ಸರ್ವರಿಗೂ ಶಿಕ್ಷಣ, ಉದ್ಯೋಗದ ಹಕ್ಕಿಗಾಗಿ, ವಿದ್ಯಾರ್ಥಿ ಸಮುದಾಯದ ಐಕ್ಯತೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಎಸ್‌ಎಫ್‌ಐ ಚಳುವಳಿಗೆ 56ರ ಸಂಭ್ರಮ -ಬಸವರಾಜ

ಸರ್ವರಿಗೂ ಶಿಕ್ಷಣ, ಉದ್ಯೋಗದ ಹಕ್ಕಿಗಾಗಿ, ವಿದ್ಯಾರ್ಥಿ ಸಮುದಾಯದ ಐಕ್ಯತೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಎಸ್‌ಎಫ್‌ಐ ಚಳುವಳಿಗೆ 56ರ ಸಂಭ್ರಮ -ಬಸವರಾಜ Celebrating 56 years of SFI movement, which has been working tirelessly for the right to education a

                ಹಾವೇರಿ 30 : ಸರ್ವರಿಗೂ ಶಿಕ್ಷಣ, ಉದ್ಯೋಗ ಮೂಲಭೂತ ಹಕ್ಕಿಗಾಗಿ, ಸಮಸಮಾಜದ ನಿರ್ಮಾಣಕ್ಕಾಗಿ, ವಿದ್ಯಾರ್ಥಿ ಸಮುದಾಯದ ಐಕ್ಯತೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಎಸ್‌ಎಫ್‌ಐ ವಿದ್ಯಾರ್ಥಿ ಚಳುವಳಿಯು 56 ವರ್ಷದ ಸಂಭ್ರಮಾಚರಣೆಯಲ್ಲಿದೆ ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಹೇಳಿದರು.ಎಸ್‌ಎಫ್‌ಐ ವಿದ್ಯಾರ್ಥಿ ಚಳುವಳಿಗೆ 56 ರ ಸಂಭ್ರಮಾಚರಣೆ ಪ್ರಯುಕ್ತ ನಗರದ ಶಿವಾಜಿ ನಗರ 2ನೇ ಕ್ರಾಸ್ ನಲ್ಲಿರುವ ಎಸ್‌ಎಫ್‌ಐ ಕಚೇರಿ ಎದುರು ಶೇತಾ ಪತಾಕೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ದೇಶದ ಉದ್ದಗಲಕ್ಕೂ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾಜವಾದ ಆಸಯಗಳಿಗಾಗಿ ಎಸ್‌ಎಫ್‌ಐ 56 ವಸಂತಕಾಲ ನಿರಂತರ ಹೋರಾಡುತ್ತಿರುವ ಏಕೈಕ ವಿದ್ಯಾರ್ಥಿ ಸಂಘಟನೆಯಾಗಿದೆ ಎಂದರು.

               ಎಸ್‌ಎಫ್‌ಐ ಹಲವಾರು ಸಮಸ್ಯೆಗಳನ್ನು ಇಟ್ಟುಕೊಂಡು ನಿರಂತರ ಹೋರಾಟ ಮಾಡುತ್ತಾ 56 ವರ್ಷಗಳ ಕಾಲ ವಿದ್ಯಾರ್ಥಿ-ಯುವಜನರ ಮದ್ಯ ಚಳುವಳಿ ಸಂಘಟಿಸುತ್ತಾ ತ್ಯಾಗ ಬಲಿದಾನದ ಮೂಲಕ ದೇಶದ ಸೌಹಾರ್ದತೆ, ಸಾಮರಸ್ಯ, ಶಿಕ್ಷಣದ ಉಳಿವಿಗಾಗಿ, ಹೋರಾಟ ನಡೆಸಿದೆ. ಸ್ವಾತಂತ್ರ್ಯ ಭಾರತದಿಂದ ಇಲ್ಲಿಯವರೆಗೂ ದೇಶದ ಮೂಲ ಸಮಸ್ಯೆಗಳ ವಿರುದ್ಧ ಹೋರಾಡುತ್ತಾ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ಹಾಗೂ ದೇಶದ ಉಳಿವಿಗಾಗಿ ಎಸ್‌ಎಫ್‌ಐ ಹೋರಾಟ ಪ್ರಮುಖ ಪಾತ್ರವಹಿಸಿದೆ. ಶಿಕ್ಷಣವು ಉಳ್ಳವರ ಶಿಕ್ಷಣವಂತಾಗದೆ ಎಲ್ಲರಿಗೂ ಸಿಗುವಂತಾಗಲಿ ವಿದ್ಯಾರ್ಥಿಗಳು ಸಮಾಜವನ್ನು ಅಧ್ಯಯನ ಮಾಡುವ ಮೂಲಕ ಭಗತ್ ಸಿಂಗ್ ಕಂಡ ಕನಸನ್ನು ನನಸ್ಸು ಮಾಡಬೇಕು. 23ನೇ ಎಳೆಯ ವಯಸ್ಸಿನಲ್ಲಿಯೇ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್ ಸಿಂಗ್, ಹಾವೇರಿ ನೆಲದ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವಪ್ಪರ ಜೀವನ ಚರಿತ್ರೆಯನ್ನು ಓದಿ ವಿದ್ಯಾರ್ಥಿ - ಯುವಜನರು ಅರಿವಾಗಿ ಇಟ್ಟುಕೊಳ್ಳಬೇಕು ಎಂದರು.

