ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಿ: ರಾಕೇಶ್ ಬಗಲಿ

ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಿ: ರಾಕೇಶ್ ಬಗಲಿ Celebrate the festival peacefully: Rakesh Bagali

ಇಂಡಿ 17: ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಶ್ರೀ ಮರುಳಸಿದ್ದೇಶ್ವರ ಜಾತ್ರೆ ನಿಮಿತ್ತವಾಗಿ ಹಾಗೂ ಗಣೇಶ ಚತುರ್ಥಿ  ಹಬ್ಬವನ್ನು ಶಾಂತಿ ಸೌಹಾರ್ದತೆಯೊಂದಿಗೆ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಆಚರಿಸಿ ಎಂದು ಹೋರ್ತಿ ಪೋಲಿಸ್ ಠಾಣೆಯ ಪಿಎಸ್‌ಐ ರಾಕೇಶ್ ಬಗಲಿ ಹೇಳಿದರು. 

ಅವರು ಇಂದು ರವಿವಾರ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಶ್ರೀ ಮರುಳಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು, ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಚತುರ್ಥಿ ಹಬ್ಬದ ಆಚರಣೆ ನಿಮಿತ್ತ ಶಾಂತಿ ಪಾಲನಾ ಸಭೆಯ ಉದ್ದೇಶಿ ಮಾತನಾಡಿದ ಪಿ.ಎಸ್‌.ಐ. ರಾಕೇಶ್ ಬಗಲಿ ಅವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಮರುಳಸಿದ್ದೇಶ್ವರ ಜಾತ್ರೆಯ ನಿಮಿತ್ಯವಾಗಿ ನಡಿಯುವ ಪಲ್ಲಕ್ಕಿ ಉತ್ಸವ ಹಾಗೂ ಗೀ ಗೀ ಪದಗಳು ಕುಸ್ತಿ ಹಾಗೂ ನಾಟಕ ಪ್ರದರ್ಶನ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಶಾಂತಿಯುತವಾಗಿ ಸೂಕ್ತ ಪೋಲಿಸ್ ಬಂದು ಬಸ್ತ ನೀಡಲಾಗುವುದು ಹಾಗೂ ಗಜಾನನ ಪ್ರತಿಷ್ಠಾನ ಕ್ಕಿಂತ ಮುಂಚೆ ಪಂಚಾಯಿತಿಯಿಂದ ಹಾಗೂ ನಮ್ಮ ಪೋಲಿಸ್ ಇಲಾಖೆಯಿಂದ ಅನುಮತಿ ಪಡೆದುಕೊಂಡು ಪ್ರತಿಷ್ಠಾಪನೆ ಮಾಡಿ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಿ ಹಾಗೂ ಒಳ್ಳೆಯ ಪರಿಸರಕ್ಕೆ ಹಾನಿಯಾಗದಂತ ಗಣಪತಿಗಳನ್ನು ಕೂಡಿಸಿ ಪರಿಸರವನ್ನು ನೋಡಿಕೊಳ್ಳಿ ಎಂದು ಹೇಳಿದರು. 

ಈ ಸಂದರ್ಭದಲ್ಲಿ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುನಂದಾ ವಾಲಿಕಾರ, ಗ್ರಾಮದ ಹಿರಿಯರಾದ ಅಶೋಕ ಮಿರ್ಜಿ, ರವಿ ಮಸಳಿ, ಸಚೀನ ಇಂಡಿ, ಚನ್ನಪ್ಪ ಮಿರಗಿ, ಕಾಮಣ್ಣ ಮಿರ್ಜಿ, ಧರೇಪ್ಪ ಮೇತ್ರಿ, ಶಿವಶಂಕರ ಹಿಳ್ಳಿ,  ನಿಂಗಪ್ಪ ಗಬ್ಬೂರ, ಚಿದಾನಂದ ಮದರಿ, ಶರಣು ಮಸಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.