ಪ್ರಕರಣ ಮುಚ್ಚಿಹಾಕಲು ಕಾಂಗ್ರೆಸ್ನಿಂದ ಒಲೈಕೆ ರಾಜಕಾರಣ: ಭರತ್ ಬೊಮ್ಮಾಯಿ

 ಪ್ರಕರಣ ಮುಚ್ಚಿಹಾಕಲು ಕಾಂಗ್ರೆಸ್ನಿಂದ ಒಲೈಕೆ ರಾಜಕಾರಣ: ಭರತ್ ಬೊಮ್ಮಾಯಿ   Congress resorts to appeasement politics to hush up the case: Bharath Bommai


ಶಿಗ್ಗಾವಿ, ಆ.29: ಆರೋಪಿ ಮೊದಲು ಕುಡಿದಿದ್ದಾನೆ ಎಂದು ಹೇಳಿ, ಬಳಿಕ ಆತನನ್ನು ಮಾನಸಿಕ ಅಸ್ವಸ್ಥ ಎಂದು ಬಿಂಬಿಸುವ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಕಾಂಗ್ರೆಸ್ ನಾಯಕರು ಒಲೈಕೆ ರಾಜಕಾರಣ ಮುಂದುವರಿಸಿದ್ದಾರೆ ಎಂದು ಬಿಜೆಪಿ ಮುಖಂಡ ಭರತ್ ಬೊಮ್ಮಾಯಿ ಆರೋಪಿಸಿದರು.  

ಪಟ್ಟಣದ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನಡೆದ ಅಮಾನವೀಯ ಘಟನೆಯ ಕುರಿತು ಪೊಲೀಸ್ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ರುದ್ರ​‍್ಪ ಲಮಾಣಿ ಹಾಗೂ ಕಾಂಗ್ರೆಸ್ ನಾಯಕರು ದಿನಕ್ಕೊಂದು ಪರಸ್ಪರ ವಿರೋಧಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ದೂರಿದರು.  

ಘಟನೆಗೆ ಸಂಬಂಧಿಸಿದಂತೆ ನಿರಪರಾಧಿಗಳು ಹಾಗೂ ಪ್ರತಿಭಟನೆ ನಡೆಸಿದ 12ಕ್ಕೂ ಹೆಚ್ಚು ಜನರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಬೆದರಿಸುವ ತಂತ್ರ ಹೆಣೆಯಲಾಗುತ್ತಿದೆ. ಕಾನೂನು ಹೋರಾಟದ ಮೂಲಕ ಇದಕ್ಕೆ ಸೂಕ್ತ ಉತ್ತರ ನೀಡಲಾಗುವುದು ಎಂದು ಹೇಳಿದರು.  

ಘಟನೆಗೆ ಕಾರಣನಾದ ಆರೋಪಿಯನ್ನು ತಕ್ಷಣವೇ ಕ್ಷೇತ್ರದಿಂದ ಗಡಿಪಾರು ಮಾಡಬೇಕು. ಈ ಸಂಬಂಧ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.  ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.