              ವಿದ್ಯಾರ್ಥಿ - ಯುವಜನರು ದೇಶದ ಅಭಿವೃದ್ಧಿಗೆ ಶ್ರಮಿಸವಹಿಸಬೇಕಾಗಿದೆ. ದೇಶ ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ ಆದರಿಂದ ವಿದ್ಯಾರ್ಥಿಗಳ ಓದುವ ಕಡೆ ಹೆಚ್ಚು ನಿಗ ವಹಿಸಬೇಕು ಪಠ್ಯ ಪುಸ್ತಕಗಳನ್ನು ಅಭ್ಯಾಸ ಮಾಡುವ ಜೊತೆಗೆ ಸಾಮಾಜಿಕ ಚಿಂತನೆ ಮಾಡಬೇಕು. ಅನ್ಯಾಯದ ವಿರುದ್ಧ ಹೋರಾಡಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ಹಾಗೂ ಭಗತ್ ಸಿಂಗ್ ರ ಜೀವನ ಚರಿತ್ರೆ ಅರಿಯಬೇಕು. ಹೋರಾಟ ಮಾಡದೆ ಯಾವುದೇ ಸೌಲಭ್ಯಗಳು ಸಾಮನ್ಯವಾಗಿ ದೊರಕುವುದಿಲ್ಲ ಹಾಗಾಗಿ ಅಭ್ಯಾಸ ಮತ್ತು ಹೋರಾಟವನ್ನು ಮುಂದುವರಿಸಲು ವಿದ್ಯಾರ್ಥಿಗಳ ಎಸ್‌ಎಫ್‌ಐ ಸೇರಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಮುಖಂಡ ಅರುಣ್ ನಗವತ್, ಚೈತ್ರಾ ಕೋರವಾರ, ಪದ್ಮ ಜಾಲಮ್ಮನವರ, ಫಕ್ಕಿರೇಶ್ ಮ್ಯಾಗಳಮನಿ, ಸುದೀಪ್ ಲಮಾಣಿ , ಅರ್ಜುನ್ ಲಮಾಣಿ, ಸಂಜೀವ್ ಕೆ, ಮರಿಯಮ್ಮ , ಪದ್ಮ ಹರಿಜನ, ಮೈತ್ರಿ ಹರಿಜನ, ರಕ್ಷಿತಾ ತಳವಾರ್, ಅಮೂಲ್ಯ ಸಂಗೂರು, ಮಹೇಶ್ವರಿ ಎನ್, ಮಂಜುಳಾ ಎಸ್,ಭೂಮಿಕಾ ಹರಿಜನ, ಅಶ್ವಿನೀ ಹರಿಜನ, ಸಾವಿತ್ರಿ ವಾಲ್ಮೀಕಿ, ಕಾವ್ಯ ಹರಿಜನ, ಶ್ರೇಯಸ್ ಎಂ, ಮಣಿಕಂಠ ಪಾಟೀಲ್, ಬಾಲ  ಸಂಘಂನ ಧನುಸ್ ದೊಡ್ಡಮನಿ, ತೇಜಸ್ ಎನ್ ಡಿ, ಶಾಹೀದ್ ಡಿ, ಹಮಜಾ ವಾಲಿಕಾರ, ಅಯಾನ್ ಎಂ , ಮೈನುದ್ದೀನ್ ಇಲ್ಲಿಬುಡಿ,  ತೋಹಾ ಪಾಲ್ಗೊಂಡಿದ್ದರು.