62ನೇ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಗ್ರಾಮ ಪಂ. ಅಧ್ಯಕ್ಷ ಮಹಾದೇವ ಪಟೋಳಿ

62ನೇ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಗ್ರಾಮ ಪಂ. ಅಧ್ಯಕ್ಷ ಮಹಾದೇವ ಪಟೋಳಿ Celebrating his 62nd birthday, former Gram Pt. President Mahadev Patoli

ಲೋಕದರ್ಶನ ವರದಿ 

ಯಮಕನಮರಡಿ 27 : ಸಮೀಪದ ಹತ್ತರಗಿ ಮಾಜಿ ಗ್ರಾಮ ಪಂ ಅಧ್ಯಕ್ಷ ಹಾಗೂ ಆನಂದಪುರ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಹಾದೇವ ಪಟೋಳಿ ಅವರು ತಮ್ಮ 62ನೇ ಹುಟ್ಟುಹಬ್ಬವನ್ನು ಯಮಕನಮರಡಿ ಹತ್ತರಗಿ ಹರಿ ಮಂದಿರದಲ್ಲಿ ಪೂಜ್ಯರಾದ ಡಾ. ಆನಂದ ಮಹಾರಾಜ ಗೋಸಾವಿ ಅವರ ಸನ್ನಿಧಾನದಲ್ಲಿ ದಿನಾಂಕ 26ರಂದು ತಮ್ಮ ಬಳಗದೊಂದಿಗೆ 62ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಸದರಿಯವರು ಹತ್ತರಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಎರಡು ವರ್ಷ ಎರಡು ಬಾರಿ ಸೇವೆ ಸಲ್ಲಿಸಿ ಅಪಾರ ಅಭಿವೃದ್ಧಿ ಕಾರ್ಯ ಮಾಡುವಲ್ಲಿ ಯಶಸ್ವಿ ಯಾಗಿದ್ದಾರೆ ಜೊತೆಗೆ ಅವರು ಶಿಕ್ಷಣ ಪ್ರೇಮಿಗಳು ಆಗಿದ್ದರು. ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸಲು ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವದು ಹೆಮ್ಮೆಪಡುವ ಸಂಗತಿಯಾಗಿದೆ. ಇವರ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶಿಕ್ಷಣ ಬಗ್ಗೆ ಶಿಕ್ಷಣ ಬಗ್ಗೆ ಹೆಚ್ಚಿನ ಪ್ರಯತ್ನ ಮಾಡುತ್ತಿರುವು ಹೆಮ್ಮೆ ಪಡುವಂತಾಗಿದೆ ಎಂದು ಪೂಜ್ಯರಾದ ಆನಂದ ಮಹಾರಾಜ ಗೋಸಾವಿ ಅವರು ಆಶೀರ್ವದಿಸಿ ಸನ್ಮಾನಿಸಿದರು.