ಹಬ್ಬಗಳನ್ನು ಶಾಂತಿ- ಸೌಹಾರ್ದತೆಯಿಂದ ಆಚರಿಸಿ: ಸಿಪಿಐ ಮೊ. ಫಸಿಯುದ್ದೀನ
Celebrate festivals with peace and harmony: CPI's Fasiuddin
ತಾಳಿಕೋಟಿ 23: ಆಗಸ್ಟ್ 27 ಮತ್ತು ಸೆಪ್ಟಂಬರ್ 5 ರಂದು ನಡೆಯಲಿರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಪಟ್ಟಣದಲ್ಲಿ ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಬಾರದ ಹಾಗೆ ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಣೆ ಮಾಡಬೇಕೆಂದು ಮುದ್ದೇಬಿಹಾಳ ಸಿಪಿಐ ಮೊಹಮ್ಮದ್ ಫಸಿಯುದ್ದೀನ ಹೇಳಿದರು.
ಶನಿವಾರ ಪಟ್ಟಣದ ವಿಠ್ಠಲ ಮಂದಿರದಲ್ಲಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಕರೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಲಾಖೆಯ ನಿಯಮಾವಳಿಗಳನ್ನು ತಿಳಿಸಿ ಹಬ್ಬಗಳನ್ನು ಶಾಂತ ರೀತಿಯಿಂದ ನಡೆಸಲು 2ರಿಂದ 3 ಸಭೆಗಳನ್ನು ಮಾಡುತ್ತಿದ್ದೇವೆ ಇದು ನಿಮ್ಮ ಅನುಕೂಲಕ್ಕಾಗಿ ಇಲಾಖೆಯೊಂದಿಗೆ ಸಹಕರಿಸಿ ಇಲಾಖೆ ಸಂಪೂರ್ಣ ನಿಮಗೆ ಸಹಕಾರ ನೀಡುತ್ತದೆ ಎಂದರು.
ಗ್ರೇಡ್-2 ತಹಸಿಲ್ದಾರ್ ಪ್ರದೀಪ್ ದೇವಗಿರಿ ಮಾತನಾಡಿ ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು ವಿವಿಧತೆಯಲ್ಲಿ ಏಕತೆ ನಮ್ಮ ಗುರುತಾಗಿದೆ. ನಾವೆಲ್ಲರೂ ವಿವಿಧ ಜಾತಿ ಧರ್ಮದವರಾಗಿದ್ದರೂ ಪರಸ್ಪರ ಸಹೋದರರಂತೆ ಇಲ್ಲಿ ಬಾಳುತ್ತಿದ್ದೇವೆ ಹೀಗಾಗಿ ಎಲ್ಲರೂ ಒಂದಾಗಿ ಸಾಮರಸ್ಯದಿಂದ ಹಬ್ಬಗಳನ್ನು ಆಚರಿಸಿ ಎಂದರು.
ಪಿ.ಎಸ್.ಐ.ಜ್ಯೋತಿ ಖೋತ ಅವರು ಮಾತನಾಡಿ ಇಲಾಖೆ ಇಂದಿನಿಂದಲೇ ಏಕಗವಾಕ್ಸಿ ಪರವಾನಗಿಯ ವ್ಯವಸ್ಥೆ ಆರಂಭಿಸಲಿದೆ ಆದಷ್ಟು ಬೇಗ ಮಂಡಳಿಯವರು ಸಂಬಂಧಿಸಿದ ದಾಖಲೆ ಪತ್ರಗಳನ್ನು ನೀಡಿ ಪರವಾಗಿ ಪಡೆದುಕೊಳ್ಳಬೇಕು ಎಂದರು.
ಪುರಸಭೆ ಹಿರಿಯ ಆರೋಗ್ಯ ನೀರೀಕ್ಷಕ ಫೀರೋಜ ಮುಲ್ಲಾ ಹಾಗೂ ಹೆಸ್ಕಾಂನ ಗುರಡ್ಡಿ ಅವರು ಇಲಾಖೆಯಿಂದ ಮಾಡಿಕೊಂಡ ವ್ಯವಸ್ಥೆಗಳನ್ನು ಸಭೆಗೆ ತಿಳಿಸಿದರು.
ಗಣೇಶ್ ಪ್ರತಿಷ್ಠಾಪನಾ ಮಂಡಳಿಯ ರಾಘವೇಂದ್ರ ವಿಜಾಪುರ, ನಾಗರಾಜ ಬಳಿಗಾರ, ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ, ಹಿರಿಯ ಪತ್ರಕರ್ತ ಜಿ.ಟಿ.ಘೋರೆ್ಡ ಹಾಗೂ ಸಾಮಾಜಿಕ ಕಾರ್ಯಕರ್ತ ಹುಸೇನ್ ಪಟೇಲ ಮಾತನಾಡಿದರು.
ಸಭೆಯಲ್ಲಿ ಗಣ್ಯರಾದ ಸಂಭಾಜಿರಾವ್ ವಾಡ್ಕರ್, ಎಂ.ಕೆ.ಚೋರಗಸ್ತಿ, ತಮ್ಮಣ್ಣ ದೇಶಪಾಂಡೆ, ಸಿಕಂದರ ವಠಾರ, ಜೈಭೀಮ ಮುತ್ತಗಿ, ಜೈಸಿಂಗ್ ಮೂಲಿಮನಿ, ಫಯಾಜ್ ಉತ್ನಾಳ, ಆರೀಫ ಹೊನ್ನುಟಗಿ, ಶಫೀಕ ಇನಾಮದಾರ, ರಾಘು ಮಾನೆ, ಆಸೀಫ ಕೆಂಭಾವಿ, ಗಣೇಶ ಪ್ರತಿಷ್ಠಾಪನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 