ಶ್ರೀ ಮುರುಘೇಂದ್ರ ಶಿವಯೋಗಿಗಳವರ 190ನೇ ಜಯಂತಿ ಆಚರಣೆ
Celebrating the 190th birth anniversary of Shri Murugendra Shivayogi
ಹಾವೇರಿ 30: ಇಲ್ಲಿನ ಹೊಸಮಠದಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿಗಳವರ 190ನೇ ಜಯಂತಿಯನ್ನು ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು ಇದೇ ಅವಧಿಯಲ್ಲಿ ವಚನ ಸಾಹಿತ್ಯ ಪಲ್ಲಕ್ಕಿ ಉತ್ಸವ ಜರುಗಿತು.
ಸಮಾರಂಭ ಸಾನಿಧ್ಯವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಶ್ರೀಗಳು ಮಾತನಾಡಿ ಶ್ರೀಮಠದ ಬಸವಶಾಂತಲಿಂಗ ಸ್ವಾಮಿಜಿ ಮಾತನಾಡಿ ಶೂನ್ಯದಿಂದ ಎದ್ದು ಬಂದ ಶಿವಯೋಗಿ ಪಂಚಾಂಗ.ಭವಿಷ್ಯ ಇತ್ಯಾದಿ ರುಮಾಲಶಾಸ್ತ್ರಗಳಲ್ಲಿ ಪರಿಣಿತರಲ್ಲ: ಅದು ಅವರಿಗೆ ಅಗತ್ಯವು ಇರಲಿಲ್ಲ. ಸಂದರ್ಭವನ್ನು ಅವಲೋಕಿಸುವ ಅದರೊಟ್ಟಿಗೆ ಅಭಿವ್ಯಕ್ತಿಸುವ ಧೀಶಕ್ತಿಯು ಮುರುಘೇಂದ್ರ ಶಿವಯೋಗಿಗಳಿಗೆ ಒಲಿಮೆ ಆಗಿತ್ತು. ಕಾರಣ ಪಂಚಪರುಷಗಳು ಸಿದ್ದಿಸಿದ್ದವು. ಮುರುಘೇಂದ್ರ ಶಿವಯೋಗಿಗಳಲ್ಲಿ ಸಂಕುಚಿತ ಭಾವನೆ ಅವಕಾಶ ಇರಲಿಲ್ಲ. ಗುರು-ವಿರಕ್ತರೆಂಬ ಭಿನ್ನಭಾವನೆ ಅವರಲ್ಲಿ ಸುಳಿಯಲಿಲ್ಲ. ವಿಶಾಲ ಹೃದಯ. ಸಮಾನ ದೃಷ್ಟಿಕೋನ. ಸಮಾ ಜೀವನ. ಶ್ರಮ ಜೀವನ. ಅದರಿಂದ ಶಿವಶರಣರು ಮತ್ತು ಶಿವಯೋಗಿಗಳದು ಕಲ್ಯಾಣಯುಕ್ತ ಜೀವನ. ಅನ್ಯರ ಬದುಕು ಪಾವನ. ಲೋಕ ಕಲ್ಯಾಣದಿಂದ ಜೀವನ ಪಾವನ. ಬದುಕಿಗೆ ಪವಿತ್ರತೆ ಬರುವುದೇ ಸೇವೆಯಿಂದ, ಶಿವಯೋಗಿಗಳು ದಿವ್ಯಪಥ. ಅಂದರೆ ಅಧ್ಯಾತ್ಮಪಥ ಧಾರ್ಮಿಕಪಥ. ಯೋಗಪಥ ಧ್ಯಾನಪಥ. ಧ್ಯಾನದಿಂದ ದಿವ್ಯತೆ-ಭವ್ಯತೆ ಅದರಿಂದಾಗಿ ಅವರು ದಿವ್ಯ ಮಾನವರು. ಲೋಕಮಾನ್ಯ ಬಾಲಗಂಗಾಧರ್ ತಿಲಕರು ಭೇಟಿಯಾದಾಗ ಭಾರತಕ್ಕೆ ಸ್ವಾತಂತ್ರ್ಯ ದೊರೆಯುತ್ತದೆಂದು ಹಾರೈಸುತ್ತಾರೆ ಎಂದರು
ಬಣ್ಣದಮಠದ ಅಭಿನವರುದ್ರ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿಗಳು. ಅಗಡಿಯ ಅಕ್ಕಿಮಠದ ಗುರುಲಿಂಗ ಸ್ವಾಮಿಗಳು ಭಾಗವಹಿಸಿ ಮಹಾತ್ಮ ಸ್ಮರಣೆ ಮಾಡಬೇಕು ಎಂದು ತಿಳಿಸಿದರು. ನೂತನವಾಗಿ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ಆಯೋಗದ ಸದಸ್ಯರಾದ ಪರಿಮಳ ಜೈನ ಅವರಿಗೆ ಸನ್ಮಾನಿಸಲಾಯಿತು. ನಾಗೇಂದ್ರ ಕಟಕೋಳ. ಪರಮೇಶಪ್ಪ ಮೆಗಳ, ಮನಿರುದ್ರೇಶ್ ಚಿನ್ನಣ್ಣನವರ, ದಯಾನಂದ ಯಡ್ರಾಮಿ, ಜಯದೇವ ಕೆರೂಡಿ ಮತ್ತು ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 