜನಿವಾರ ಧರಿಸುವ ಸಂಪ್ರದಾಯವು ಅನಾದಿಕಾಲದಿಂದಲೂ ನಡೆದು ಬಂದಿರುವ ಒಂದು ವಿಶಿಷ್ಟ ಸಂಪ್ರದಾಯವನ್ನು ಮಾಡುತ್ತಾ ಬಂದಿರುವ ಒಂದು ಹಬ್ಬ ಸದರಿ ಹಬ್ಬವನ್ನು ಬ್ರಾಹ್ಮಣ ಕುಲಬಾಂಧವ ರೂಜೈನ ಕುಲಬಾಂಧವರು ಹಾಗೂ ನೇಕಾರ ಕುಲಬಾಂಧವರು ಪ್ರತಿ ವರ್ಷದ ನೂಲಹುಣ್ಣಿಮೆಗೆ ಆಚರಿಸುತ್ತ ಬಂದಿರುವ ಈ ಹಬ್ಬ ಈ ಹಬ್ಬದ ಪ್ರಯುಕ್ತ ನದಿ ತೀರಗಳನ್ನು ಪೂಜಿಸುವುದು ಪಾಧ ಯಾತ್ರೆ ಮೂಲಕ ದೇವಸ್ಥಾನಗಳಿಗೆ ಹೋಗುವ ಸಂಪ್ರದಾಯ ಇಂದಿಗೂ ರೂಢಿಯಲ್ಲಿ ಇರುತ್ತದೆ ಹಿಂದೂ ಧರ್ಮಗಳ ಸಂಕೇತವಾದ ಜನಿವಾರ ಧರಿಸುವ ಒಂದು ವಿಶಿಷ್ಟ ಸಂಪ್ರದಾಯವೆಂದು ಕರೆಯಲ್ಪಡುತ್ತದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 